ಮಲ್ಯ ನಂತರ ಚೋಕ್ಸಿ ಕೂಡ ನಾನು ಅಪರಾಧಿಯಲ್ಲ ಎಂದ

By Web DeskFirst Published 12, Sep 2018, 9:37 PM IST
Highlights

ಕೇವಲ ಒಂದು ವಾರದ ಅವಧಿಯಲ್ಲಿ ನನ್ನ ಎಲ್ಲ ಸಂಸ್ಥೆಗಳನ್ನೂ ಮುಚ್ಚಲಾಗಿದ್ದು, ನನ್ನ 6 ಸಾವಿರ ಮಂದಿ ಉದ್ಯೋಗಿಗಳು ನಿರುದ್ಯೋಗಿಗಳಾಗಿದ್ದಾರೆ. ಷೇರುದಾರರು ಕೂಡ ಬೀದಿಗೆ ಬಂದಿದ್ದು, ಇದಕ್ಕೆ ಕೇಂದ್ರ ಸರ್ಕಾರವೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾನೆ. 

ನವದೆಹಲಿ[ಸೆ.12]: ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ಕೋಟಿ ಕೋಟಿ ವಂಚಿಸಿ ದೇಶ ತೊರೆದಿರುವ ಮೆಹುಲ್ ಚೋಕ್ಸಿ, ಮೊದಲ ಬಾರಿಗೆ ಸುದ್ದಿ ಸಂಸ್ಥೆಯೊಂದಕ್ಕೆ ವಿಡಿಯೋ ಸಂದರ್ಶನ ನೀಡಿ, ನಾನು ಯಾವುದೇ ತಪ್ಪು ಮಾಡಿಲ್ಲ.. ಆದರೂ ಕೇಂದ್ರ ಸರ್ಕಾರ ನನ್ನ ಕ್ರಮ ಕೈಗೊಳ್ಳುತ್ತಿದೆ ಎಂದು ಆರೋಪ ಮಾಡಿದ್ದಾನೆ.

ಕೇವಲ ಒಂದು ವಾರದ ಅವಧಿಯಲ್ಲಿ ನನ್ನ ಎಲ್ಲ ಸಂಸ್ಥೆಗಳನ್ನೂ ಮುಚ್ಚಲಾಗಿದ್ದು, ನನ್ನ 6 ಸಾವಿರ ಮಂದಿ ಉದ್ಯೋಗಿಗಳು ನಿರುದ್ಯೋಗಿಗಳಾಗಿದ್ದಾರೆ. ಷೇರುದಾರರು ಕೂಡ ಬೀದಿಗೆ ಬಂದಿದ್ದು, ಇದಕ್ಕೆ ಕೇಂದ್ರ ಸರ್ಕಾರವೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾನೆ. ಜಾರಿ ನಿರ್ದೇಶನಾಲಯ ಮಾಡಿರುವ ಆರೋಪಗಳೆಲ್ಲವೂ ಸುಳ್ಳು ಹಾಗೂ ಆಧಾರ ರಹಿತ. 

ಇಡಿ ಮಾಡಿರುವ ಆರೋಪದಲ್ಲಿ ಯಾವುದೇ ಸತ್ಯಾಂಶಗಳೇ ಇಲ್ಲ. ಕಾನೂನು ಬಾಹಿರವಾಗಿ ನನ್ನ ಆಸ್ತಿಯನ್ನು ಇಡಿ ವಶಕ್ಕೆ ಪಡೆದುಕೊಂಡಿದೆ ಎಂದಿದ್ದಾನೆ. ಜೊತೆಗೆ ಮೆಹುಲ್ ಬ್ಯಾಂಕಿಗೆ ವಂಚಿಸಿರುವ 3250 ಕೋಟಿ ರೂ. ಹಣವನ್ನು ವಿದೇಶದಲ್ಲಿ ಹೂಡಿಕೆ ಮಾಡಿದ್ದಾಗಿ ಇಡಿ ತನಿಖೆ ವೇಳೆ ತಿಳಿದು ಬಂದಿದೆ.

 

Last Updated 19, Sep 2018, 9:24 AM IST