ಲೋಕಸಭಾ ಚುನಾವಣೆ ಬೆನ್ನಲ್ಲೇ 6 ನಾಯಕರು ವಜಾ

By Web DeskFirst Published Jun 3, 2019, 1:21 PM IST
Highlights

ಲೋಕಸಭಾ ಚುನಾವಣೆ ಫಲಿತಾಂಶದಲ್ಲಿ ಕಳಪೆ ಸಾಧನೆ ಮಾಡಿದ ಹಿನ್ನೆಲೆಯಲ್ಲಿ ಬಿಎಸ್ ಪಿ ನಾಯಕಿ ತಮ್ಮ ಪಕ್ಷದ 6 ನಾಯಕರಿಗೆ ಹುದ್ದೆಯಿಂದ ಗೇಟ್ ಪಾಸ್ ನೀಡಿದ್ದಾರೆ. ಯಾರು ನಾಯಕರು..? 

ಲಖನೌ: ಲೋಕಸಭಾ ಚುನಾವಣೆಯಲ್ಲಿನ ಬಿಎಸ್ಪಿಯ ಕಳಪೆ ಸಾಧನೆ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಮಾಜಿ ಸಿಎಂ ಹಾಗೂ ಬಿಎಸ್ಪಿ ವರಿಷ್ಠೆ ಮಾಯಾವತಿ 6 ರಾಜ್ಯಗಳ ಉಸ್ತುವಾರಿ ಹಾಗೂ ಎರಡು ರಾಜ್ಯಗಳ ಪಕ್ಷದ ಅಧ್ಯಕ್ಷರನ್ನೇ ವಜಾಗೊಳಿಸಿದ್ದಾರೆ.

ಉತ್ತರಾಖಂಡ, ಬಿಹಾರ, ಜಾರ್ಖಂಡ್, ಒಡಿಶಾ, ಗುಜರಾತ್ ಮತ್ತು ರಾಜಸ್ಥಾನಗಳ ಉಸ್ತುವಾರಿಗಳನ್ನು ಬದಲಿಸಿದೆ.

ದೆಹಲಿ ರಾಜ್ಯಕ್ಕೆ ಲಕ್ಷ್ಮಣ ಸಿಂಗ್, ಮಧ್ಯಪ್ರದೇಶದಲ್ಲಿ ರಮಾಕಾಂತ್ ಪುಟ್ಟಲ್ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶಿಸಿದ್ದಾರೆ. 

ಲೋಕಸಭಾ ಚುನಾವಣೆಯಲ್ಲಿ ದೇಶದಲ್ಲಿ ಬಿಜೆಪಿ ನೇತೃತ್ವದ ಎನ್ ಡಿ ಎ ಮೈತ್ರಿಕೂಟ ಭರ್ಜರಿ ಜಯಭೇರಿ ಭಾರಿಸಿ ಅಧಿಕಾರ ಚುಕ್ಕಾಣಿ ಹಿಡಿದಿದೆ.  ಕಳಪೆ ಸಾಧನೆಯಿಂದ ಕಂಗೆಟ್ಟ ಮಾಯಾ ನಾಯಕರಿಗೆ ಗೇಟ್ ಪಾಸ್ ನೀಡಿದ್ದಾರೆ. 

click me!