ಮೇ 29ರಂದು ಕೇರಳಕ್ಕೆ ಮುಂಗಾರು ಆಗಮನ: ಹವಾಮಾನ ಇಲಾಖೆ

First Published May 25, 2018, 9:48 AM IST
Highlights

ನೈಋುತ್ಯ ಮುಂಗಾರಿನ ಆಗಮನಕ್ಕೆ ಪರಿಸ್ಥಿತಿ ಅನುಕೂಲಕರವಾಗಿದ್ದು, ಇನ್ನೊಂದು ದಿನದಲ್ಲಿ ದಕ್ಷಿಣ ಅಂಡಮಾನ್‌ ಸಮುದ್ರವನ್ನು ಮುಂಗಾರು ಪ್ರವೇಶಿಸಲಿದೆ.

ನವದೆಹಲಿ: ನೈಋುತ್ಯ ಮುಂಗಾರಿನ ಆಗಮನಕ್ಕೆ ಪರಿಸ್ಥಿತಿ ಅನುಕೂಲಕರವಾಗಿದ್ದು, ಇನ್ನೊಂದು ದಿನದಲ್ಲಿ ದಕ್ಷಿಣ ಅಂಡಮಾನ್‌ ಸಮುದ್ರವನ್ನು ಮುಂಗಾರು ಪ್ರವೇಶಿಸಲಿದೆ.

ಅರಬ್ಬೀ ಸಮುದ್ರದಲ್ಲಿ ಚಂಡಮಾರುತ ಉಂಟಾಗಿದ್ದರಿಂದ ಮುಂಗಾರು ವಿಳಂಬವಾಗಬಹುದು ಎಂಬ ಆತಂಕ ದೂರವಾಗಿದೆ. ‘ಮೆಕುನು’ ಚಂಡಮಾರುತ ಮುಂದಿನ 24 ಗಂಟೆಗಳಲ್ಲಿ ತೀವ್ರ ಸ್ವರೂಪ ಪಡೆದುಕೊಳ್ಳಲಿದ್ದು, ವಾಯುವ್ಯ ದಿಕ್ಕಿನತ್ತ ಚಲಿಸುವ ಕಾರಣ ಅಂಡಮಾನ್‌ ಮತ್ತು ಲಕ್ಷದ್ವೀಪ ಸಮುದ್ರದ ಮೇಲೆ ಪ್ರತಿಕೂಲ ಪರಿಣಾಮ ಬೀರುವುದಿಲ್ಲ. 

ಈ ಹಿಂದೆ ತಿಳಿಸಿದಂತೆ ಕೇರಳಕ್ಕೆ ಮೇ 29ರಂದು ಮುಂಗಾರು ಮಾರುತಗಳು ಆಗಮಿಸಲಿವೆ. ಈ ಬಾರಿ ದೇಶದಲ್ಲಿ ಜೂನ್‌ನಿಂದ ಸೆಪ್ಟೆಂಬರ್‌ ಅವಧಿಯಲ್ಲಿ ಸಾಮಾನ್ಯ ಮುಂಗಾರಿನ ಶೇ.97ರಷ್ಟುಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ

click me!