ಬಾಡಿಗೆ ತಾಯಿಯರಿಗೂ ಹೆರಿಗೆ ರಜೆ: ಕೇಂದ್ರದ ಅಧಿಕೃತ ಸುತ್ತೋಲೆ

By Suvarna Web DeskFirst Published Feb 9, 2018, 10:02 AM IST
Highlights

ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆದುಕೊಂಡ ಉದ್ಯೋಗಸ್ಥ ಮಹಿಳೆಯರೂ ಹೆರಿಗೆ ರಜೆ ಪಡೆಯಲು ಅರ್ಹರೆಂದು ಕೇಂದ್ರ ಸರ್ಕಾರ ಆದೇಶಿಸಿದೆ.

ನವದೆಹಲಿ: ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆದುಕೊಂಡ ಉದ್ಯೋಗಸ್ಥ ಮಹಿಳೆಯರೂ ಹೆರಿಗೆ ರಜೆ ಪಡೆಯಲು ಅರ್ಹರೆಂದು ಕೇಂದ್ರ ಸರ್ಕಾರ ಆದೇಶಿಸಿದೆ.

ಈ ಸಂಬಂಧ ಸಿಬ್ಬಂದಿ ಸಚಿವಾಲಯ ಅಧಿಕೃತ ಆದೇಶವೊಂದನ್ನು ಜಾರಿಗೊಳಿಸಿದೆ. ಇದರಿಂದಾಗಿ ಜೈವಿಕವಾಗಿ ಮಕ್ಕಳನ್ನು ಹೆತ್ತ ತಾಯಂದಿರಿಗೆ ಸಿಕ್ಕಂತೆಯೇ, ಬಾಡಿಗೆ ತಾಯ್ತುನದ ಮೂಲಕ ಮಕ್ಕಳನ್ನು ಪಡೆದುಕೊಂಡವರಿಗೂ 26 ವಾರಗಳ (180 ದಿನಗಳು) ಪಾವತಿ ರಜೆ ಸಿಗಲಿದೆ.

ಕೇಂದ್ರೀಯ ವಿದ್ಯಾಲಯ ಶಿಕ್ಷಕಿಯೊಬ್ಬರು ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳನ್ನು ಪಡೆದುಕೊಂಡಿದ್ದರು. ಆದರೆ ಅವರು ಜೈವಿಕವಾಗಿ ಮಕ್ಕಳನ್ನು ಹೆತ್ತಿಲ್ಲ ಎಂದು ಹೆರಿಗೆ ರಜೆ ನಿರಾಕರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಅವರು ಕೋರ್ಟ್‌ ಮೆಟ್ಟಿಲು ಏರಿದ್ದರು. ಕೋರ್ಟ್‌ ಶಿಕ್ಷಕಿ ಪರವಾಗಿ ತೀರ್ಪು ನೀಡಿತ್ತು. ಈ ಆದೇಶವನ್ನು ಪರಿಗಣಿಸಿ ಸರ್ಕಾರ ಇದೀಗ ಆದೇಶ ಹೊರಡಿಸಿದೆ.

click me!