ದಲಿತ ಅಂತರ್ಜಾತಿ ವಿವಾಹಕ್ಕೆ 2. 5 ಲಕ್ಷ ರೂ. ಸಹಾಯಧನ

By Suvarna Web DeskFirst Published Dec 7, 2017, 2:55 PM IST
Highlights

ದಲಿತ ಅಂತರ್ ಜಾತಿ ವಿವಾಹವಾಗುವ ಎಲ್ಲಾ ದಂಪತಿಗೂ 2.5 ಲಕ್ಷ ರು. ಆರ್ಥಿಕ ಸಹಾಯಧನ ನೀಡುವುದಾಗಿ ಕೇಂದ್ರ ಸರ್ಕಾರ ಪ್ರಕಟಿಸಿದೆ.

ನವದೆಹಲಿ(ಡಿ.7): ದಲಿತ ಹುಡುಗ ಅಥವಾ ಹುಡುಗಿಯ ಅಂತರ್ ಜಾತಿ ವಿವಾಹಕ್ಕೆ ಪ್ರೋತ್ಸಾಹ ಧನ ನೀಡಲು ಇದ್ದ ವಾರ್ಷಿಕ 5 ಲಕ್ಷ ರು. ಆದಾಯ ಮಿತಿಯನ್ನು ಕೇಂದ್ರ ಸರ್ಕಾರ ತೆಗೆದುಹಾಕಿದೆ. ದಲಿತ ಅಂತರ್ ಜಾತಿ ವಿವಾಹವಾಗುವ ಎಲ್ಲಾ ದಂಪತಿಗೂ 2.5 ಲಕ್ಷ ರು. ಆರ್ಥಿಕ ಸಹಾಯಧನ ನೀಡುವುದಾಗಿ ಪ್ರಕಟಿಸಿದೆ.

ಸರ್ಕಾರ ಪ್ರತಿ ವರ್ಷ ಅಂತರ್ ಜಾತಿ ವಿವಾಹವಾಗುವ 500 ದಂಪತಿಗಳಿಗೆ ಆರ್ಥಿಕ ಸಹಾಯಧನ ನೀಡುತ್ತಿದೆ. ನಿಯಮದ ಪ್ರಕಾರ ದಂಪತಿಯ ಆದಾಯ ವಾರ್ಷಿಕ  5 ಲಕ್ಷ ರು. ಮೀರುವಂತಿಲ್ಲ. ಹೀಗಾಗಿ 2015 - 16ರಲ್ಲಿ 72 ದಂಪತಿಗಳಿಗೆ ಮಾತ್ರ ಆರ್ಥಿಕ ಸಹಾಯಧನ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ 5 ಲಕ್ಷ ರು. ಆದಾಯ ಮಿತಿ ರದ್ದು ನಿರ್ಧಾರ ಕೈಗೊಂಡಿದೆ.

click me!