ಪ್ರಿಯಕರನ ಮರ್ಮಾಂಗಕ್ಕೆ ಕತ್ತರಿ ಹಾಕಿದ ವಿವಾಹಿತ ಮಹಿಳೆ!

Published : Nov 11, 2018, 04:00 PM ISTUpdated : Nov 11, 2018, 04:04 PM IST
ಪ್ರಿಯಕರನ ಮರ್ಮಾಂಗಕ್ಕೆ ಕತ್ತರಿ ಹಾಕಿದ ವಿವಾಹಿತ ಮಹಿಳೆ!

ಸಾರಾಂಶ

ಮುಜಾಫರ್ ನಗರದಲ್ಲಿ ಮಹಿಳೆಯೋರ್ವಳು ತನ್ನ ಪತಿ 2ನೇ ಪತ್ನಿಯೊಂದಿಗೆ ವಾಸವಿದ್ದ ಹಿನ್ನೆಲೆಯಲ್ಲಿ ಕೋಪಗೊಂಡು ಗಂಡನ ಮರ್ಮಾಂಗಕ್ಕೆ ಕತ್ತರಿ ಹಾಕಿದ್ದು ಸುದ್ದಿಯಾಗಿತ್ತು. ಆದರೆ ಈ ಬಾರಿಯ ಪ್ರಕರಣ ಇನ್ನು ಸ್ವಲ್ಪ ಭಿನ್ನವಾಗಿದೆ. ಈ ಬಾರಿ ಮರ್ಮಾಂಗ ಕಳೆದುಕೊಂಡಿರುವುದು ಪ್ರಿಯಕರ!

ಒಡಿಶಾ(ನ.10)  ಜಗಳ ನಡೆಯುತ್ತಿದ್ದಾಗ ವಿವಾಹಿತ ಮಹಿಳೆಯೊಬ್ಬಳು ತನ್ನ ಪ್ರಿಯಕರನ ಮರ್ಮಾಂಗವನ್ನೇ ಕತ್ತರಿಸಿದ್ದಾಳೆ. ಒಡಿಶಾದ ಕೆಂಜಾರ್ ಜಿಲ್ಲೆಯ ಬದೌಗಾನ್​ ಗ್ರಾಮದಲ್ಲಿ ಇಂಐ ವಿಚಿತ್ರ ಪ್ರಕರಣ ನಡೆದಿದ್ದು ಕೊಂಚ ತಡವಾಗಿ ಬೆಳಕಿಗೆ ಬಂದಿದೆ.

ಮರ್ಮಾಂಗ ಕಳೆದುಕೊಂಡ ಯುವಕನ  ಕುಟುಂಬಸ್ಥರು ನೀಡಿದ ದೂರಿನ ಅನ್ವಯ 24 ವರ್ಷದ ಮಹಿಳೆಯನ್ನು ಶುಕ್ರವಾರ ಬಂಧಿಸಲಾಗಿದೆ. ತೀವ್ರವಾಗಿ ಗಾಯಗೊಂಡ ಯುವಕ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಚಾಕು ಬಳಸಿ ಮಹಿಳೆ ಈ ಕೃತ್ಯ ಎಸಗಿದ್ದಾಳೆ. ಆಯುಧ ವಶಕ್ಕೆ ಪಡೆಯಲಾಗಿದೆ.

ಪತ್ನಿಗೆ ವಿಷ ಕುಡಿಸಿ, ಮರ್ಮಾಂಗಕ್ಕೆ ಖಾರದ ಪುಡಿ ಹಾಕಿದ ಪೊಲೀಸ್ ಪತಿ!

ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಯುವಕ ಮಂಗಳವಾರ ಚೆನ್ನೈನಿಂದ ಕೆಂಜಾರಿಗೆ ಆಗಮಿಸಿ ಮರುದಿನ ತನ್ನ ಪ್ರೇಯಸಿಯ ಮನೆಗೆ ತೆರಳಿದ್ದ. ಇಬ್ಬರ ನಡುವೆ ಉಂಟಾದ ವಾಗ್ವಾದ ಆತನ ಮರ್ಮಾಂಗ ಕಳೆದುಕೊಳ್ಳುವರೆಗೆ ನಡೆಯಿತು ಎಂದು ಪೊಲೀಸರು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಟಿವಿ ಪತ್ರಿಕೋದ್ಯಮದಲ್ಲಿ ಮೇಲುಗೈ.. ‘ಏಷ್ಯಾನೆಟ್ ಸುವರ್ಣ ನ್ಯೂಸ್‌’ಗೆ 8 ಎನ್ಬಾ ಪ್ರಶಸ್ತಿ
ಬ್ಯೂಟಿ ಸೀಕ್ರೆಟ್.. ಇಲ್ಲಿದೆ ಭಾರತೀಯ ಮಹಿಳೆಯರ ಮೇಕಪ್ ಕ್ರಾಂತಿ ಶುರುವಾದ ಕತೆ!