ಸಿಬಿಎಸ್‌ಇ, ಸಿಐಎಸ್‌ಸಿಇ ಶಾಲೆಗಳಲ್ಲಿ 10ನೇ ತರಗತಿ ವರೆಗೂ ಮರಾಠಿ ಕಡ್ಡಾಯ

By Suvarna Web DeskFirst Published Feb 28, 2018, 10:16 AM IST
Highlights

ಸಿಬಿಎಸ್‌ಇ ಮತ್ತು ಸಿಐಎಸ್‌ಸಿಇ ಶಾಲೆಗಳಲ್ಲೂ 10ನೇ ತರಗತಿವರೆಗೆ ಮರಾಠಿ ಭಾಷೆಯನ್ನು ಒಂದು ಕಡ್ಡಾಯ ವಿಷಯವನ್ನಾಗಿ ಬೋಧಿಸುವನ್ನು ಕಡ್ಡಾಯ ಮಾಡುವ ಬಗ್ಗೆ ಮಹಾರಾಷ್ಟ್ರ ಸರ್ಕಾರ ಗಂಭೀರ ಚಿಂತನೆ ನಡೆಸಿದೆ.

ಮುಂಬೈ: ಸಿಬಿಎಸ್‌ಇ ಮತ್ತು ಸಿಐಎಸ್‌ಸಿಇ ಶಾಲೆಗಳಲ್ಲೂ 10ನೇ ತರಗತಿವರೆಗೆ ಮರಾಠಿ ಭಾಷೆಯನ್ನು ಒಂದು ಕಡ್ಡಾಯ ವಿಷಯವನ್ನಾಗಿ ಬೋಧಿಸುವನ್ನು ಕಡ್ಡಾಯ ಮಾಡುವ ಬಗ್ಗೆ ಮಹಾರಾಷ್ಟ್ರ ಸರ್ಕಾರ ಗಂಭೀರ ಚಿಂತನೆ ನಡೆಸಿದೆ.

ಸದ್ಯ 8ನೇ ತರಗತಿವರೆಗೆ ಮಾತ್ರವೇ ಈ ಎರಡೂ ಮಾದರಿಯ ಶಾಲೆಗಳಲ್ಲಿ ಮರಾಠಿಯನ್ನು ಒಂದು ಕಡ್ಡಾಯ ಭಾಷೆಯನ್ನಾಗಿ ಬೋಧಿಸಬೇಕೆಂಬ ನಿಯಮ ಇದೆ. ಇದನ್ನು ಎಸ್‌ಎಸ್‌ಎಲ್‌ಸಿವರೆಗೂ ವಿಸ್ತರಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ರಾಜ್ಯದ ಶಿಕ್ಷಣ ಸಚಿವ ವಿನೋದ್‌ ತಾವ್ಡೆ ವಿಧಾನಸಭೆಗೆ ಮಾಹಿತಿ ನೀಡಿದ್ದಾರೆ.

ಸದನದಲ್ಲಿ ಆಡಳಿತ ಮತ್ತು ವಿಪಕ್ಷ ಸದಸ್ಯರು ಪಿಯುಸಿಯಲ್ಲೂ ಮರಾಠಿ ಭಾಷೆ ಕಡ್ಡಾಯಕ್ಕೆ ಆಗ್ರಹ ಮಾಡಿದರು.

click me!