ಹಜ್‌ ಯಾತ್ರೆ: ವಿಮಾನ ದರದಲ್ಲಿ ಭಾರೀ ಇಳಿಕೆ

By Suvarna Web DeskFirst Published Feb 28, 2018, 10:07 AM IST
Highlights

ಇತ್ತೀಚೆಗಷ್ಟೇ ಹಜ್‌ ಯಾತ್ರೆಯ ವೇಳೆ ನೀಡುತ್ತಿದ್ದ ಸಬ್ಸಿಡಿಯನ್ನು ಪೂರ್ಣ ಪ್ರಮಾಣದಲ್ಲಿ ರದ್ದುಗೊಳಿಸಿದ್ದ ಕೇಂದ್ರ ಸರ್ಕಾರ, ಇದೀಗ ಹಜ್‌ ಯಾತ್ರೆ ಕೈಗೊಳ್ಳುವವರ ವಿಮಾನ ಪ್ರಯಾಣಕ್ಕೆ ವಿಧಿಸುತ್ತಿದ್ದ ಟಿಕೆಟ್‌ ದರವನ್ನು ಗಣನೀಯ ಪ್ರಮಾಣದಲ್ಲಿ ಇಳಿಕೆ ಮಾಡಿದೆ.

ನವದೆಹಲಿ: ಇತ್ತೀಚೆಗಷ್ಟೇ ಹಜ್‌ ಯಾತ್ರೆಯ ವೇಳೆ ನೀಡುತ್ತಿದ್ದ ಸಬ್ಸಿಡಿಯನ್ನು ಪೂರ್ಣ ಪ್ರಮಾಣದಲ್ಲಿ ರದ್ದುಗೊಳಿಸಿದ್ದ ಕೇಂದ್ರ ಸರ್ಕಾರ, ಇದೀಗ ಹಜ್‌ ಯಾತ್ರೆ ಕೈಗೊಳ್ಳುವವರ ವಿಮಾನ ಪ್ರಯಾಣಕ್ಕೆ ವಿಧಿಸುತ್ತಿದ್ದ ಟಿಕೆಟ್‌ ದರವನ್ನು ಗಣನೀಯ ಪ್ರಮಾಣದಲ್ಲಿ ಇಳಿಕೆ ಮಾಡಿದೆ.

ಉದಾಹರಣೆಗೆ, ಅಹಮದಾಬಾದ್‌ನಿಂದ ಮೆಕ್ಕಾಗೆ ಹೋಗಿ ಬರಲು ಈ ಮೊದಲು 98750 ರು. ಟಿಕೆಟ್‌ ದರ ಇತ್ತು. ಅದನ್ನೀಗ 65015 ರು.ಗೆ ಇಳಿಸಲಾಗಿದೆ. ಅದೇ ರೀತಿಯ ಮುಂಬೈನಿಂದ ವಿಧಿಸಲಾಗುತ್ತಿದ್ದ ಟಿಕೆಟ್‌ ದರವನ್ನು 98750 ರು.ನಿಂದ 57857 ರು.ಗೆ ಇಳಿಸಲಾಗಿದೆ.

ಈ ದರಗಳು ಏರ್‌ ಇಂಡಿಯಾ, ಸೌದಿ ಏರ್‌ಲೈನ್ಸ್‌ ಮತ್ತು ಸೌದಿ ಅರೇಬಿಯಾ ಮೂಲದ ಫ್ಲೈನಾಸ್‌ ಕಂಪನಿಯ ವಿಮಾನಗಳಿಗೆ ಅನ್ವಯವಾಗುತ್ತದೆ. ಭಾರತದಿಂದ ಒಟ್ಟು 21 ನಗರಗಳ ಮೂಲಕ ಮೆಕ್ಕಾ ಯಾತ್ರೆ ಕೈಗೊಳ್ಳಲು ವಿಮಾನದಲ್ಲಿ ಸಂಚರಿಸುವ ಅವಕಾಶ ಕಲ್ಪಿಸಲಾಗಿದೆ.

click me!