ಎಚ್ಚರ! ಮಕ್ಕಳ ಜೀವವನ್ನೇ ಬಲಿ ಪಡೆಯುತ್ತೆ ಈ ಗೇಮ್!: ಈ ಗೇಮ್ ಆಡಿದ್ರೆ ಕೊನೆಗೆ ಉಳಿಯುವುದು 1 ಫೋಟೋ ಮಾತ್ರ!

By Suvarna Web DeskFirst Published Aug 1, 2017, 8:27 AM IST
Highlights

ನಿಮ್ಮ ಮಕ್ಕಳು ಇಂಟರ್ನೆಟ್ ಬಳಕೆ ಮಾಡ್ತಾರಾ? ಅದರಲ್ಲೇ ಹೆಚ್ಚು ಹೊತ್ತು ಕಾಲ ಕಳೆಯುತ್ತೀರಾ? ಹಾಗಾದ್ರೆ ಈ ಸ್ಟೋರಿನಾ ನೋಡಲೇ ಬೇಕು. ಯಾಕಂದ್ರೆ ಇಂಟರ್ನೆಟ್ ನ ಹುಚ್ಚಿನಲ್ಲಿ ನಿಮ್ಮ ಮಗ ಪ್ರಾಣವನ್ನೇ ತೆಗೆದುಕೊಳ್ಳಬಹುದು. ಅದು ಹೇಗೆ ಅಂತೀರಾ? ಇಲ್ಲಿದೆ ವಿವರ.

ಮುಂಬೈ(ಆ.01): ನಿಮ್ಮ ಮಕ್ಕಳು ಇಂಟರ್ನೆಟ್ ಬಳಕೆ ಮಾಡ್ತಾರಾ? ಅದರಲ್ಲೇ ಹೆಚ್ಚು ಹೊತ್ತು ಕಾಲ ಕಳೆಯುತ್ತೀರಾ? ಹಾಗಾದ್ರೆ ಈ ಸ್ಟೋರಿನಾ ನೋಡಲೇ ಬೇಕು. ಯಾಕಂದ್ರೆ ಇಂಟರ್ನೆಟ್ ನ ಹುಚ್ಚಿನಲ್ಲಿ ನಿಮ್ಮ ಮಗ ಪ್ರಾಣವನ್ನೇ ತೆಗೆದುಕೊಳ್ಳಬಹುದು. ಅದು ಹೇಗೆ ಅಂತೀರಾ? ಇಲ್ಲಿದೆ ವಿವರ.

ಮನ್ ಪ್ರೀತ್ ಸಹಾನ್ಸ್, ಮುಂಬೈನಲ್ಲಿ ತನ್ನ ಪೋಷಕರ ಜೊತೆ ವಾಸವಿದ್ದ ಈತ ಕಟ್ಟಡದಿಂದ ಜಿಗಿದು ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. ಇದಕ್ಕೆ ಕಾರಣವಾಗಿದ್ದು ಇಂಟರ್ನೆಟ್.

ಮಕ್ಕಳ ಕೈಗೆ ಮೊಬೈಲ್ ಕೊಡುವ ಮುನ್ನ ನೂರು ಬಾರಿ ಯೋಚಿಸಿ. ಯಾಕಂದ್ರೆ ಅಂತರ್ಜಾಲದಲ್ಲಿರುವ ಅದೆಷ್ಟೋ ವಿಷಯಗಳು ಮಕ್ಕಳನ್ನು ದಾರಿ ತಪ್ಪಿಸಬಹುದು. ಅವರ ಜೀವಕ್ಕೆ ಮಾರಕವಾಗಬಹುದು. ಹೌದು, ಇಂತಹದ್ದೇ ಘಟನೆ ಮುಂಬೈನಲ್ಲಿ ನಡೆದುಹೋಗಿದೆ. ರಷ್ಯಾದಲ್ಲಿ ಹುಟ್ಟಿದ ಬ್ಲೂ ವೇಲ್ ಚಾಲೆಂಜ್ ಎಂಬ ಆನ್ ಲೈನ್ ಹುಚ್ಚು ಕ್ರೀಡೆಗೆ ಅದೆಷ್ಟೋ ಮಕ್ಕಳು ಬಲಿಯಾಗಿದ್ದಾರೆ. ಅದಕ್ಕೆ ಇದೀಗ ಭಾರತ ಕೂಡ ಹೊರತಾಗಿಲ್ಲ. ಮುಂಬೈನಲ್ಲಿ ಈ ಹುಚ್ಚು ಆನ್ ಲೈನ್ ಕ್ರೀಡೆಗೆ ಬಲಿಯಾಗಿ ಪ್ರಾಣತೆತ್ತ ಮೊದಲ ಬಾಲಕ ಈ ಮನ್ ಪ್ರೀತ್ ಸಹಾನ್ಸ್.

ಬ್ಲೂ ವೇಲ್ ಚಾಲೆಂಜ್ ಅಂದರೇನು..?

ರಷ್ಯಾ ದೇಶದಲ್ಲಿ ಯುವಕನೋರ್ವ ಸಾಮಾಜಿಕ ಜಾಲತಾಣದಲ್ಲಿ ಹುಟ್ಟುಹಾಕಿದ ಈ ಹುಚ್ಚು ಕ್ರೀಡೆಗೆ ವಿಶ್ವದಾದ್ಯಂತ ಅದೆಷ್ಟೋ ಮಂದಿ ಬಲಿಯಾಗುತ್ತಿದ್ದಾರೆ. ಬ್ಲೂ ವೇಲ್ ಚಾಲೆಂಜ್ ಅಂದರೆ, ಸಾಮಾಜಿಕ ಜಾಲತಾಣಗಳಲ್ಲಿ ನಿಮಗೆ 50 ಟಾಸ್ಕ್ ಗಳನ್ನ ನೀಡಲಾಗುತ್ತೆ. ಇಂತಹ ಟಾಸ್ಕ್ ಗಳಿಗೆ ಎಳೆ ಮಕ್ಕಳು ಬಲಿಪಶುಗಳಾಗ್ತಿದ್ದಾರೆ. ಅದರಲ್ಲಿ ಪ್ರಮುಖವಾಗಿ ತಮ್ಮ ಕೈಗಳನ್ನ ಹರಿತವಾದ ಆ ಯುದ್ಧಗಳಿಂದ ವೇಲ್ ಮೀನಿನ ರೀತಿ ಚಿತ್ರ ಬಿಡಿಸಲು ಆದೇಶ ನೀಡ್ತಾರೆ. ಅಂತಹ ಎಲ್ಲಾ ಟಾಸ್ಕ್ ಗಳನ್ನ ಮಾಡಿದ ಮೇಲೆ ಕೊನೆಯಲ್ಲಿ ಬರುವುದೇ ಮುಗ್ಧ ಮಕ್ಕಳ ಜೀವ ತೆಗೆಯುವ ಟಾಸ್ಕ್. ಅದು ಸೂಸೈಡ್. ಹೌದು, ಕೊನೆಯ ಟಾಸ್ಕ್ ನಲ್ಲಿ ಏಳು ಅಂತಸ್ತಿನ ಕಟ್ಟಡದಿಂದ ಬೀಳಬೇಕು. ಅದರಲ್ಲೂ ಬೀಳುವ ಮುನ್ನ ಚಿತ್ರ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಬೇಕು ಎಂದು ಆದೇಶ ನೀಡಲಾಗಿರುತ್ತದೆ. ಇಂತಹ ಹುಚ್ಚು ಕ್ರೀಡೆಗೆ 14 ವರ್ಷದ ಮನ್ ಪ್ರೀತ್ ಸಹಾನ್ಸ್ ಬಲಿಯಾಗಿದ್ದಾನೆ.

ತಾನು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ, ತನ್ನ ಕೊನೆಯ ಚಿತ್ರ ತೆಗೆದು ನಿಮ್ಮಲ್ಲಿ ಕೊನೆಯದಾಗಿ ಉಳಿಯುವುದು ನನ್ನ ಈ ಚಿತ್ರ ಮಾತ್ರ ಎಂದು ಬರೆದಿದ್ದಾನೆ. ಬಾಳಿ ಬದುಕಬೇಕಾದಿದ್ದ ಈ ಬಾಲಕ ಎಳೆ ವಯಸ್ಸಿನಲ್ಲೇ ತನ್ನ ಪ್ರಾಣ ತೆಗೆದುಕೊಂಡಿದ್ದಾನೆ. ಪೋಷಕರೇ ಇಂತಹ ಹುಚ್ಚು ಕ್ರೀಡೆಗೆ ನಿಮ್ಮ ಮಕ್ಕಳೂ ಕೂಡ ಬಲಿಯಾಗಬಹುದು ಎಚ್ಚರ.

click me!