ಮೋದಿ - ಶಾ ರಣತಂತ್ರ!: ಮುಂದಿನ ತಿಂಗಳು ಈ ರಾಜ್ಯವೂ ಬಿಜೆಪಿ ಪಾಲಾಗುತ್ತಾ?

Published : Aug 01, 2017, 07:59 AM ISTUpdated : Apr 11, 2018, 12:50 PM IST
ಮೋದಿ - ಶಾ ರಣತಂತ್ರ!: ಮುಂದಿನ ತಿಂಗಳು ಈ ರಾಜ್ಯವೂ ಬಿಜೆಪಿ ಪಾಲಾಗುತ್ತಾ?

ಸಾರಾಂಶ

ಬಿಹಾರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾದ ಮೋದಿ- ಅಮಿತ್ ಶಾ ಜೋಡಿ ಇದೀಗ ಮತ್ತೊಂದು ರಾಜ್ಯದ ಮೇಲೆ ಕಣ್ಣಿಟ್ಟಿದೆ. ಈ ಸಂಬಂಧ ಕಾರ್ಯತಂತ್ರ ರೂಪಿಸಿದೆ. ಅಂದುಕೊಂಡಂತೆ ಆದರೆ ಮುಂದಿನ ತಿಂಗಳಲ್ಲಿ ಆ ರಾಜ್ಯ ಎನ್‌ಡಿಎ ತೆಕ್ಕೆ ಪಾಲಾಗಲಿದೆ. ಯಾವುದು ಆ ರಾಜ್ಯ ಅಂತೀರಾ? ಇಲ್ಲಿದೆ ವಿವರ

ನವದೆಹಲಿ(ಆ.01): ಬಿಹಾರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾದ ಮೋದಿ- ಅಮಿತ್ ಶಾ ಜೋಡಿ ಇದೀಗ ಮತ್ತೊಂದು ರಾಜ್ಯದ ಮೇಲೆ ಕಣ್ಣಿಟ್ಟಿದೆ. ಈ ಸಂಬಂಧ ಕಾರ್ಯತಂತ್ರ ರೂಪಿಸಿದೆ. ಅಂದುಕೊಂಡಂತೆ ಆದರೆ ಮುಂದಿನ ತಿಂಗಳಲ್ಲಿ ಆ ರಾಜ್ಯ ಎನ್‌ಡಿಎ ತೆಕ್ಕೆ ಪಾಲಾಗಲಿದೆ. ಯಾವುದು ಆ ರಾಜ್ಯ ಅಂತೀರಾ? ಇಲ್ಲಿದೆ ವಿವರ

ಪ್ರಧಾನಿ ನರೇಂದ್ರ ಮೋದಿ-ಅಮಿತ್ ಶಾ ಜೋಡಿ ರಾಜಕೀಯ ತಂತ್ರಗಳಿಂದ ಒಂದೊಂದೇ ರಾಜ್ಯವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುತ್ತಾ ಬರ್ತಿದೆ. ಬಿಹಾರ ರಾಜ್ಯದಲ್ಲಿ ಆರ್​ಜೆಡಿ ಜೊತೆಗಿನ ಮೈತ್ರಿ ಮುರಿದು ಜೆಡಿಯು ಪಕ್ಷವನ್ನು ಎನ್.ಡಿಎ ತೆಕ್ಕೆಗೆ ಸೆಳೆಯುವಲ್ಲಿ ಯಶಸ್ವಿಯಾಗಿರುವ ಈ ಜೋಡಿ ಕಣ್ಣು ಇದೀಗ ತಮಿಳುನಾಡಿನ ಮೇಲೆ ಬಿದ್ದಿದೆ.

ಮೋದಿ- ಅಮಿತಾ ಶಾ ತೆಕ್ಕೆಗೆ ತಮಿಳುನಾಡು..?

ದೇಶಾದ್ಯಂತ ಕೇಸರಿ ಕಹಳೆ ಮೊಳಗಿಸಲು ಬಿಜೆಪಿ ಮಹಾ ಪ್ಲಾನ್ ಮಾಡಿದೆ. ಜಯಲಲಿತಾ ನಿಧನದ ಬಳಿಕ ತಮಿಳುನಾಡಿನಲ್ಲಿ ಎಐಎಡಿಎಂಕೆ ಎರಡು ಬಣಗಳಾಗಿವೆ. ಇದನ್ನೇ ಬಂಡವಾಳ ಮಾಡ್ಕೊಂಡು ತಮಿಳುನಾಡನ್ನು ಎನ್‌ಡಿಎ ತೆಕ್ಕೆಗೆ ತೆಗೆದುಕೊಳ್ಳಲು ಮೋದಿ-ಅಮಿತಾ ಶಾ ಕಾರ್ಯತಂತ್ರ ರೂಪಿಸುತ್ತಿದ್ದಾರೆ.

ಶೀಘ್ರದಲ್ಲೇ ಎನ್​ಡಿಎ ಅಂಗಪಕ್ಷವಾಗುತ್ತಾ ಎಐಎಡಿಎಂಕೆ..?

ಇನ್ನು ಎಐಎಡಿಎಂಕೆ ಪಕ್ಷವನ್ನ ಎನ್​ಡಿಎ ಅಂಗಪಕ್ಷವನ್ನಾಗಿ ಮಾಡಿಕೊಳ್ಳಬೇಕೆಂದು ಪಣ ತೊಟ್ಟಿರುವ ಮೋದಿ - ಅಮಿತ್ ಶಾ ಜೋಡಿ, ಭರ್ಜರಿಯಾಗಿಯೇ ಕಾರ್ಯತಂತ್ರ ರೂಪಿಸುತ್ತಿದೆ. ಈ ಹಿನ್ನೆಲೆಯಲ್ಲಿ ಎಐಎಡಿಎಂಕೆಯ ಪಳನಿಸ್ವಾಮಿ ಮತ್ತು ಪನ್ನೀರ್​ ಸೆಲ್ವಂ ಬಣಗಳ ಜೊತೆ ಚರ್ಚಿಸಿದೆ.  ಎಐಎಡಿಎಂಕೆಯ ಪ್ರಮುಖ ಸಂಸದರಿಗೆ ಕೇಂದ್ರ ಸಚಿವ ಸ್ಥಾನ9ದ ಆಮಿಷವೊಡ್ಡಿದೆ ಎನ್ನಲಾಗ್ತಿದೆ. ಎಐಎಡಿಎಂಕೆ ಪಕ್ಷ ಎನ್​ಡಿಎ ಮಿತ್ರಕೂಟಕ್ಕೆ ಸೇರ್ಪಡೆಯಾಗುವ ಬಗ್ಗೆ ಆಗಸ್ಟ್ 3 ನೇ ವಾರದಲ್ಲಿ ಅಧಿಕೃತವಾಗಿ ಘೋಷಣೆಯಾಗುವ ಸಾಧ್ಯತೆ ಇದೆ.

ಒಟ್ಟಿನಲ್ಲಿ ದೇಶದ 18 ರಾಜ್ಯಗಳಲ್ಲಿ ಅಧಿಕಾರ ಹಿಡಿದಿರೋ ಬಿಜೆಪಿ ಮಿತ್ರಕೂಟ,  ತಮಿಳುನಾಡಿನಲ್ಲೂ  ತನ್ನ ಸಾಮ್ರಾಜ್ಯ ವಿಸ್ತರಣೆ ಮಾಡುತ್ತಾ ಕಾದು ನೋಡಬೇಕು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಳ್ಳಾರಿಯಲ್ಲಿ ಎಫ್‌ಡಿಎ ಸ್ಪರ್ಧಾತ್ಮಕ ಪರೀಕ್ಷೆ: ಕಾಲು ಗೆಜ್ಜೆ ತೆಗೆದು ಪರೀಕ್ಷೆ ಬರೆದ ವಿದ್ಯಾರ್ಥಿನಿಯರು
ಜವರಾಯನಂತೆ ಬಂತು ಜಲ್ಲಿಕಲ್ಲು ತುಂಬಿದ್ದ ಲಾರಿ: ಮನೆ ಮುಂದೆ ಚಳಿ ಕಾಯಿಸುತ್ತಿದ್ದ 90 ವರ್ಷದ ವೃದ್ಧ ಬಲಿ