
ಕಲಿಯುಗದ ಕಾಮಧೇನು, ಬೇಡಿದ ವರ ನೀಡುವ ಸಂತ ಎಂದು ಖ್ಯಾತಿ ಪಡೆದ ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ 346ನೇ ಆರಾಧನಾ ಮಹೋತ್ಸವ ಮಂತ್ರಾಲಯದಲ್ಲಿ ನಡೆಯುತ್ತಿದೆ. ಇಂದು ರಾಯರ ಮಧ್ಯಾರಾಧನೆ ಜರುಗುತ್ತಿದೆ. ಬೆಳಗ್ಗಿನಿಂದಲೇ ಅಪಾರ ಪ್ರಮಾಣದ ಭಕ್ತರು ರಾಯರ ದರ್ಶನಕ್ಕಾಗಿ ಆಗಮಿಸುತ್ತಿದ್ದಾರೆ. ರಾಯರ ಮೃತ್ತಿಕ ಬೃಂದಾವನಕ್ಕೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿದೆ. ಕ್ಷೀರಾಭಿಷೇಕ, ಪಂಚಾಮೃತ ಅಭಿಷೇಕ, ಕನಕಾಭಿಷೇಕ, ಅರ್ಚನೆ ಮೊದಲಾದ ಪೂಜೆ ಪುನಸ್ಕಾರಗಳು ಇಂದು ನಡೆಯಲಿದೆ.
ನಿನ್ನೆ ಮಂಗಳವಾರ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಶ್ರೀಮಠದ ಸಂಪ್ರದಾಯದ ವಿಧಿ-ವಿಧಾನಗಳೊಂದಿಗೆ ನಡೆಯಿತು. ಈ ಬಾರಿಯ ಪೂರ್ವಾರಾಧನೆಗೆ ವರುಣನ ಸಿಂಚನವಾಗಿ ವಾತಾವರಣಕ್ಕೆ ತಂಪೆರೆಯಿತು. ಶ್ರೀಮಠದಲ್ಲಿ ಬೆಳಗ್ಗೆ ನೈರ್ಮಲ್ಯ ವಿಸರ್ಜನೆ, ಶ್ರೀ ಉತ್ಸವ, ರಾಯರ ಪಾದಪೂಜೆ ಮತ್ತು ರಾಘವೇಂದ್ರ ಶ್ರೀಗಳ ಮೂಲ ಬೃಂದಾವನಕ್ಕೆ ಪಂಚಾಮೃತ ಅಭಿಷೇಕ ನೆರವೇರಿಸಿ ವಿಶೇಷ ಪುಷ್ಪಾಲಂಕಾರ ಮಾಡಲಾಯಿತು. ಪೂರ್ವಾರಾಧನೆ ನಿಮಿತ್ತ ರಾಯರ ಗ್ರಂಥಗಳ ಪಾರಾಯಣ, ಪಲ್ಲಕ್ಕಿಸೇವೆ, ದೇವ-ಮಂತ್ರಗಳು, ದಾಸವಾಣಿ, ಪ್ರವಚನಗಲು ಶ್ರೀಕ್ಷೇತ್ರದಲ್ಲಿ ಅನುರಣಿಸಿದವು. ನಂತರ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ಶ್ರೀಮುಲರಾಮದೇವರಿಗೆ ವಿಶೇಷ ಪೂಜೆ, ಅಲಂಕಾರ ಸಮರ್ಪಣೆ, ಮಹಾಮಂಗಳಾರತಿ ಸೇವೆ ನಡೆಸಿಕೊಟ್ಟರು. ಅನ್ನ ಸಾಂಬಾರ್, ತಿಳಿಸಾರು, ರಸಂ, ಕಡಲೆ ಬೇಳೆ ಪಾಯಸ, ಸಿಹಿ ತಿನಿಸು, ಮೊಸರನ್ನ, ಚಿತ್ರಾನ್ನ, ಕೋಸಂಬರಿ ಮತ್ತು ಬೀನ್ಸ್ ಪಲ್ಲೆ ಅಡುಗೆಯನ್ನು ಭಕ್ತರು ಸವಿದರು. ಜನಸಾಮಾನ್ಯರು, ಗಣ್ಯರು ಮತ್ತು ವಿಶೇಷ ಅತಿಥಿಗಳಿಗೆ ಪ್ರತ್ಯೇಕ ಊಟದ ವ್ಯವಸ್ಥೆಯಾಗಿತ್ತು.
epaperkannadaprabha.com
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.