ಗೋವಾ ಉಪ-ಚುನಾವಣೆ: ಪರ್ರಿಕರ್ ಗೆಲುವು

Published : Aug 28, 2017, 03:18 PM ISTUpdated : Apr 11, 2018, 12:53 PM IST
ಗೋವಾ ಉಪ-ಚುನಾವಣೆ: ಪರ್ರಿಕರ್ ಗೆಲುವು

ಸಾರಾಂಶ

ಪಣಜಿ ವಿಧಾನಸಭೆ ಕ್ಷೇತ್ರಕ್ಕೆ ನಡೆದ ಉಪ-ಚುನಾವಣೆಯಲ್ಲಿ ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರಿಕರ್ ಗೆಲುವು ಸಾಧಿಸಿದ್ದಾರೆ. ವಾಲ್ಪೋಯಿ ಕ್ಷೇತ್ರದಲ್ಲಿ ಗೋವಾ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಗೆದ್ದಿದ್ದಾರೆ. 40 ಸದಸ್ಯರ ವಿಧಾನಸಭೆಯಲ್ಲಿ ಬಿಜಪಿಗೆ ಬಹುಮತ ಇಲ್ಲದಿರುವ ಹಿನ್ನೆಲೆಯಲ್ಲಿ ಉಪ-ಚುನಾವಣೆ ನಡೆದ ಎರಡು ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದು ಬಹಳ ಮುಖ್ಯವಾಗಿತ್ತು.

ಪಣಜಿ: ಪಣಜಿ ವಿಧಾನಸಭೆ ಕ್ಷೇತ್ರಕ್ಕೆ ನಡೆದ ಉಪ-ಚುನಾವಣೆಯಲ್ಲಿ ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರಿಕರ್ ಗೆಲುವು ಸಾಧಿಸಿದ್ದಾರೆ. ವಾಲ್ಪೋಯಿ ಕ್ಷೇತ್ರದಲ್ಲಿ ಗೋವಾ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಗೆದ್ದಿದ್ದಾರೆ.

40 ಸದಸ್ಯರ ವಿಧಾನಸಭೆಯಲ್ಲಿ ಬಿಜಪಿಗೆ ಬಹುಮತ ಇಲ್ಲದಿರುವ ಹಿನ್ನೆಲೆಯಲ್ಲಿ ಉಪ-ಚುನಾವಣೆ ನಡೆದ ಎರಡು ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದು ಬಹಳ ಮುಖ್ಯವಾಗಿತ್ತು.

ಪ್ರಮುಖ ಪ್ರತಿಸ್ಪರ್ಧಿ ಕಾಂಗ್ರೆಸ್’ನ ಗಿರೀಶ್ ಚೋಡಾಂಕರ್ ಅವರನ್ನು ಪರ್ರಿಕರ್ 4803 ವೋಟುಗಳಿಂದ ಮಣಿಸಿದ್ದಾರೆ. ಪರ್ರಿಕರ್’ಗೆ ಒಟ್ಟು 9862 ವೋಟುಗಳು ಸಿಕ್ಕಿವೆ.

ಕಳೆದ ಫೆಬ್ರವರಿಯಲ್ಲಿ ನಡೆದ ವಿಧಾನಸಭೆ ಚುನಾವಣೆಯಲಲ್ಇ ನಾಟಕೀಯ ಬೆಳವಣಿಗೆಗಳ ಬಳಿಕ ಬಿಜೆಪಿಯು ಅಧಿಕಾರ ಹಿಡಿದಿತ್ತು. ಆ ವೇಳೆ ಕೇಂದ್ರ ರಕ್ಷಣಾ ಸಚಿವರಾಗಿದ್ದ ಪರ್ರಿಕರ್, ಹುದ್ದೆಗೆ ರಾಜಿನಾಮೆ ನೀಡಿ ಗೋವಾ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಿದ್ದರು.

1994ರಿಂದಲೂ ಪಣಜಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಪರ್ರಿಕರ್, 2014ರಲ್ಲಿ ಕೇಂದ್ರ ಮಂತ್ರಿಯಾದ ಸಂದರ್ಭದಲ್ಲಿ ರಾಜಿನಾಮೆ ನೀಡಿದ್ದರು.  ಆ ಬಳಿಕ ಬಿಜೆಪಿ ಇನ್ನೋರ್ವಾ ನಾಯಕ ಸಿದ್ಧಾರ್ಥ್ ಕುಂಕೊಲಿಂಕರ್ ಅವರು ಆ ಕ್ಷೇತ್ರದಲ್ಲಿ ಉಪ-ಚುನಾವಣೆ ಎದುರಿಸಿ ಗೆಲುವು ಸಾಧಿಸಿದ್ದರು.

2017ರ ವಿಧಾನಸಭೆ ಚುನಾವಣೆಯಲ್ಲೂ ಸಿದ್ಧಾರ್ಥ್ ಕುಂಕೊಲಿಂಕರ್ ಈ ಕ್ಷೇತ್ರದಿಂದ ಗೆಲುವು ಸಾಧಿಸಿದ್ದು, ಪರ್ರಿಕರ್’ರ ವಿಧಾನಸಭೆ ಪ್ರವೇಶಕಕ್ಕೆ ಅನುವು ಮಾಡಿಕೊಡಲು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮತಚೋರಿ ವಿರುದ್ಧ ದಿಲ್ಲೀಲಿಂದು ಕಾಂಗ್ರೆಸ್‌ ಬೃಹತ್‌ ಆಂದೋಲನ: ಖರ್ಗೆ, ರಾಹುಲ್‌, ಸಿದ್ದು, ಡಿಕೆಶಿ ಭಾಗಿ
ಮೋದಿ, ಆರ್‌ಸಿ ಮೋಡಿ.. ಕೇರಳದಲ್ಲಿ ಮೊದಲ ಸಲ ಪಾಲಿಕೆ ಚುನಾವಣೇಲಿ ಬಿಜೆಪಿ ಜಯಭೇರಿ