
ಪಣಜಿ[ಮಾ.18]: ಮನೋಹರ ಪರ‌್ರಿಕರ್ ಅವರು 2014ರಲ್ಲಿ ರಕ್ಷಣಾ ಸಚಿವರಾಗಿದ್ದ ಸಂದರ್ಭದಲ್ಲಿ ಫ್ರಾನ್ಸ್ ಜತೆ ರಫೇಲ್ ಯುದ್ಧವಿಮಾನ ಒಪ್ಪಂದವನ್ನು ಭಾರತ ಮಾಡಿಕೊಂಡಿತು. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಪರ‌್ರಿಕರ್‌ಗೆ ತಿಳಿಸದೇ ಈ ಒಪ್ಪಂದ ಮಾಡಿಕೊಂಡರು ಎಂಬ ಸುದ್ದಿ ಹರಡಿತು. ಏಕೆಂದರೆ ಒಪ್ಪಂದ ಏರ್ಪಟ್ಟಾಗ ಪರ‌್ರಿಕರ್ ಅವರು ಗೋವಾದಲ್ಲಿ ಮೀನು ಅಂಗಡಿಯೊಂದನ್ನು ಉದ್ಘಾಟಿಸುತ್ತಿದ್ದರು.
ಈ ವಿವಾದ ಈಗಲೂ ಮುಂದುವರಿದಿದ್ದು, ‘ರಫೇಲ್ ಖರೀದಿಯಲ್ಲಿ ಹಗರಣ ನಡೆದಿದೆ. ಪರ‌್ರಿಕರ್‌ಗೆ ಕೇಳದೇ ಒಪ್ಪಂದ ಮಾಡಿಕೊಳ್ಳಲಾಗಿದೆ. ಅದಕ್ಕೆ ಸಂಬಂಧಿಸಿದ ದಾಖಲೆಗಳು ಈಗಲೂ ಪರ‌್ರಿಕರ್ ಅವರ ಗೋವಾ ಮನೆಯ ಕೋಣೆಯ ಕಪಾಟಿನಲ್ಲಿವೆ’ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದರು. ಇದಕ್ಕೆ ಸಂಬಂಧಿಸಿದಂತೆ ಗೋವಾ ಸಚಿವ ವಿಶ್ವಜಿತ್ ರಾಣೆ ಧ್ವನಿ ಹೋಲುವ ಆಡಿಯೋ ಟೇಪನ್ನೂ ಗಾಂಧಿ ಬಿಡುಗಡೆ ಮಾಡಿದರು.
ಆದರೆ ಇದು ಸುಳ್ಳು ಆರೋಪ. ತಮ್ಮ ಮನೆಯಲ್ಲಿ ಅಂಥ ಯಾವುದೇ ಕಡತಗಳಿಲ್ಲ ಎಂದು ಪರ‌್ರಿಕರ್ ಸ್ಪಷ್ಟಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.