
ಸರಳತೆಗೆ ಮತ್ತೊಂದು ಹೆಸರೇ ಮನೋಹರ್ ಪರ್ರಿಕರ್
ಸರಳತೆಗೆ ಮತ್ತೊಂದು ಹೆಸರೇ ಮನೋಹರ್ ಪರ‌್ರಿಕ್ಕರ್ ಎಂಬಂತಿದ್ದ ಅವರು, ಸಿಎಂ ಆದಾಗಲೂ ರಾಜ್ಯ ವಿಧಾನಸಭೆಗೆ ಸೈಕಲ್ ತುಳಿದುಕೊಂಡು ಬರುತ್ತಿದ್ದರು. ಸಾರ್ವಜನಿಕ ಸಾರಿಗೆಗೆ ಹೆಚ್ಚು ಒತ್ತು ನೀಡುತ್ತಿದ್ದರು.
ಸದಾ ಅರ್ಧ ತೋಳಿನ ಅಂಗಿ
ಮನೋಹರ ಪರ‌್ರಿಕರ್ ಅವರನ್ನು ಅರ್ಧ ತೋಳಿನ ಅಂಗಿ ಇಲ್ಲದೆ ನೋಡಲು ಸಾಧ್ಯವೇ ಇಲ್ಲ. ಅಲ್ಲದೆ, ವಿಜೃಂಭಣೆಯಿಲ್ಲದ ಸಾಧಾರಣ ಪಾದರಕ್ಷೆ ಧರಿಸಿ ಸಂಸತ್ ಕಲಾಪಕ್ಕೆ ಹಾಜರಾ ಗುತ್ತಿದ್ದರು. ಕುತೂಹಲಕಾರಿ ಸಂಗತಿಯೆಂದರೆ, ಪರ‌್ರಿಕರ್ ಅವರು ತಮ್ಮ ಪುತ್ರನ ವಿವಾಹದ ಸಂದರ್ಭದಲ್ಲಿಯೂ ಇದೇ ರೀತಿಯ ಬಟ್ಟೆಗಳನ್ನು ಹಾಕಿಕೊಂಡು, ತಾವೂ ಒಬ್ಬ ಸಾಮಾನ್ಯರಂತೆ, ಪುತ್ರನ ವಿವಾಹಕ್ಕೆ ಆಗಮಿಸುತ್ತಿದ್ದ ಅತಿಥಿಗಳನ್ನು ಬರ ಮಾಡಿಕೊಂಡಿದ್ದರು.
ಸರ್ಕಾರಿ ಸವಲತ್ತಿಗೆ ಗುಡ್‌ಬೈ
ಗೋವಾ ಮುಖ್ಯಮಂತ್ರಿ ಆದ ಬಳಿಕ ಪರ‌್ರಿಕರ್ ಅವರು ತಮ್ಮ ಸ್ವಂತ ನಿವಾಸದಲ್ಲೇ ವಾಸವಾಗಿ ದ್ದರು. ಅಲ್ಲದೆ, ಈ ಸಂದರ್ಭದಲ್ಲಿಯೂ ತಮ್ಮ ನಿವಾವನ್ನು ಮೇಲ್ದರ್ಜೆಗೇರಿಸಿಕೊಳ್ಳಲು ಮುಂದಾಗಲಿಲ್ಲ. ಜೊತೆಗೆ, ಸಿಎಂ ಆದಾಗಲೂ ವಿಪಕ್ಷ ನಾಯಕರಾಗಿದ್ದ ಸಂದರ್ಭದಲ್ಲಿ ತಮಗೆ ನೀಡಲಾಗಿದ್ದ ಇನ್ನೋವಾ ಕಾರನ್ನೇ ಇಟ್ಟುಕೊಂಡಿ ದ್ದರು. ಮುಖ್ಯಮಂತ್ರಿಯಾಗಿದ್ದೇನೆ ದುಬಾರಿ ಕಾರು ಬೇಕು ಎಂಬ ಬೇಡಿಕೆಯನ್ನು ಸಲ್ಲಿಸಲಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.