ಭಾರತ ತಿರುಗಿ ನಿಂತರೆ ಪಾಕ್ ಗೆ ಹೋರಾಡಲು ಶಕ್ತಿಯಿಲ್ಲ: ಪರ್ರಿಕರ್

Published : Apr 15, 2017, 10:40 AM ISTUpdated : Apr 11, 2018, 12:55 PM IST
ಭಾರತ ತಿರುಗಿ ನಿಂತರೆ ಪಾಕ್ ಗೆ ಹೋರಾಡಲು ಶಕ್ತಿಯಿಲ್ಲ: ಪರ್ರಿಕರ್

ಸಾರಾಂಶ

ಖಾಲಿ ಪಾತ್ರೆಯೇ ಹೆಚ್ಚು ಶಬ್ದ ಮಾಡುತ್ತದೆ ಎನ್ನುವಂತೆ ಸದಾ ಒಂದಿಲ್ಲೊಂದು ವಿಚಾರದಲ್ಲಿ ಪಾಕಿಸ್ತಾನ ಎಂಗೇಜ್ ಆಗಿರುವ ಮೂಲಕ ಸುದ್ದಿ ಮಾಡುತ್ತದೆ ಎಂದು ಮಾಜಿ ರಕ್ಷಣಾ ಸಚಿವ, ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರಿಕರ್ ಪಾಕಿಸ್ತಾನವನ್ನು ಟೀಕಿಸಿದ್ದಾರೆ.

ಪಣಜಿ (ಏ.15): ಖಾಲಿ ಪಾತ್ರೆಯೇ ಹೆಚ್ಚು ಶಬ್ದ ಮಾಡುತ್ತದೆ ಎನ್ನುವಂತೆ ಸದಾ ಒಂದಿಲ್ಲೊಂದು ವಿಚಾರದಲ್ಲಿ ಪಾಕಿಸ್ತಾನ ಎಂಗೇಜ್ ಆಗಿರುವ ಮೂಲಕ ಸುದ್ದಿ ಮಾಡುತ್ತದೆ ಎಂದು ಮಾಜಿ ರಕ್ಷಣಾ ಸಚಿವ, ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರಿಕರ್ ಪಾಕಿಸ್ತಾನ್ನು ಟೀಕಿಸಿದ್ದಾರೆ.

ಮಾಜಿ ಸೇನಾಧಿಕಾರಿ ಕುಲಭೂಷಣ್ ಜಾಧವ್ ಗೆ ಪಾಕ್ ಸೇನಾ ನ್ಯಾಯಾಲಯ ಗಲ್ಲುಶಿಕ್ಷೆ ನೀಡಿರುವುದನ್ನು ಪ್ರಸ್ತಾಪಿಸುತ್ತಾ, ಕೊಂಕಣಿ, ಹಿಂದಿಯಲ್ಲಿ  ಖಾಲಿ ಪಾತ್ರೆ ಹೆಚ್ಚು ಶಬ್ದ ಮಾಡುತ್ತದೆ ಅಂತ ಒಂದು ಗಾದೆ ಮಾತಿದೆ. ಪಾಕ್ ಮಾತಿಗೆ ನಾವು ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲವೆಂದು  ಡಿಡಿ ನ್ಯೂಸ್ ಗೆ ನೀಡಿದ ಸಂದರ್ಶನವೊಂದರಲ್ಲಿ ಪರ್ರಿಕರ್ ಹೇಳಿದ್ದಾರೆ.

ಪಾಕಿಸ್ತಾನ ಏನಾದರೂ ವಿಚಾರ ತೆಗೆದು ಸದಾ ಎಂಗೇಜ್ ಆಗಿರಲು ಇಚ್ಚಿಸುತ್ತದೆ. ಭಾರತದ ಜೊತೆ ಆಟವಾಡುತ್ತಿದೆ. ಪಾಕಿಸ್ತಾನ ಒಂದು ವಿಚಾರವನ್ನು ಅರ್ಥ ಮಾಡಿಕೊಳ್ಳಬೇಕು. ಒಂದುವೇಳೆ ಭಾರತ ತಿರುಗಿ ನಿಂತರೆ ನಮ್ಮ ವಿರುದ್ಧ ಹೋರಾಡಲು ಅವರಿಗೆ ಶಕ್ತಿಯಿಲ್ಲ.  ಆದರೆ ನಾವು ಶಾಂತಿಯನ್ನು ಬಯಸುತ್ತೇವೆ. ಪ್ರಚೋದಿಸಲು ಬಯಸುವುದಿಲ್ಲ. ಹಾಗಾಗಿ ಜಾಧವ್ ರನ್ನು ನಮಗೆ ಹಿಂತಿರುಗಿಸಬೇಕು ಎಂದು ಪರ್ರಿಕರ್ ಹೇಳಿದ್ದಾರೆ.

ಜಾಧವ್ ರನ್ನು ಅಪಹರಿಸಲಾಗಿದೆ. ಅವರು ಪಾಕಿಸ್ತಾನದಲ್ಲಿಲ್ಲ. ಇರಾನ್ ನಲ್ಲಿದ್ದಾರೆ.ತಾಲಿಬಾನ್ ಅವರನ್ನು ಕಿಡ್ನಾಪ್ ಮಾಡಿ ಪಾಕಿಸ್ತಾನಕ್ಕೆ ಕರೆತಂದಿದೆ ಎಂದು ಇರಾನ್ ಹೇಳಿದೆ. ನಾವು ಸುಮ್ಮನಿರಲ್ಲ. ಏನು ಮಾಡಬೇಕೋ ಅದನ್ನು ಮಾಡುತ್ತೇವೆ ಎಂದು ಪರ್ರಿಕರ್ ಹೇಳಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಜಗತ್ತಿನಲ್ಲಿ ಅತಿಹೆಚ್ಚು ಮದ್ಯಪಾನ ಮಾಡುವ ದೇಶ ಯಾವುದು? ಭಾರತಕ್ಕೆ ಎಷ್ಟನೇ ಸ್ಥಾನ ಗೊತ್ತಾ?
ಸಿಎಂ ಹೇಳಿದ ಮೇಲೂ ಅಧಿಕಾರ ಹಂಚಿಕೆ ಬಗ್ಗೆ ಚರ್ಚೆ ಸಲ್ಲ: ಸಚಿವ ಸತೀಶ್‌ ಜಾರಕಿಹೊಳಿ