ಮೋದಿ 'ಮನ್ ಕೀ ಬಾತ್' ಪುಸ್ತಕ ರೂಪದಲ್ಲಿ

Published : May 25, 2017, 10:35 AM ISTUpdated : Apr 11, 2018, 01:11 PM IST
ಮೋದಿ 'ಮನ್ ಕೀ ಬಾತ್' ಪುಸ್ತಕ ರೂಪದಲ್ಲಿ

ಸಾರಾಂಶ

‘ಮೋದಿ ಅವರು ಪ್ರತಿ ತಿಂಗಳಾಂತ್ಯಕ್ಕೆ 1 ತಾಸು ರೇಡಿಯೋ ಭಾಷಣ ಮಾಡುತ್ತಾರೆ ಎಂಬುದನ್ನು ಕೇಳಿ ಅಚ್ಚರಿ ಪಟ್ಟೆ. ಇದು ಜನರೊಂದಿಗೆ ಸಂಪರ್ಕ ಸಾಧಿಸಲು ಅವರು ಹಾತೊರೆಯುವ ಸಂಕೇತ' ಎಂದು ಮುನ್ನುಡಿಯಲ್ಲಿ ಅಬೆ ಬರೆದಿದ್ದಾರೆ. ಇದೇ ವೇಳೆ ಪುಸ್ತಕದಲ್ಲಿ ಮೋದಿ ಅವರು ತಾನೇಕೆ ರೇಡಿಯೋ ಮಾಧ್ಯಮವನ್ನು ಭಾಷಣಕ್ಕೆ ಬಳಸಿಕೊಂಡೆ ಎಂಬುದಕ್ಕೆ ಕಾರಣ ನೀಡಿದ್ದಾರೆ.

ನವದೆಹಲಿ: ಮೋದಿ ಅವರು ಆಕಾಶವಾಣಿಯಲ್ಲಿ ಪ್ರತಿ ತಿಂಗಳು ಮಾಡುವ ರೇಡಿಯೋ ಭಾಷಣವನ್ನು ಪುಸ್ತಕ ರೂಪದಲ್ಲಿ ತರಲಾಗಿದೆ. ಸರ್ಕಾರಕ್ಕೆ 3 ವರ್ಷ ತುಂಬಲಿರುವ ಮುನ್ನಾ ದಿನ ಅಂದರೆ ಮೇ 25ರಂದು ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಬಿಡುಗಡೆ ಮಾಡಲಿ​ದ್ದಾರೆ. ಜಪಾನ್‌ ಪ್ರಧಾನಿ ಶಿಂಜೋ ಅಬೆ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ‘ಮನ್‌ ಕೀ ಬಾತ್‌' ಪುಸ್ತಕದ ಮುನ್ನುಡಿ ಬರೆದಿದ್ದಾರೆ.

‘ಮೋದಿ ಅವರು ಪ್ರತಿ ತಿಂಗಳಾಂತ್ಯಕ್ಕೆ 1 ತಾಸು ರೇಡಿಯೋ ಭಾಷಣ ಮಾಡುತ್ತಾರೆ ಎಂಬುದನ್ನು ಕೇಳಿ ಅಚ್ಚರಿ ಪಟ್ಟೆ. ಇದು ಜನರೊಂದಿಗೆ ಸಂಪರ್ಕ ಸಾಧಿಸಲು ಅವರು ಹಾತೊರೆಯುವ ಸಂಕೇತ' ಎಂದು ಮುನ್ನುಡಿಯಲ್ಲಿ ಅಬೆ ಬರೆದಿದ್ದಾರೆ.
ಇದೇ ವೇಳೆ ಪುಸ್ತಕದಲ್ಲಿ ಮೋದಿ ಅವರು ತಾನೇಕೆ ರೇಡಿಯೋ ಮಾಧ್ಯಮವನ್ನು ಭಾಷಣಕ್ಕೆ ಬಳಸಿಕೊಂಡೆ ಎಂಬುದಕ್ಕೆ ಕಾರಣ ನೀಡಿದ್ದಾರೆ.

‘ಅಮೆರಿಕದಲ್ಲಿನ ಅಧ್ಯಕ್ಷರು ರೇಡಿಯೋ ಭಾಷಣ​ವನ್ನು ಪರಿಣಾಮಕಾರಿಯಾಗಿ ಬಳಸಿ​ಕೊಂಡರು. ಮಾರ್ಟಿನ್‌ ಲೂಥರ್‌ ಕಿಂಗ್‌ ಅವರ ‘ಐ ಹ್ಯಾವ್‌ ಎ ಡ್ರೀಮ್‌' ಭಾಷಣ ರೇಡಿಯೋ​ದಿಂದಲೇ ಖ್ಯಾತಿ ಹೊಂದಿತು. ಇತರ ಮಾಧ್ಯಮಗಳಿಗಿಂತ ಹೆಚ್ಚು ಬದಲಾವಣೆ ಸೃಷ್ಟಿಸುವ ಶಕ್ತಿ ರೇಡಿಯೋಗಿದೆ' ಎಂದು ಮೋದಿ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ತೀರ್ಥಹಳ್ಳಿಯ ವಿದ್ಯಾರ್ಥಿನಿಗೆ ಹೃದಯಾಘಾತ, ಶೃಂಗೇರಿ ಕಾಲೇಜು ಹಾಸ್ಟೆಲ್‌ನಲ್ಲಿ ಕುಸಿದು ಬಿದ್ದು ಸಾವು
ಪಿಯುಸಿ ಸರ್ಟಿಫಿಕೇಟ್ ಇದ್ದರೆ ಮಾತ್ರ ವಾಹನಕ್ಕೆ ಪೆಟ್ರೋಲ್ -ಡೀಸೆಲ್, ಡಿ.18ರಿಂದ ಹೊಸ ನಿಯಮ