ಮೋದಿಯೊಳಗೆ ತುಘಲಕ್ ಆತ್ಮ ಸೇರಿಕೊಂಡಿದೆ: ಕಾಂಗ್ರೆಸ್ ನಾಯಕನ ಕಿಡಿ

By Suvarna Web DeskFirst Published Nov 9, 2016, 4:22 AM IST
Highlights

ಪ್ರಧಾನಿಯವರು ತುಘಲಕ್ ಆಡಳಿತವನ್ನು ನೀಡುತ್ತಿದ್ದು ಭಾರತ ಅರ್ಥವ್ಯವಸ್ಥೆಯನ್ನೇ ಹದೆಗೆಡಿಸಲು ಹೊರಟಿದ್ದಾರೆ. ಅಲ್ಲದೇ ಕೇಂದ್ರ ಸರ್ಕಾರ ಈ ಬಗ್ಗೆ ಪುನರ್ ವಿಚಾರ ಮಾಡಬೇಕು ಎಂದು ಮನೀಶ್ ತಿವಾರಿ ಆಗ್ರಹಿಸಿದ್ದಾರೆ.

ಬೆಂಗಳೂರು(ನ. 09): ಪ್ರಧಾನಿ ನರೇಂದ್ರ ಮೋದಿಯವರು ಭ್ರಷ್ಟಾಚಾರ, ಕಪ್ಪುಹಣದ ವಿರುದ್ಧ ಸಮರ ಸಾರಿದ್ದಾರೆ. ಆದ್ರೆ ಕೇಂದ್ರ ಸರ್ಕಾರದ ನಡೆಗೆ ವಿರೋಧ ಪಕ್ಷಗಳು ಕೆಂಡಾಮಂಡಲವಾಗಿವೆ. ಕಾಂಗ್ರೆಸ್ ನಾಯಕ ಮನೀಷ್ ತಿವಾರಿ ಮಾತನಾಡಿ ಪ್ರಧಾನಿ ನಡೆಗೆ ಕಿಡಿಕಾರಿದ್ದಾರೆ.

ಮಹಮದ್ ಬಿನ್ ತುಘಲಕ್ ಆತ್ಮ ಪ್ರಧಾನಿಯವರಿಗೆ ಸೇರಿಕೊಂಡಿದೆ. ಭಾರತದಲ್ಲಿ ಶೇ. 65ರಷ್ಟು ಜನರು ಕೃಷಿಯ ಮೇಲೆ ಅವಲಂಬಿತರಾಗಿದ್ದಾರೆ. ರೈತರ ಹೊಟ್ಟೆ ಮೇಲೆ ಕೇಂದ್ರ ಸರ್ಕಾರ ಕಾಲಿನಿಂದ ಹೊಡೆದಿದೆ. ಪ್ರಧಾನಿಯವರು ತುಘಲಕ್ ಆಡಳಿತವನ್ನು ನೀಡುತ್ತಿದ್ದು ಭಾರತ ಅರ್ಥವ್ಯವಸ್ಥೆಯನ್ನೇ ಹದೆಗೆಡಿಸಲು ಹೊರಟಿದ್ದಾರೆ. ಅಲ್ಲದೇ ಕೇಂದ್ರ ಸರ್ಕಾರ ಈ ಬಗ್ಗೆ ಪುನರ್ ವಿಚಾರ ಮಾಡಬೇಕು ಎಂದು ಮನೀಶ್ ತಿವಾರಿ ಆಗ್ರಹಿಸಿದ್ದಾರೆ.

ಇತ್ತ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಈ ಕಠಿಣ ನಿರ್ಧಾರವನ್ನು ಹಿಂಪಡೆಯುವಂತೆ ಟ್ವೀಟರ್​'ನಲ್ಲಿ ಆಗ್ರಹಿಸಿದ್ದಾರೆ.

ಒಂದೆಡೆ, ಪ್ರಧಾನಿ ಮೋದಿಯವರ ದಿಟ್ಟ ನಿರ್ಧಾರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದರೆ, ಇನ್ನೊಂದೆಡೆ ತೀವ್ರ ಟೀಕೆ ವ್ಯಕ್ತವಾಗುತ್ತಿದೆ.

- ಗುರುಪ್ರಸಾದ್ ಎನ್.ಜೆ., ನ್ಯೂಸ್ ಡೆಸ್ಕ್, ಸುವರ್ಣನ್ಯೂಸ್

click me!