ಪ್ರಧಾನಿ ಮೋದಿ ಈ ಮಾಸ್ಟರ್ ಪ್ಲಾನ್ ಮಾಡಿದ್ದು ಹೇಗೆ?

By Suvarna Web DeskFirst Published Nov 9, 2016, 3:56 AM IST
Highlights

ದೇಶದಲ್ಲಿ ಕಪ್ಪು ಹಣದ ಚಲಾವಣೆ ಮಿತಿ ಮೀರಿತ್ತು. ಕೊನೆಗೆ ಒಂದು  ನಿರ್ಧಾರಕ್ಕೆ ಬಂದ ಪ್ರಧಾನಿ  ಮೋದಿಯವರು ಕಪ್ಪು ಕುಳಗಳ ವಿರುದ್ಧ ಸಮರಕ್ಕೆ ನಿಂತರು. ಅದು  ಹೇಗಿತ್ತು ಅಂದ್ರೆ ಕೆಲ ದಿನಗಳ ಹಿಂದೆ ಕಾಶ್ಮೀರದಲ್ಲಿ  ನಡೆದ ಸರ್ಜಿಕಲ್​ ಸ್ಟ್ರೈಕ್​ ಮಾದರಿಯಲ್ಲೇ ಕಪ್ಪು ಉಗ್ರ ಹಣದ ವಿರುದ್ಧ  ನಡೆಯಿತು.

ನವದೆಹಲಿ(ನ. 09): 2014ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಖಡಾಖಂಡಿತವಾಗಿ ಮೊದಲು ಘೋಷಣೆ ಮಾಡಿದ್ದೇ ದೇಶದಲ್ಲಿ ತಾಂಡವ ವಾಡುತ್ತಿರುವ ಕಪ್ಪು ಹಣವನ್ನು ನಿರ್ನಾಮ ಮಾಡುವ ಬಗ್ಗೆ..  ಸ್ವಿಜರ್ಲೆಂಡ್'ನಲ್ಲಿ ಇಟ್ಟಿರುವ  ಕಪ್ಪು ಹಣದ ಕುರಿತು ಪ್ರಸ್ತಾಪಿದ್ದ ಪ್ರಧಾನಿ ನರೇಂದ್ರ ಮೋದಿ, ಈ ಮೂಲಕ ಕಪ್ಪು ಹಣ ವಾಪಸ್ ತರುವ ವಿಚಾರದಲ್ಲಿ ಪ್ರಮುಖ ಹೆಜ್ಜೆ ಇಟ್ಟಿದ್ದರು.  ಸ್ವಿಜರ್ಲೆಂಡ್‌'ನ‌ ಬ್ಯಾಂಕುಗಳಲ್ಲಿ ಭಾರತೀಯರು ಇಟ್ಟಿರುವ ಕಪ್ಪು ಹಣ ಬಯಲೆಗೆಳೆಯುವ ನಿಟ್ಟಿನಲ್ಲಿ ಸಹಕಾರ ವೃದ್ಧಿಸಲು ಉಭಯ ದೇಶಗಳೂ ಸಹಮತ ವ್ಯಕ್ತಪಡಿಸಿತ್ತು. ಅದರಂತೆ  ಕೆಲವರ ಹೆಸರನ್ನೂ ಸ್ವಿಜರ್ಲೆಂಡ್  ಭಾರತಕ್ಕೆ  ನೀಡಿತ್ತು. ಅದನ್ನು ಭಾರತ ಬಹಿರಂಗ ಪಡಿಸಿತ್ತು..

ಈ ನಡುವೆ ಪ್ರಧಾನಿ ಮೋದಿಯವರು ಜನರಿಗೆ ನೀಡಿದ ಆಶ್ವಾಸನೆಯನ್ನು  ಈಡೇರಿಸುವ ನಿಟ್ಟಿನಲ್ಲಿ  ಕಪ್ಪು ಹಣಕ್ಕೆ ಬ್ರೇಕ್​ ಹಾಕಲೇ ಬೇಕಾಗಿತ್ತು. ಈ ಮಧ್ಯೆ ಪಾಕಿಸ್ತಾನ ಹಾಗೂ  ಬಾಂಗ್ಲಾ ದೇಶದಿಂದ ಮುದ್ರಿತವಾದ  500 ಹಾಗೂ 1000 ಬೆಲೆ ನೋಟುಗಳು ಭಾರತದಲ್ಲಿ ಅಸಲಿ ನೋಟಿನೊಂದಿಗೆ ಸೇರಿಕೊಂಡಿದ್ದವು. ಆಗ ದೇಶದ ಜನರಿಗೆ ಕೆಲವೊಂದು  ಸಲಹೆ ಸೂಚನೆಗಳನ್ನು  ನೀಡಲಾಗಿತ್ತು.

ಆದರೂ , ದೇಶದಲ್ಲಿ ಕಪ್ಪು ಹಣದ ಚಲಾವಣೆ ಮಿತಿ ಮೀರಿತ್ತು. ಕೊನೆಗೆ ಒಂದು  ನಿರ್ಧಾರಕ್ಕೆ ಬಂದ ಪ್ರಧಾನಿ  ಮೋದಿಯವರು ಕಪ್ಪು ಕುಳಗಳ ವಿರುದ್ಧ ಸಮರಕ್ಕೆ ನಿಂತರು. ಅದು  ಹೇಗಿತ್ತು ಅಂದ್ರೆ ಕೆಲ ದಿನಗಳ ಹಿಂದೆ ಕಾಶ್ಮೀರದಲ್ಲಿ  ನಡೆದ ಸರ್ಜಿಕಲ್​ ಸ್ಟ್ರೈಕ್​ ಮಾದರಿಯಲ್ಲೇ ಕಪ್ಪು ಉಗ್ರ ಹಣದ ವಿರುದ್ಧ  ನಡೆಯಿತು.

ಬ್ಲಾಕ್​ ಮನಿ ವಿರುದ್ಧ ಸರ್ಜಿಕಲ್‌ ಸ್ಟ್ರೈಕ್‌
ಪ್ರಧಾನಿ ಮೋದಿಯವರು  ಪಾಕ್ ಉಗ್ರರ ವಿರುದ್ಧ ಸಮರ ಸಾರುವಾಗ ಸೇನೆಯ ಉನ್ನತ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದರು. ಆದರೆ, ನಿನ್ನೆ  ಪ್ರಧಾನಿ  ಮೋದಿಯವರ 500 ಮತ್ತು 1000 ಬೆಲೆಯ ನೋಟುಗಳನ್ನು  ಬ್ಯಾನ್​ ಮಾಡುವಾಗ ಯಾವೊಬ್ಬ ಅಧಿಕಾರಿಯ ಜೊತೆ ಸಮಾಲೋಚನೆಯನ್ನು ಅವರು ಮಾಡಿರಲಿಲ್ಲ.  ಆರ್ಥಿಕ ತಜ್ಞರ ಸಲಹೆ ಕೇಳಿರಲಿಲ್ಲ.  ಈ ಹಿಂದೆ ಮೋದಿ ಘೋಷಿಸಿದ್ದಂತೆ ಕಪ್ಪು ಹಣದ ವಿರುದ್ಧ ಕಹಳೆ ಮೊಳಗಿಸಿಯೇ ಬಿಟ್ಟಿದ್ದರು. ಅವರ ಈ ನಿರ್ಧಾರ ಕಪ್ಪಹಣ ಹೊಂದಿರೋ ಕುಳಗಳ ಜಂಘಾಬಲವೇ ಕುಸಿದು ಹೋಗಿದೆ. ಅಷ್ಟೇ ಅಲ್ಲ ನಕಲಿ ಹಣ ಮುದ್ರಿತವಾಗುವ ಪಾಕ್​ ಹಾಗೂ ಬಾಂಗ್ಲಾದೇಶದ ಕಳ್ಳರಿಗೂ ಮೋದಿ ‘ಮಾಸ್ಟರ್ ಸ್ಟ್ರೋಕ್'  ನಿದ್ದೆಗೆಡಿಸಿದೆ.

click me!