
ಮಂಡ್ಯ(ಮಾ.11): ರಸ್ತೆ ಮಧ್ಯೆ ಸಿಕ್ಕ ಮಾಂಗಲ್ಯ ಸರವನ್ನು ಗ್ರಾ.ಪಂ. ಸದಸ್ಯನೊಬ್ಬ ಸಾಮಾಜಿಕ ಜಾಲತಾಣವಾದ ಫೇಸ್'ಬುಕ್ ಮೂಲಕ ಹುಡುಕಿ ಮಾಲೀಕರಿಗೆ ನೀಡಿದ ಘಟನೆ ನಡೆದಿದೆ.
ಸರ ಕಳೆದುಕೊಂಡರು ತಮ್ಮನ್ನು ಸಂಪರ್ಕಿಸುವಂತೆ fb ಯಲ್ಲಿ ಯುವಕ ಮನವಿ ಮಾಡಿಕೊಂಡಿದ್ದ. ಇದರಂತೆ ಪ್ರೇಮಾ ಅವರಿಗೆ ಆ ಸರವನ್ನು ನೀಡಿರುವುದಾಗಿ ತಿಳಿಸಿದ್ದಾನೆ.
ಮಂಡ್ಯದ ಮಳವಳ್ಳಿ ತಾಲೂಕಿನ ಕಾನೂನಕೊಪ್ಪಲು ಗ್ರಾ.ಪಂ. ಮಹದೇವು ಎಂಬುವವರಿಗೆ 60 ಗ್ರಾಂ ತೂಕ ಚಿನ್ನದ ಸರ ಸಿಕ್ಕಿತ್ತು. ಸೂಕ್ತ ದಾಖಲಾತಿ ಒದಗಿಸಿ ಮಾಂಗಲ್ಯ ಸರ ಪಡೆಯುವಂತೆ ಯುವಕ ಸಲಹೆ ನೀಡಿದ್ದರು. ಗ್ರಾ.ಪಂ. ಸದಸ್ಯನ ಈ ಪ್ರಾಮಾಣಿಕತೆಗೆ ಸ್ಥಳೀಯರಿಂದ ಪ್ರಶಂಸೆ ವ್ಯಕ್ತವಾಗಿದೆ. ಪೊಲೀಸರಿಗೆ ತಲುಪಿಸಿದರೆ ಅದು ಯಾರಿಗೂ ಸೇರುತ್ತೆ ಎಂದು ಸಾಮಾಜಿಕ ಜಾಲತಾಣದ ಮೊರೆ ಹೋಗಿರುವುದಾಗಿ ಫೇಸ್'ಬುಕ್'ನಲ್ಲಿ ಬರೆದುಕೊಂಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.