
ಮಂಗಳೂರು(ಮಾ.27): ಜೀವನ ಗುಣಮಟ್ಟದ ಸೂಚ್ಯಂಕದಲ್ಲಿ ಇಡೀ ವಿಶ್ವದಲ್ಲಿಯೇ ಮಂಗಳೂರು ನಗರ 48ನೇ ಸ್ಥಾನದಲ್ಲಿದೆ ಎಂದು ‘ನಂಬಿಯೊ ಡಾಟ್ ಕಾಂ' ವೆಬ್‌ಸೈಟ್ ವರದಿ ಮಾಡಿದೆ. ಮೊದಲ 50 ಸ್ಥಾನಗಳಲ್ಲಿ ಭಾರತದ ಮಂಗಳೂರು ಮಾತ್ರ ಸ್ಥಾನ ಗಳಿಸಿದೆ. ಬೆಂಗಳೂರು ನಗರ 132ನೇ ಸ್ಥಾನದಲ್ಲಿದೆ.
ಜೀವನ ಮಟ್ಟದ ಆಧಾರದಲ್ಲಿ ಜಗತ್ತಿನ ಒಟ್ಟು 177 ನಗರಗಳ ಪಟ್ಟಿಯನ್ನು ಈ ವೆಬ್‌ಸೈಟ್ ಬಿಡುಗಡೆಗೊಳಿಸಿದ್ದು, ಅದರಲ್ಲಿ ಭಾರತದ 11 ನಗರಗಳಿವೆ. ದೇಶದ ಎಲ್ಲ ನಗರಗಳಿಗಿಂತ ಮಂಗಳೂರು ಮುಂಚೂಣಿಯಲ್ಲಿದೆ. ಉಳಿದಂತೆ ಪುಣೆ- 102, ಹೈದರಾಬಾದ್- 116, ಕೊಯಮತ್ತೂರು- 131, ಅಹ್ಮದಾಬಾದ್- 138, ಗುರುಗ್ರಾಮ- 141, ಚೆನ್ನೈ- 160, ದೆಹಲಿ- 161, ಕೊಲ್ಕತ್ತಾ- 170, ಮುಂಬೈ 172ನೇ ಸ್ಥಾನದಲ್ಲಿವೆ.
‘ನಂಬಿಯೊ' ಎನ್ನುವುದು ಬಳಕೆದಾರರ ಸಹಭಾಗಿತ್ವದ ಮಾಹಿತಿಯನ್ನೊಳಗೊಂಡ ಜಗ ತ್ತಿನ ಅತಿದೊಡ್ಡ ಡಾಟಾಬೇಸ್ ಎಂದು ವೆಬ್‌ಸೈಟ್ ಹೇಳಿಕೊಂಡಿದೆ. ಆದರೆ ಜೀವನ ಮಟ್ಟದ ಸೂಚ್ಯಂಕ ಸರ್ವೇಯನ್ನು ಸಂಸ್ಥೆಯು ಯಾವಾಗ, ಹೇಗೆ ಮಾಡಿದೆ ಎಂಬ ಬಗ್ಗೆ ವೆಬ್‌ಸೈಟ್‌ನಲ್ಲಿ ಯಾವುದೇ ವಿವರಗಳಿಲ್ಲ. ಸದ್ಯಕ್ಕೆ ಈ ಮಾಹಿತಿಯುಳ್ಳ ಲಿಂಕ್ ಸಾಮಾಜಿಕ ಜಾಲತಾ ಣಗಳಲ್ಲಿ ವೈರಲ್ ಆಗಿದ್ದು, ಮಂಗಳೂರಿನ ಜನತೆಯಂತೂ ಫುಲ್ ಖುಷಿಯಲ್ಲಿ ಮಾಹಿತಿ ‘ಶೇರ್' ಮಾಡುತ್ತಿದ್ದಾರೆ.
ವೆಬ್‌ಸೈಟ್ ಮಾಹಿತಿಯ ಪ್ರಕಾರ ಜಗತ್ತಿನ ದೊಡ್ಡ ದೊಡ್ಡ ನಗರಗಳು ಮಂಗಳೂರಿಗಿಂತ ಕೆಳಗಿನ ಸ್ಥಾನದಲ್ಲಿವೆ. ಅಮೆರಿಕದ ಅಟ್ಲಾಂಟಾ, ಸ್ಯಾನ್ ಫ್ರಾನ್ಸಿಸ್ಕೊ, ಲಾಸ್ ವೇಗಾಸ್ ನಗರಗಳ ಜೀವನ ಮಟ್ಟಮಂಗಳೂರಿಗಿಂತಲೂ ಕೆಳಗಿರು ವುದು ಅಚ್ಚರಿ ತಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.