ಮತ್ತೆ ಶುರುವಾಯ್ತು ಕರಾವಳಿ ಟೆನ್ಷನ್!: 10 ಸಾವಿರ ಬೈಕಲ್ಲಿ 'ಮಂಗಳೂರು ಚಲೋ' ರ್ಯಾಲಿಗೆ ಬಿಜೆಪಿ ಸಜ್ಜು

Published : Sep 05, 2017, 10:14 AM ISTUpdated : Apr 11, 2018, 12:34 PM IST
ಮತ್ತೆ ಶುರುವಾಯ್ತು ಕರಾವಳಿ ಟೆನ್ಷನ್!: 10 ಸಾವಿರ ಬೈಕಲ್ಲಿ 'ಮಂಗಳೂರು ಚಲೋ' ರ್ಯಾಲಿಗೆ ಬಿಜೆಪಿ ಸಜ್ಜು

ಸಾರಾಂಶ

ರಾಜ್ಯದಲ್ಲಿ ನಡೆಯುತ್ತಿರುವ ಹಿಂದು ಕಾರ್ಯಕರ್ತರ ಹತ್ಯೆಗೆ ಪಿಎಫ್'ಐ, ಕೆಎಫ್'ಡಿಐ ಮತ್ತು ಎಸ್‌ಡಿಪಿಐ ಕಾರಣ. ಆ ಸಂಘಟನೆಗಳನ್ನು ನಿಷೇಧಿಸಬೇಕು. ಅವುಗಳಿಗೆ ಸಚಿವ ರಮಾನಾಥ ರೈ ಬೆಂಬಲ ನೀಡುತ್ತಿದ್ದು, ಅವರು ರಾಜೀನಾಮೆ ನೀಡಬೇಕು ಹಾಗೂ ಈ ಹತ್ಯೆ ಪ್ರಕರಣಗಳನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿ ರಾಜ್ಯ ಬಿಜೆಪಿ ಯುವಮೋರ್ಚಾ ಮಂಗಳವಾರದಿಂದ ‘ಮಂಗಳೂರು ಚಲೋ’ ಎಂಬ ಬೃಹತ್ ಪ್ರತಿಭಟನಾ ಕಾರ್ಯಕ್ರಮ ಹಮ್ಮಿಕೊಂಡಿದೆ.

ಬೆಂಗಳೂರು(ಸೆ.05): ರಾಜ್ಯದಲ್ಲಿ ನಡೆಯುತ್ತಿರುವ ಹಿಂದು ಕಾರ್ಯಕರ್ತರ ಹತ್ಯೆಗೆ ಪಿಎಫ್'ಐ, ಕೆಎಫ್'ಡಿಐ ಮತ್ತು ಎಸ್‌ಡಿಪಿಐ ಕಾರಣ. ಆ ಸಂಘಟನೆಗಳನ್ನು ನಿಷೇಧಿಸಬೇಕು. ಅವುಗಳಿಗೆ ಸಚಿವ ರಮಾನಾಥ ರೈ ಬೆಂಬಲ ನೀಡುತ್ತಿದ್ದು, ಅವರು ರಾಜೀನಾಮೆ ನೀಡಬೇಕು ಹಾಗೂ ಈ ಹತ್ಯೆ ಪ್ರಕರಣಗಳನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿ ರಾಜ್ಯ ಬಿಜೆಪಿ ಯುವಮೋರ್ಚಾ ಮಂಗಳವಾರದಿಂದ ‘ಮಂಗಳೂರು ಚಲೋ’ ಎಂಬ ಬೃಹತ್ ಪ್ರತಿಭಟನಾ ಕಾರ್ಯಕ್ರಮ ಹಮ್ಮಿಕೊಂಡಿದೆ.

ಇದರ ಅಂಗವಾಗಿ ಬೆಂಗಳೂರು ಸೇರಿದಂತೆ ಹುಬ್ಬಳ್ಳಿ-ಧಾರವಾಡ, ಮೈಸೂರು, ಶಿವಮೊಗ್ಗ ಮತ್ತು ಚಿಕ್ಕಮಗಳೂರಿ ನಿಂದ ಮಂಗಳವಾರ ಬೈಕ್ ರ್ಯಾಲಿ ಆರಂಭವಾಗಲಿದ್ದು, ಸಹಸ್ರಾರು ಬೈಕ್‌'ಗಳು ಪಾಲ್ಗೊಳ್ಳಲಿವೆ. ಯುವಮೋರ್ಚಾ ಮೂಲದ ಪ್ರಕಾರ, ಸುಮಾರು ರಾಜ್ಯಾದ್ಯಂತ 10 ಸಾವಿರಕ್ಕೂ ಹೆಚ್ಚು ಬೈಕ್‌ಗಳು ಹಾಗೂ 20 ಸಾವಿರಕ್ಕೂ ಹೆಚ್ಚು ಸವಾರರು ರ್ಯಾಲಿಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ರಾಜ್ಯದ ವಿವಿಧೆಡೆಯಿಂದ ಹೊರಡುವ ಬೈಕ್ ರ್ಯಾಲಿಗಳು ಗುರುವಾರ (ಸೆ.7) ಮಂಗಳೂರಿನಲ್ಲಿ ಸೇರುವ ಮೂಲಕ ಅಲ್ಲಿ ಪಕ್ಷದ ಹಿರಿಯ ನಾಯಕರ ನೇತೃತ್ವದಲ್ಲಿ ಸಮಾವೇಶ ನಡೆಸುವ ಉದ್ದೇಶ ಹೊಂದಲಾಗಿದೆ.

ಒಟ್ಟಾರೆ, ಈ ಪ್ರತಿಭಟನೆ ಮೂಲಕ ರಾಜ್ಯದ ಕರಾವಳಿ ಭಾಗದಲ್ಲಿ ಮುಂದಿನ ವಿಧಾನಸಭಾ ಚುನಾವಣೆ ಯ ರಣಕಹಳೆ ಊದಲು ಬಿಜೆಪಿ ಸಜ್ಜಾಗಿದೆ. ಆಯಾ ಭಾಗದಿಂದ ಹೊರಡುವ ರ್ಯಾಲಿಗಳಿಗೆ ಆಯಾ ಭಾಗದ ಬಿಜೆಪಿ ಮುಖಂಡರು ಚಾಲನೆ ನೀಡಲಿದ್ದಾರೆ. ಬೆಂಗಳೂರಿನಿಂದ ಹೊರಡುವ ರ್ಯಾಲಿಗೆ ಫ್ರೀಡಂ ಪಾರ್ಕ್‌ನಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಮಾಜಿ ಡಿಸಿಎಂ ಆರ್.ಅಶೋಕ್ ಮೊದಲಾ ದವರು ಚಾಲನೆ ಕೊಡಲಿದ್ದಾರೆ.

ಕರಾವಳಿ ಭಾಗದ ಸೇರಿದಂತೆ ರಾಜ್ಯದ ವಿವಿಧೆಡೆ ರಾಜಕೀಯ ಕಾರಣಕ್ಕಾಗಿ ಹಿಂದೂ ಕಾರ್ಯಕರ್ತರ ಹತ್ಯೆ ನಡೆಯುತ್ತಿದೆ ಎಂದು ಆಪಾದಿಸಿರುವ ಬಿಜೆಪಿ ಈ ಮಂಗಳೂರು ಚಲೋ ಪ್ರತಿ‘ಟನಾ ಕಾರ್ಯಕ್ರಮದ ಮೂಲಕ ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ಸಂಘರ್ಷಕ್ಕೂ ಮುಂದಾಗಿರುವಂತೆ ಕಂಡು ಬರುತ್ತಿದೆ. ಕಳೆದ ತಿಂಗಳು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಮೂರು ದಿನ ಅವಧಿಗಾಗಿ ರಾಜ್ಯಕ್ಕೆ ಆಗಮಿಸಿ ಪಕ್ಷದ ಮುಖಂಡರನ್ನು ಅದರಲ್ಲೂ ಯುವಮೋರ್ಚಾದ ಕಾರ್ಯವೈಖರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.

ಅಲ್ಲದೆ, ರಾಜ್ಯದಲ್ಲಿ ನಡೆಯುತ್ತಿರುವ ಹಿಂದೂ ಕಾರ್ಯಕರ್ತರ ಹತ್ಯೆಯ ವಿರುದ್ಧ ಬಿಜೆಪಿ ಮುಖಂಡರು ಅವರು ದೆಹಲಿಗೆ ವಾಪಸಾದ ಬೆನ್ನಲ್ಲೇ ಮಂಗಳೂರು ಚಲೋ ಕಾರ್ಯಕ್ರಮ ಹಮ್ಮಿಕೊಳ್ಳುವ ನಿರ್‘ಾರ ಕೈಗೊಳ್ಳಲಾಯಿತು. ಈ ಪ್ರತಿ‘ಟನಾ ಕಾರ್ಯಕ್ರಮದ ಮೂಲಕ ಯುವಮೋರ್ಚಾ ಪದಾಧಿಕಾರಿ ಗಳು ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಸಜ್ಜಾಗಿದ್ದಾರೆ.

ಪಕ್ಷದ ರಾಷ್ಟ್ರೀಯ ಸಹ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರಿಗೆ ಈ ಮಂಗಳೂರು ಚಲೋ ಕಾರ್ಯಕ್ರಮದ ರೂಪುರೇಷೆಯ ಜವಾಬ್ದಾರಿ ನೀಡಲಾಗಿತ್ತು. ಸಂತೋಷ್ ಅವರು ಯುವಮೋರ್ಚಾ ಪದಾಧಿಕಾರಿಗಳೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿ ಕಾರ್ಯಕ್ರಮದ ಸ್ವರೂಪ ನಿ‘ರ್ರಿಸಿದರು. ಆ ಪ್ರಕಾರ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಳ್ಳಾರಿ: 'ಕೈ ಕಾರ್ಯಕರ್ತನ ಎದೆ ಸೀಳಿದ ಬುಲೆಟ್ ಬಿಜೆಪಿಯದ್ದಾ, ಕಾಂಗ್ರೆಸ್‌ನದ್ದಾ?' ಸಿಎಂ ಸಿದ್ದರಾಮಯ್ಯ ಪ್ರಶ್ನೆ!
ಉಗ್ರ ನಸೀರ್‌ಗೆ ಜೈಲಲ್ಲೇ ನೆರವು ಪ್ರಕರಣ, ಮತ್ತೆ ಹೆಚ್ಚುವರಿ ಚಾರ್ಜ್‌ಶೀಟ್ ಸಲ್ಲಿಸಿದ ಎನ್‌ಐಎ!