ಅಂಬರೀಶ್ ವಿರುದ್ಧ ಮಂಡ್ಯದಲ್ಲಿ ವಿನೂತನ ರೀತಿಯಲ್ಲಿ ಪ್ರತಿಭಟನೆ

Published : Nov 03, 2016, 08:51 AM ISTUpdated : Apr 11, 2018, 12:36 PM IST
ಅಂಬರೀಶ್ ವಿರುದ್ಧ ಮಂಡ್ಯದಲ್ಲಿ ವಿನೂತನ ರೀತಿಯಲ್ಲಿ ಪ್ರತಿಭಟನೆ

ಸಾರಾಂಶ

ಮಂಡ್ಯದ ಕಾವೇರಿ ಭವನದಲ್ಲಿರುವ  ಅಂಬರೀಶ್ ಕಚೇರಿಗೆ ಮುತ್ತಿಗೆ ಹಾಕಿದ ಕಾರ್ಯಕರ್ತರು ಕಚೇರಿಯಲ್ಲಿ ಖಾಲಿ ಕುರ್ಚಿಗೆ ಅಂಬರೀಶ್ ಭಾವಚಿತ್ರದ ಫ್ಲೆಕ್ಸ್ ಇಟ್ಟು ಫ್ಲೆಕ್ಸ್ ಮುಂದೆ ಮನವಿ ಪತ್ರಗಳನ್ನು ಇಟ್ಟು ವಿನೂತನ ಪ್ರತಿಭಟನೆ ನಡೆಸಿದ್ದಾರೆ.

ಮಂಡ್ಯ (ನ.03): ವಿನೂತನ ಪ್ರತಿಭಟನೆಗಳಿಗೆ ಹೆಸರುವಾಸಿಯಾಗಿರುವ ಮಂಡ್ಯದ ಜನತೆ ಇಂದು ಮಾಜಿ ಸಚಿವ ಅಂಬರೀಶ್ ವಿರುದ್ಧ ವಿನೂತನ ಪ್ರತಿಭಟನೆ ನಡೆಸಿದ್ದಾರೆ.

ಸಚಿವ ಸ್ಥಾನ ಹೋದ ಮೇಲೆ ಮಂಡ್ಯ ಕ್ಷೇತ್ರದಿಂದ ನಾಪತ್ತೆಯಾಗಿರುವ ಮಂಡ್ಯ ಶಾಸಕ ಅಂಬರೀಶ್ ವಿರುದ್ಧ ಮಂಡ್ಯದ ಜನಶಕ್ತಿ ವೇದಿಕೆ ಮತ್ತು ರೈತ ಸಂಘದ ಕಾರ್ಯಕರ್ತರು ಮಂಡ್ಯದಲ್ಲಿ ಅಂಬರೀಶ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ.

ಮಂಡ್ಯದ ಕಾವೇರಿ ಭವನದಲ್ಲಿರುವ  ಅಂಬರೀಶ್ ಕಚೇರಿಗೆ ಮುತ್ತಿಗೆ ಹಾಕಿದ ಕಾರ್ಯಕರ್ತರು ಕಚೇರಿಯಲ್ಲಿ ಖಾಲಿ ಕುರ್ಚಿಗೆ ಅಂಬರೀಶ್ ಭಾವಚಿತ್ರದ ಫ್ಲೆಕ್ಸ್ ಇಟ್ಟು ಫ್ಲೆಕ್ಸ್ ಮುಂದೆ ಮನವಿ ಪತ್ರಗಳನ್ನು ಇಟ್ಟು ವಿನೂತನ ಪ್ರತಿಭಟನೆ ನಡೆಸಿದ್ದಾರೆ.

ಬೆಳಗಾವಿಯಲ್ಲಿ ಮುಂಬರುವ ದಿನಗಳಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಭಾಗವಹಿಸಿ ಜಿಲ್ಲೆಯ ರೈತರ ಸಮಸ್ಯೆಗಳನ್ನು ಇಟ್ಟು ಸರ್ಕಾರದ ಗಮನ ಸೆಳೆದು ರೈತ್ರ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಜಸ್ಟ್‌ 'ಅದನ್ನ' ನೋಡಿದ, ಕ್ಷಣಮಾತ್ರದಲ್ಲಿ ಅಮೆರಿಕ 'O-1B ವೀಸಾ' ನೀಡಿದ: ಮಾಡೆಲ್ ಹೇಳಿಕೆಗೆ ನೆಟ್ಟಿಗರು ಶಾಕ್‌!
Breaking News: ಕೋಮುದ್ವೇಷ ಭಾಷಣ ಆರೋಪ: ಹಿಂದೂ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಮತ್ತೆ ಎಫ್‌ಐಆರ್!