ಸಿಎಂ ಜೊತೆ ಸೆಲ್ಫಿಗೆ ಮುಗಿಬಿದ್ದ ಯುವಕರು

By Web DeskFirst Published Oct 28, 2018, 1:02 PM IST
Highlights

ಮುಖ್ಯಮಂತ್ರಿ ಪಟ್ಟಣಕ್ಕೆ ಆಗಮಿಸಿದೊಡನೆ ಯುವಕರ ದಂಡು ಸಿಎಂ ಕುಮಾರಸ್ವಾಮಿ ಅವರೊಂದಿಗೆ ಪೋಟೋಗಳನ್ನು ಕ್ಲಿಕ್ಕಿಸಿಕೊಂಡರು. ನಂತರ ಸೆಲ್ಫಿ ತೆಗೆದುಕೊಳ್ಳಲು ಸಿಎಂ ಇದ್ದ ಕಡೆ ನುಗ್ಗಿ ಹೋದರು. ಈ ವೇಳೆ ಮುಖ್ಯಮಂತ್ರಿಗಳು ಕಾರಿನಿಂದ ಇಳಿಯಲು ಹರಸಾಹಸ ಪಡುವಂತಾಯಿತು.

ಕಿಕ್ಕೇರಿ[ಅ.28]: ಕಿಕ್ಕೇರಿಯಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಯುವಕರು ಮುಗಿಬಿದ್ದ ಘಟನೆ ಶನಿವಾರ ನಡೆಯಿತು.

ಕೆ.ಆರ್.ಪೇಟೆಯಲ್ಲಿ ಜೆಡಿಎಸ್ ಪಕ್ಷದ ಲೋಕಸಭಾ ಉಪಚುನಾವಣೆ ಪ್ರಚಾರ ಸಭೆ ಮುಗಿಸಿಕೊಂಡು ಪಟ್ಟಣದ ಮಾರ್ಗವಾಗಿ ಚನ್ನರಾಯಪಟ್ಟಣಕ್ಕೆ ಹೋಗುವ ವೇಳೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಪಕ್ಷದ ಕಾರ್ಯಕರ್ತರು ಸಂಭ್ರಮದಿಂದ ಬರಮಾಡಿಕೊಳ್ಳಲು ಮುಂದಾದರು.

ಈ ವೇಳೆ ಯುವಕರು ಮುಖ್ಯಮಂತ್ರಿಗಳೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಂದಾದ ವೇಳೆ ನೂಕುನುಗ್ಗಲು ಉಂಟಾಯಿತು. ಮುಖ್ಯಮಂತ್ರಿ ಪಟ್ಟಣಕ್ಕೆ ಆಗಮಿಸಿದೊಡನೆ ಯುವಕರ ದಂಡು ಸಿಎಂ ಕುಮಾರಸ್ವಾಮಿ ಅವರೊಂದಿಗೆ ಪೋಟೋಗಳನ್ನು ಕ್ಲಿಕ್ಕಿಸಿಕೊಂಡರು. ನಂತರ ಸೆಲ್ಫಿ ತೆಗೆದುಕೊಳ್ಳಲು ಸಿಎಂ ಇದ್ದ ಕಡೆ ನುಗ್ಗಿ ಹೋದರು. ಈ ವೇಳೆ ಮುಖ್ಯಮಂತ್ರಿಗಳು ಕಾರಿನಿಂದ ಇಳಿಯಲು ಹರಸಾಹಸ ಪಡುವಂತಾಯಿತು.ಕಾರ್ಯಕರ್ತರು ತಂದಿದ್ದ ಭಾರಿ ಗಾತ್ರದ ಗುಲಾಬಿಯ ಪುಷ್ಪಮಾಲೆ ಹಾಕಲು ಅಡಚಣೆಯಾಯಿತು. ಎತ್ತ ನೋಡಿದರೂ ಸೆಲ್ಫಿ ಹಾವಳಿ ಹೆಚ್ಚಾಗಿತ್ತು.
 
ಮಂಡ್ಯ ಜೆಡಿ ಎಸ್ ಭದ್ರಕೋಟೆ. ಇದು ಲೋಕಸಭೆಯಲ್ಲಿ  ಗೊತ್ತಾಗಬೇಕು. ಮತೊಮ್ಮೆ ತೋರಿಸಿಕೊಡಿ. ನಿಮ್ಮೊಂದಿಗೆ ಸದಾ ನಾನಿರುವೆ. ಜಿಲ್ಲೆಯ ಅಭಿವೃದ್ಧಿಗೆ ತನ್ನ ಸಹಕಾರ ನೀಡುತ್ತೇನೆ ಎಂದು ಮನವಿ ಮಾಡಿದರು. ಅಭಿಮಾನಿಗಳು, ಕಾರ್ಯಕರ್ತರು ಮುಖ್ಯಮಂತ್ರಿಗಳಿಗೆ ಜೈಕಾರ ಹಾಕಿ ಬೀಳ್ಕೊಟ್ಟರು. ಜಿಪಂ ಮಾಜಿ ಉಪಾಧ್ಯಕ್ಷ ಕೆ.ಎಸ್.ಪ್ರಭಾಕರ್, ತಾ.ಪಂ.ಸದಸ್ಯರಾದ ರವಿ, ಶಾರದಾ ಕೃಷ್ಣೇಗೌಡ ಮುಂತಾದವರು ಹಾಜರಿದ್ದರು.

click me!