ಒಟ್ಟಿಗೆ ಈಜಿದ್ದು, ಗಾಲ್ಫ್ ಆಡಿದ್ದು : ಪ್ರೀತಿ ಪಾತ್ರರಾದ ಅರ್ಜನ್ ಸಿಂಗ್'ರನ್ನು ನೆನದ ಮಂದಿರಾ

By Suvarna Web Desk  |  First Published Sep 17, 2017, 8:30 PM IST

ತಮಗೆ ಹೆಚ್ಚು ವಯಸ್ಸಾಗಿರುವುದನ್ನೇ ಅವರು ಮರೆತು ಬಿಡುತ್ತಿದ್ದರು. ಅವರ ಜೀವನವನ್ನು ಒಮ್ಮೆ ತಿರುಗಿ ನೋಡಿದರೆ ವಿಶಿಷ್ಟ ಮತ್ತು ಗೌರವಾನ್ವಿತವಾಗಿ ಜೀವಿಸಿದ್ದರು


ನವದೆಹಲಿ(ಸೆ.17): ಅಪ್ರತಿಮ ಯೋಧ ಭಾರತದ ಮೊದಲ ಮಾರ್ಶಲ್ ಅರ್ಜನ್ ಸಿಂಗ್ ನಿನ್ನೆ ಹೃದಯಾಘಾತದಿಂದ ನಿಧನರಾಗಿದ್ದು, ಇಡೀ ದೇಶವೇ ಕಂಪನಿ ಮಿಡಿಯುತ್ತಿದೆ.

ಇವರ ಸಾವಿನಿಂದ ಪ್ರಖ್ಯಾತರೊಬ್ಬರು ಸಹ ದುಃಖಿಸುತ್ತಿದ್ದಾರೆ. ಅವರು ಮತ್ಯಾರು ಅಲ್ಲ ಬಾಲಿವುಡ್ ನಟಿ, ಮಾಡಲ್, ಕ್ರಿಕೆಟ್'ನ ವೀಕ್ಷಕ ವಿವರಣೆಗಾರ್ತಿಯಾದ ಮಂದಿರ ಬೇಡಿ. ಮಂದಿರ ಅರ್ಜನ್ ಅವರಿಗೆ ಅತ್ಯಂತ ಆಪ್ತರು. ಇವರ ಸ್ವಂತ ತಾಯಿಯ ಸಹೋದರಿಯನ್ನು ಅರ್ಜನ್ ವಿವಾಹವಾಗಿದ್ದಾರೆ. ಆದ ಕಾರಣದಿಂದ ಮಂದಿರಾ ಕುಟುಂಬಕ್ಕೆ ಅರ್ಜನ್ ಅವರು ತುಂಬ ಹತ್ತಿರ.

Tap to resize

Latest Videos

ಅರ್ಜನ್'ರೊಂದಿಗೆ ಕಳೆದಿರುವ ದಿನಗಳನ್ನು ಮೆಲುಕು ಹಾಕಿರುವ ಮಂದಿರ, ದೆಹಲಿಗೆ ಬಂದಾಗಲೆಲ್ಲ ಅವರನ್ನು ಭೇಟಿಯಾಗುತ್ತಿದ್ದೆ. ಅವರಿಗೆ 98 ವಯಸ್ಸಾದರೂ ಅವರೊಟ್ಟಿಗೆ ಬಾಂಧವ್ಯವನ್ನು ಬಿಟ್ಟಿರಲಿಲ್ಲ. ಅವರು ಯಾವಾಗಲು ಅರ್ಥಪೂರ್ಣವಾಗಿ ಮಾತನಾಡುತ್ತಿದ್ದರು. ತಮಗೆ ಹೆಚ್ಚು ವಯಸ್ಸಾಗಿರುವುದನ್ನೇ ಅವರು ಮರೆತು ಬಿಡುತ್ತಿದ್ದರು. ಅವರ ಜೀವನವನ್ನು ಒಮ್ಮೆ ತಿರುಗಿ ನೋಡಿದರೆ ವಿಶಿಷ್ಟ ಮತ್ತು ಗೌರವಾನ್ವಿತವಾಗಿ ಜೀವಿಸಿದ್ದರು.

ಈಜಿದ, ಗಾಲ್ಫ್ ಆಡಿದ ನೆನಪು

ಅವರು ತಮ್ಮ ಜೀವನದಲ್ಲಿ ಅನೇಕ ಸಾಧನೆಗಳನ್ನು ಸಾಧಿಸಿದ್ದಾರೆ. ಆದರೆ ಅದ್ಯಾವುದನ್ನು ದೊಡ್ಡದೆಂದು ಹೇಳಿಕೊಳ್ಳುತ್ತಿರಲಿಲ್ಲ. ನಾವಿಬ್ಬರು ಸುಂದರ ಸ್ನೇಹಮಯ ಸಂಬಂಧವನ್ನು ಹೊಂದಿದ್ದೆವು. ಅದು ಹೇಗಿತ್ತೆಂದರೆ ಪರಸ್ಪರ 'ನಾನು ನಿನ್ನನ್ನು ಪ್ರೀತಿಸುತ್ತೇನೆ' ಎಂದು ಹೇಳುವ ಮಟ್ಟಿಗೆ. ಅಷ್ಟು ಹತ್ತಿರವಾಗಿತ್ತು ನಮ್ಮ ಸ್ನೇಹ. ಇನ್ನೊಂದು ಮುಖ್ಯ ವಿಷಯವೆಂದರೆ ಇಮ್ಮಿಬ್ಬರ ಹುಟ್ಟಿದ ದಿನ ದೆ ಆಗಿದೆ ಅದು ಏಪ್ರಿಲ್ 15.ಇದನ್ನಂತು ನಾನೆಂದು ಮರೆಯುವುದಿಲ್ಲ. ಪ್ರತಿ ಹುಟ್ಟು ಹಬ್ಬದ ಆಚರಣೆ ದಿನವೂ ನಾನು ಕರೆ ಮಾಡುತ್ತಿದ್ದೆ ಅಥವಾ ಅವರು ನನಗೆ ಶುಭ ಕೋರುತ್ತಿದ್ದರು.

ವಾರದಲ್ಲಿ 2 ಬಾರಿ ಇಬ್ಬರು ಗಾಲ್ಫ್ ಆಡುತ್ತಿದ್ದೆವು. ಆಟವಾಡುವಾಗ ಸದೃಢರಾಗುತ್ತಿದ್ದರು. ನನಗಿನ್ನು ನೆನಪಿದೆ ನನಗೆ 10 ಅಥವಾ 11 ವರ್ಷವಿರಬೇಕು ಒಂದು ಸಂಜೆ ಐತಿಹಾಸಿಕ ಸ್ಥಳವಾದ ರಾಷ್ಟ್ರಪತಿ ಭವನದ ಈಜುಕೊಳಕ್ಕೆ ನನ್ನನ್ನು ಈಜಿಗೆ ಕರೆದುಕೊಂಡು ಹೋಗಿದ್ದರು. ಇದು ಕೂಡ ನನ್ನ ನೆನಪಿಂದ ಮಾಸುವುದಿಲ್ಲ. ನಾನು ಚಿಕ್ಕವಳಿದ್ದಾಗ ಅಂಚೆ ಚೀಟಿಗಳನ್ನು ಸಂಗ್ರಹಿಸುವ ಅಭ್ಯಾಸವಿತ್ತು. ಅವರ ಮನೆಗೆ ಹೋದಾಗ ಕಸದ ಡಬ್ಬಿಯಲ್ಲಿ ಅಂಚೆ ಚೀಟಿಗಳನ್ನು ಹುಡುಕಿದ್ದು ನನಗೆ ನೆನಪಿದೆ' ಎಂದು ನೆನಪುಗಳನ್ನು ಸರಮಾಲೆಗಳನ್ನು ಬಿಟ್ಟಿಟ್ಟರು.

 

 

click me!