
ಕುರುಕ್ಷೇತ್ರ, ಹರ್ಯಾಣ (ಅ.30): ಪಾಕಿಸ್ತಾನ ಸೈನಿಕರು ಹಾಗೂ ಉಗ್ರವಾಗಿಗಳು ಜಂಟಿಯಾಗಿ ನಡೆಸಿದ ದಾಳಿಗೆ ಶುಕ್ರವಾರ ಹುತಾತ್ಮರಾದ ಮನ್ ದೀಪ್ ಸಿಂಗ್ ಗ್ರಾಮಸ್ಥರು ಈ ಬಾರಿ ದೀಪಾವಳಿ ಆಚರಿಸದಿರಲು ನಿರ್ಧರಿಸಿದ್ದಾರೆ.
ಹುತಾತ್ಮನ ಶೋಕಾಚರಣೆಯ ನಿಮಿತ್ತ ಅಂತೇಡಿ ಗ್ರಾಮದ ಜನರು ಈ ಬಾರಿ ದೀಪಾವಳಿಯನ್ನು ಆಚರಿಸುವುದಿಲ್ಲ, ಕೇವಲ ಒಂದು ದೀಪವನ್ನು ಮನೆಗಳಲ್ಲಿ ಬೆಳಗಲಿದ್ದಾರೆ ಎಂದು ಗ್ರಾಮದ ಮುಖ್ಯಸ್ಥ ಸುಭಾಶ್ ಚಂದ್ರ ಹೇಳಿದ್ದಾರೆ.
ಮನದೀಪ್ ಸಿಂಗ್, ಗಡಿಯಲ್ಲಿ ನಡೆಯುತ್ತಿರುವ ಸೇನಾ ಕಾರ್ಯಾಚರಣೆಯಲ್ಲಿ ಪ್ರಾಣ ಕಳೆದುಕೊಂಡಿರುವ ಕುರುಕ್ಷೇತ್ರದ ಎರಡನೇ ಯೋಧರಾಗಿದ್ದಾರೆ.
ಹುತಾತ್ಮ ಮನ್ ದೀಪ್ ಸಿಂಗ್ ಅವರ ಪಾರ್ಥಿವ ಶರೀರವನ್ನು ಹುಟ್ಟೂರಾದ ಕುರುಕ್ಷೇತ್ರದ ಅಂತೇಡಿ ಗ್ರಾಮದಲ್ಲಿ ಇಂದು ಸಕಲ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲಾಯಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.