
ನವದೆಹಲಿ [ಸೆ.11]: ಪತಿ- ಪತ್ನಿಯರ ಮಧ್ಯೆ ಸಣ್ಣಪುಟ್ಟ ಕಾರಣಕ್ಕೆ ಜಗಳವಾಗಿ ವಿಚ್ಛೇದನ ಪಡೆಯುವ ಹಂತಕ್ಕೆ ತಲುಪುತ್ತಿರುವ ಈ ಕಾಲದಲ್ಲಿ, ಇಲ್ಲೊಬ್ಬ ಪತಿ ಮಹಾಶಯ ಮಾತ್ರ ತನ್ನ ಪತ್ನಿ ಸುಖನಿದ್ರೆ ಮಾಡಲಿ ಎಂಬ ಕಾರಣಕ್ಕೆ 6 ಗಂಟೆ ವಿಮಾನದಲ್ಲಿ ನಿಂತುಕೊಂಡೇ ಪ್ರಯಾಣ ಮಾಡಿದ್ದಾನೆ.
ಕೂರ್ಟಿ ಲೀ ಜಾನ್ಸನ್ ಎಂಬುವವರು ಈ ಚಿತ್ರವನ್ನು ಟ್ವೀಟ್ ಮಾಡಿದ್ದು, ಭಾರೀ ವೈರಲ್ ಆಗಿದೆ. ಈ ಘಟನೆ ನಡೆದ ಸ್ಥಳ, ಪ್ರಯಾಣದ ಮಾರ್ಗದ ಮಾಹಿತಿ ಲಭ್ಯವಾಗಿಲ್ಲ. ಟ್ವೀಟ್‌ನಲ್ಲಿ ಹೇಳಿದಂತೆ ವಿಮಾನದಲ್ಲಿ ಮೂರು ಸೀಟುಗಳ ಮೇಲೆ ಮಲಗಿದ್ದ ಪತ್ನಿಗಾಗಿ, ಪತಿಯೋರ್ವ ಬರೋಬ್ಬರಿ 6 ತಾಸು ನಿಂತಿದ್ದನಂತೆ.
ಹೆಚ್ಚಿನ ಕರ್ನಾಟಕ ಜಿಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
ಸಹಪ್ರಯಾಣಿಕ ಜಾನ್ಸನ್ ಈ ದೃಶ್ಯವನ್ನು ಕ್ಲಿಕ್ಕಿಸಿ ಟ್ವಿಟರ್‌ನಲ್ಲಿ ಹಾಕಿಕೊಂಡಿದ್ದ. ಅಲ್ಲದೇ, ‘ಇದಲ್ಲವೇ ನಿಜವಾದ ಪ್ರೀತಿ ಅಂದರೆ’ ಎಂದು ಅಡಿಬರಹ ಬರೆದುಕೊಂಡಿದ್ದಾನೆ. ಈ ಚಿತ್ರಕ್ಕೆ ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ. ಪತಿಯನ್ನು ನಿಲ್ಲಿಸಿ ಪತ್ನಿ 6 ತಾಸು ಮಲಗಿದ್ದು ಎಷ್ಟು ಸರಿ ಎಂದು ಕೆಲವರು ಮರು ಪ್ರಶ್ನೆಯನ್ನೂ ಹಾಕಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.