ಮೋದಿ ರೀತಿ ರೇಡಿಯೋ ಕಾರ್ಯಕ್ರಮ ಆರಂಭಿಸಿದ ಛತ್ತೀಸ್‌ಗಢ ಕಾಂಗ್ರೆಸ್ ಸಿಎಂ| ಕಳೆದ ತಿಂಗಳು ಆರಂಭವಾದ ಈ ಕಾರ್ಯಕ್ರಮ ಈಗಾಗಲೇ 2 ಕಂತು ಕಂಡಿದೆ
ನವದೆಹಲಿ[ಸೆ.11]: ಪ್ರಧಾನಿ ನರೇಂದ್ರ ಮೋದಿ ನಡೆಸಿಕೊಡುವ ಮಾಸಿಕ ‘ಮನ್ ಕೀ ಬಾತ್’ ಕಾರ್ಯಕ್ರಮದ ರೀತಿಯಲ್ಲೇ, ಛತ್ತೀಸ್‌ಗಢದ ಕಾಂಗ್ರೆಸ್ ಮುಖ್ಯಮಂತ್ರಿ ಭೂಪೇಶ್ ಬಘೇಲ್ ತಾವು ರೇಡಿಯೋ ಕಾರ್ಯಕ್ರಮ ಆರಂಭಿಸಿದ್ದಾರೆ.
ಕಳೆದ ತಿಂಗಳು ಆರಂಭವಾದ ಈ ಕಾರ್ಯಕ್ರಮ ಈಗಾಗಲೇ 2 ಕಂತು ಕಂಡಿದೆ. ಬಘೇಲ್‌ರ ಮೊದಲ ರೇಡಿಯೋ ಕಾರ್ಯಕ್ರಮ ‘ಲೋಕ ವಾಣಿ’ ಛತ್ತೀಸ್‌ಗಢದ ಎಲ್ಲಾ ಆಕಾಶವಾಣಿ ಕೇಂದ್ರಗಳು, ಎಫ್‌ಎಮ್ ರೇಡಿಯೋ ಹಾಗೂ ಸ್ಥಳೀಯ ಸುದ್ದಿವಾಹಿನಿಗಳಲ್ಲಿ ಆ.11ರ ಮುಂಜಾನೆ 10.30ರಿಂದ 10.55ರ ವರೆಗೆ ಪ್ರಸಾರವಾಗಿದೆ.
ದಿಢೀರ್ ಅಧ್ಯಕ್ಷ ಬದಲಿಸಿದ ರಾಹುಲ್: ತಕ್ಷಣದಿಂದಲೇ ಜಾರಿಯ ಫರ್ಮಾನು!
ಸೆ.8ರಂದು 2ನೇ ಕಂತು ಪ್ರಸಾರವಾಗಿತ್ತು. ಪ್ರತಿ ತಿಂಗಳ 2ನೇ ಭಾನುವಾರದಂದು ರೇಡಿಯೋ ಕಾರ್ಯಕ್ರಮ ಪ್ರಸಾರವಾಗಲಿದೆ.