
ನವದೆಹಲಿ(ಮೇ 11): ಪತ್ನಿ ಸಾವನ್ನಪ್ಪಿದ್ದರೂ ಅದನ್ನು ಅರಗಿಸಿಕೊಳ್ಳುವ ಸ್ಥಿತಿಯಲ್ಲಿಲ್ಲದ ಬ್ರಿಟನ್'ನ ವ್ಯಕ್ತಿಯೊಬ್ಬ, ಪತ್ನಿಯ ಶವದ ಜೊತೆ 6 ದಿನ ಮಲಗಿದ ಘಟನೆ ಬೆಳಕಿಗೆ ಬಂದಿದೆ. 10 ವರ್ಷಗಳಿಂದ ಸೆರ್ವಿಕಲ್ ಕ್ಯಾನ್ಸರ್'ನಿಂದ ಬಳಲುತ್ತಿದ್ದ 50 ವರ್ಷದ ವೆಂಡಿ ಡೇವಿಸನ್ ಕಳೆದ ತಿಂಗಳ ಏ.21ರಂದು ತಮ್ಮ ಪತಿಯ ಅಪ್ಪುಗೆಯಲ್ಲೇ ಕೊನೆಯುಸಿರೆಳೆದಿದ್ದಳು. ಪತಿ ರಸೆಲ್ ಡೇವಿಸನ್'ಗೆ ತನ್ನ ಪತ್ನಿಯ ಸಾವಿನ ವಿಚಾರವನ್ನು ಒಪ್ಪಿಕೊಳ್ಳದ ಮಟ್ಟಕ್ಕೆ ಕುಸಿದುಬಿಡುತ್ತಾರೆ.
ಶವವನ್ನು ಶವಾಗಾರಕ್ಕೆ ಕಳುಹಿಸಲು ಒಪ್ಪದ ಆ ವ್ಯಕ್ತಿಯು ವಿಚಿತ್ರವಾಗಿ ವರ್ತಿಸಲು ಆರಂಭಿಸುತ್ತಾರೆ. ಧಾರ್ಮಿಕ ಪದ್ಧತಿ ಪ್ರಕಾರವೇ ಶವಕ್ಕೆ ಸ್ನಾನ ಮಾಡಿಸುವ ಅವರು ಸುಗಂಧ ಪುಷ್ಪದ ಉಡುಗೆಯನ್ನು ತೊಡಿಸುತ್ತಾರೆ. ನಂತರ ಆಕೆಯ ದೇಹವನ್ನು ಶವಪೆಟ್ಟಿಗೆಯೊಳಗೆ ಇಡುತ್ತಾರೆ. ಆದರೆ, ಶವಪೆಟ್ಟಿಗೆ ಎಂಬ ಪದವನ್ನು ತನ್ನ ಪತ್ನಿ ಇಷ್ಟಪಡುತ್ತಿರಲಿಲ್ಲವೆಂದು ಅದಕ್ಕೆ ರಕ್ಷಾ ಕವಚ ಎಂದು ರೆಸೆಲ್ ಡೇವಿಸನ್ ಕರೆಯುತ್ತಾರೆ. ಇಷ್ಟೇ ಆಗಿದ್ದರೆ ಅದು ಸಹಜ ವರ್ತನೆಯೇ ಆಗಿರುತ್ತೇನೋ. ಆದರೆ, ರಸೆಲ್ ಡೇವಿಸನ್ ತನ್ನ ಪತ್ನಿಯ ಶವಪೆಟ್ಟಿಗೆಯ ಬಳಿ 6 ದಿನಗಳ ಕಾಲ ಮಲಗುತ್ತಾರೆ.
"ವೆಂಡಿ ಯಾವುದೇ ನೋವಿಲ್ಲದೇ ನನ್ನ ಮತ್ತು ಮಗ ಡೈಲನ್'ನ ತೋಳಿನಲ್ಲಿ ಬಹಳ ಶಾಂತ ರೀತಿಯಲ್ಲಿ ಇಹಲೋಕ ತ್ಯಜಿಸಿದ್ದಾಳೆ," ಎಂದು ರಸೆಲ್ ಹೇಳುತ್ತಾರೆ.
2006ರಲ್ಲಿ ವೆಂಡಿ ಡೇವಿಸನ್'ಗೆ ಸೆರ್ವಿಕಲ್ ಕ್ಯಾನ್ಸರ್ ಇರುವುದು ಗೊತ್ತಾಗಿದೆ. ಆದರೆ, ಕ್ಯಾನ್ಸರ್'ಗೆ ನೀಡಲಾಗುವ ಕೆಮೋಥೆರಪಿ ಮತ್ತು ರೇಡಿಯೋಥೆರಪಿ ಚಿಕಿತ್ಸೆಯನ್ನು ಪಡೆಯಲು ಈ ದಂಪತಿ ನಿರಾಕರಿಸುತ್ತಾರೆ. ಪ್ರಾಕೃತಿಕ ವಿಧಾನಗಳನ್ನೇ ಅನುಸರಿಸಿಕೊಂಡು ಬಂದಿರುತ್ತಾರೆ. ರಸೆಲ್ ಹೇಳುವ ಪ್ರಕಾರ, ತಮ್ಮ ಪ್ರಾಕೃತಿಕ ವಿಧಾನದಿಂದಾಗಿ ಪತ್ನಿ ಇಷ್ಟು ವರ್ಷ ಬದುಕಲು ಸಾಧ್ಯವಾಯಿತಂತೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.