
ವಾಷಿಂಗ್ಟನ್(ಜೂ.25): ಪ್ರೇಮಕ್ಕೆ ಕಣ್ಣಿಲ್ಲ ಅಂತಾರಲ್ಲ ಅದೆಷ್ಟು ನಿಜ ನೋಡಿ. ಪ್ರೇಮಕ್ಕೆ ವಯಸ್ಸಿನ ಹಂಗೂ ಇಲ್ಲ. ಅದು ಆಯಸ್ಸೆಂಬ ಗಡಿಯನ್ನು ಮೀರಿ ಹುಟ್ಟುತ್ತದೆ, ಬೆಳೆಯುತ್ತದೆ. ಇದಕ್ಕೆ ಜಗತ್ತಿನಲ್ಲಿ ಬೇಕಾದಷ್ಟು ಉದಾಹರಣೆಗಳು ಸಿಗುತ್ತವೆ. ಕೆಲವೊಂದು ಇಲ್ಲಿವೆ ನೋಡಿ.
ಕೈಲ್ ಜೋನ್ಸ್ ಎಂಬ 31 ವರ್ಷದ ವ್ಯಕ್ತಿಗೆ 91 ವರ್ಷದ ಮಾರ್ಜೊರಿ ಮ್ಯಾಕ್‌ಕೂಲ್ ಮೇಲೆ ಲವ್ ಆಗಿದೆ. ಇಬ್ಬರೂ ಒಟ್ಟೊಟ್ಟಿಗೆ ಕೈ ಹಿಡಿದುಕೊಂಡು ಪಾರ್ಕ್ ಸುತ್ತುತ್ತಾರೆ, ಸಿನಿಮಾ ನೋಡುತ್ತಾರೆ, ಒಟ್ಟಿಗೆ ಸಮಯ ಕಳೆದುಕೊಳ್ಳುತ್ತಾರೆ. ಆಕಾಶದಲ್ಲಿ ಸ್ವಚ್ಛಂದ ಹಕ್ಕಿಗಳಂತೆ ಹಾರಾಡುವ ಈ ಜೋಡಿ ನೋಡಲು ವಿಚಿತ್ರ ಎನಿಸಿದರೂ, ಇವರ ನಡುವಿನ ಅಗಾಧ ಪ್ರೇಮಕ್ಕೆ ಮಾತ್ರ ಸೈ ಎನ್ನಲೇಬೇಕು.
ಕೈಲ್ ಮೊದಲ ಭೇಟಿಯಲ್ಲೇ ಮಾರ್ಜೊರಿ ಅವರನ್ನು ಇಷ್ಟಪಡಲು ಶುರು ಮಾಡಿದ್ದಾನೆ. ಮಾರ್ಜೊರಿ ಅವರಿಗೆ ತಮ್ಮ ಪ್ರೇಮ ನಿವೇದನೆ ಮಾಡಿದಾಗ ತುಸು ಇರಿಸುಮುರುಸು ಆಗಿತ್ತಾದರೂ ನಂತರ ಕೈಲ್ ಅವರ ಪ್ರಸ್ತಾವನೆಯನ್ನು ಒಪ್ಪಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಕೈಲ್ ತಮ್ಮ ಪೋಷಕರಿಗೂ ಈ ವಿಷಯ ತಿಳಿಸಿ ಅವರ ಒಪ್ಪಿಗೆಯನ್ನೂ ಪಡೆದುಕೊಂಡಿದ್ದಾನೆ.
ಆದರೆ ಕೈಲ್ ಕೇವಲ ಮಾರ್ಜೊರಿ ಜೊತೆ ಮಾತ್ರ ಪ್ರೇಮ ಸಂಬಂಧ ಹೊಂದಿಲ್ಲ. ಬದಲಿಗೆ 68 ವರ್ಷದ ಆನ್ನಾ ರೋನಾಲ್ಡ್ ಎಂಬ ಮಹಿಳೆಗೂ ಈತನೇ ಲವರ್. ಡೇಟಿಂಗ್ ಸೈಟ್‌ವೊಂದರಲ್ಲಿ ಭೇಟಿಯಾದ ಆನ್ನಾ ಮತ್ತು ಕೈಲ್, ಪರಸ್ಪರ ಭೇಟಿಯಾಗಿ ಪ್ರೇಮ ಸಂಬಂಧ ಬೆಳೆಸಿದ್ದಾರೆ. ಈ ಕುರಿತು ಮಾರ್ಜೊರಿಗೆ ಯಾವುದೇ ವಿಷಾದವಿಲ್ಲ ಎಂಬುದು ವಿಶೇಷ.
ಯಾಕಪ್ಪಾ ನಿನಗಿಂತ ಹಿರಿಯ ವಯಸ್ಸಿನ ಮಹಿಳೆ ಜೊತೆಗೆ ನಿಂಗೆ ಲವ್ವು ಅಂತಾ ಕೇಳಿದರೆ, ಕೈಲ್ ತನ್ನದೇ ಆದ ಕಾರಣಗಳನ್ನು ನೀಡುತ್ತಾನೆ. ಆದರೆ ಕೈಲ್ 91 ಮತ್ತು 68 ವರ್ಷದ ಮಹಿಳೆ ಜೊತೆ ಕೈಲ್ ಆರಾಮವಾಗಿ ಬದುಕು ನಡೆಸುತ್ತಿರುವ ಪರಿ ಮಾತ್ರ ಅನನ್ಯ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.