
ಬಿಜಿಂಗ್(ಜೂ.14): ಈ ವ್ಯಕ್ತಿಯ ನಸೀಬು ಕಂಡು ಖುದ್ದು ದೇವರೇ ಅಯ್ಯೋ ವಿಧಿಯೇ..! ಅಂತಾ ಉದ್ಘಾರ ತೆಗೆದರೆ ಅಚ್ಚರಿಪಡಬೇಕಿಲ್ಲ. ಕಾರಣ ವಿಧಿ ಈತನಿಗೆ ಕೊಟ್ಟ ಏಟು ಅಂತಿಂತದ್ದಲ್ಲ. ತನ್ನ ಹೊಚ್ಚ ಹೊಸ ಬಿಎಂಡಬ್ಲ್ಯೂ ಕಾರಿನಲ್ಲಿ ಊದಿನ ಕಡ್ಡಿ ಹಚ್ಚಿ, ಇಡೀ ಕಾರನ್ನೇ ಬೆಂಕಿಗೆ ಆಹುತಿ ಮಾಡಿದ್ದಾನೆ ಈ ಭೂಪ.
ಚೀನಾದ ಯಾಂಗ್ಜೋವು ನಗರದಲ್ಲಿ ವ್ಯಕ್ತಿಯೊಬ್ಬ ಹೊಸ ಬಿಎಂಡಬ್ಲ್ಯೂ ಕಾರನ್ನು ಖರೀದಿಸಿದ್ದ. ಹೊಸ ಕಾರಿಗೆ ಪೂಜೆ ಮಾಡಿ ಕಾರಿನ ಒಳಗಡೆ ಊದಿನ ಕಡ್ಡಿಯನ್ನು ಹಚ್ಚಿ ದೇವರಿಗೆ ಕೈಮುಗಿದಿದ್ದೇ ತಡ ಕಾರು ಧಗಧಗ ಹೊತ್ತಿ ಉರಿದಿದೆ. ಮನೆಗೆ ತಂದ ಹೊಸ ಕಾರಿಗೆ ಪೂಜೆ ಮಾಡುವ ವೇಳೆ ಕಾರಿನ ಬಳಿ ಕೆಂಪು ಹಾಸು ಹೊದಿಸಲಾಗಿತ್ತು.
ಪೂಜೆ ಮುಗಿದ ಬಳಿಕ ಊದಿನ ಕಡ್ಡಿ ಬೆಳಗಲು ಮುಂದಾದ ಕ್ಷಣದಲ್ಲಿ ಕೆಂಪು ಹಾಸಿಗೆ ಬೆಂಕಿ ತಗುಲಿ ಕೂಡಲೇ ಇಡೀ ಕಾರು ಭಸ್ಮವಾಗಿದೆ. ಹೊಸ ಬಿಎಂಡಬ್ಲ್ಯೂ ಕಾರು ಹೊತ್ತಿ ಉರಿಯುತ್ತಿರುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಹೊಸ ಕಾರಿಗೆ ಪೂಜೆ ಮಾಡುವ ಸಂದರ್ಭದಲ್ಲಿ ಅಜಾಗರೂಕತೆ ಪ್ರದರ್ಶಿಸಿದ ವ್ಯಕ್ತಿಗೆ ನೆಟಿಜನ್ಸ್ ಚಾಟಿ ಬೀಸಿದ್ದಾರೆ. ಈ ಹೊಸ ಕಾರಿನ ಬೆಲೆ ಸುಮಾರು 50 ಲಕ್ಷ ಎಂದು ಹೇಳಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.