
ಭೋಪಾಲ್: ಲಿವ್ ಇನ್ ಸಂಗಾತಿಯನ್ನು ಹತ್ಯೆ ಮಾಡಿದ ಬಳಿಕ ಆಕೆಯನ್ನು ಮನೆಯಲ್ಲೇ ಸಮಾಧಿ ಮಾಡಿ, ಆ ಜಾಗದಲ್ಲಿ ಕಾಂಕ್ರೀಟ್'ನ ಮಂಚ ಮಾಡಿಕೊಂಡ ಪ್ರೇಮಿಯೊಬ್ಬ ಅದರ ಮೇಲೇ ಮಲಗುತ್ತಿದ್ದ ಪ್ರಕರಣವೊಂದು ಮಧ್ಯಪ್ರದೇಶದಲ್ಲಿ ನಡೆದಿದೆ.
ಪ.ಬಂಗಾಳ ಮೂಲದ ಆಕಾಂಕ್ಷಾ ಶರ್ಮಾ ಮತ್ತು ಭೋಪಾಲ್ ಮೂಲದ ಉದ್ಯಾನ್ ದಾಸ್ 2 ವರ್ಷಗಳ ಹಿಂದೆ ಫೇಸ್‌ಬುಕ್‌ನಲ್ಲಿ ಸ್ನೇಹಿತರಾಗಿದ್ದರು. ಈ ನಡುವೆ, 2 ವರ್ಷ ಕಾಲ ಅಮೆರಿಕಕ್ಕೆ ತೆರಳುವುದಾಗಿ ತಿಳಿಸಿ ಹೋಗಿದ್ದ ಆಕಾಂಕ್ಷಾ ಭೋಪಾಲ್‌ಗೆ ಬಂದು ಉದ್ಯಾನ್ ಜೊತೆ ನೆಲೆಸಿದ್ದಳು. ಭೋಪಾಲ್‌ಗೆ ಬಂದು ನೆಲೆಸಿದ್ದರೂ, ಕುಟುಂಬ ಸದಸ್ಯರಿಗೆ ಆಗ್ಗಾಗ್ಗೆ ಕರೆ ಮಾಡುತ್ತಿದ್ದ ಆಕಾಂಕ್ಷಾಳಿಂದ 2 ತಿಂಗಳಿಂದ ಕರೆ ಬಂದಿರಲಿಲ್ಲ. ಇದರಿಂದ ಗಾಬರಿಗೊಂಡ ಪೋಷಕರು, ಈ ಬಗ್ಗೆ ದೂರು ಸಲ್ಲಿಸಿದ್ದರು. ಪ್ರಕರಣದ ಬೆನ್ನು ಹತ್ತಿದ ಪೊಲೀಸರು, ಆಕಾಂಕ್ಷಾ ಪೋಷಕರಿಗೆ ಬಂದಿರುವ ಎಲ್ಲ ಕರೆಗಳು ಭೋಪಾಲ್‌ನಿಂದ ಬಂದಿರುವುದನ್ನು ಪತ್ತೆ ಹಚ್ಚಿ ಆರೋಪಿ ದಾಸ್‌ನನ್ನು ವಿಚಾರಣೆಗೊಳಪಡಿಸಿದ್ದಾರೆ.
ವಿಚಾರಣೆ ವೇಳೆ ತಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯ ಬಂದು, ಆಕೆಯನ್ನು ಹತ್ಯೆ ಮಾಡಿದ್ದೆ. ಬಳಿಕ ಮರದ ಪೆಟ್ಟಿಗೆಯಲ್ಲಿ ಶವ ಹಾಕಿ, ಅದರ ಮೇಲೆ ಕಾಂಕ್ರೀಟ್ ಸುರಿದು ಮಂಚದ ರೀತಿಯಲ್ಲಿ ಮಾಡಿಕೊಂಡಿದ್ದೆ ಎಂದು ಉದ್ಯಾನ್ ಬಹಿರಂಗಪಡಿಸಿದ್ದಾನೆ.
epaper.kannadaprabha.in
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.