
ಭಾರತದ ಇಂಟರ್'ನೆಟ್ ಸೇವಾ ಕಂಪನಿಗಳಲ್ಲಿ ಯಾವುದು ಬೆಸ್ಟ್ ಎಂಬ ಚರ್ಚೆ ಶುರುವಾಗುತ್ತಿದೆ. ದೇಶದ ಅಂತರ್ಜಾಲ ಇತಿಹಾಸದಲ್ಲಿಯೇ 6 ತಿಂಗಳಿಗೂ ಹೆಚ್ಚು ಕಾಲ ಸಿಮ್ ಖರೀದಿಸಿದ ಎಲ್ಲರಿಗೂ ಒಂದು ಜಿಬಿ 4ಜಿ ಡಾಟಾ, ಕರೆ ಹಾಗೂ ಸಂದೇಶಗಳನ್ನು ಉಚಿತವಾಗಿ ನೀಡುತ್ತಿರುವ ಜಿಯೋ ಉತ್ತಮವೇ ಅಥವಾ ಒಂದು ದಶಕಕ್ಕೂ ಹೆಚ್ಚು ಕಾಲ ಉತ್ತಮ ಸೇವೆಗಳನ್ನು ಒದಗಿಸಿ ರಾಜನಾಗಿ ಮೆರೆದ ಏರ್'ಟೆಲ್ ಅತ್ಯುತ್ತಮವೆ ಎಂಬುದು ಸಾರ್ವಜನಿಕ ವಲಯದಲ್ಲಿ ಚರ್ಚಿತವಾಗುತ್ತಿರುವ ವಿಷಯ.
ಎಲ್ಲ ಉಚಿತ ಸೇವೆಗಳನ್ನು ನೀಡುತ್ತಿರುವ ರಿಲಯನ್ಸ್ ಜಿಯೋ ಪ್ರಸ್ತುತ ದೇಶದಲ್ಲಿ ಅತೀ ಹೆಚ್ಚು ಚಂದದಾರರನ್ನು ಹೊಂದಿರುವ ಮೊಬೈಲ್ ಸೇವಾ ಕಂಪನಿಯಾಗಿದೆ. ಈ ಸಂಸ್ಥೆಯ ಚಂದಾದಾರರು ದಿನದಿಂದ ದಿನಕ್ಕೆ ಇನ್ನು ಹೆಚ್ಚಾಗುತ್ತಿದ್ದಾರೆ. ಏರ್'ಟೆಲ್ ಕೂಡ ತಾನೇನು ಕಡಿಮೆಯಿಲ್ಲ ಎಂಬಂತೆ ಉತ್ತಮ ಆಫರ್'ಗಳನ್ನು ನೀಡಿ ಚೆಂದಾದಾರರನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ.
ಯಾವ ಮೊಬೈಲ್ ಸೇವಾ ಕಂಪನಿ ಉತ್ತಮ ಎಂಬುದಕ್ಕೆ ಆರ್ಥಿಕ ಸೇವೆಗಳ ಕಂಪನಿ 'ಕ್ರೆಡಿಟ್ ಸ್ಯೂಸ್' ಸಮೀಕ್ಷೆ ನಡೆಸಿದ್ದು, ಈ ವರದಿಯ ಪ್ರಕಾರ ರಿಲಯನ್ಸ್ ಜಿಯೋ ಉತ್ತಮ ಅಂತರ್ಜಾಲ ಕಾರ್ಯವ್ಯಾಪ್ತಿಯನ್ನು ಹೊಂದಿದ್ದರೆ ಏರ್'ಟೆಲ್ ಹೆಚ್ಚು ವೇಗದ 4ಜಿ ಇಂಟರ್'ನೆಟ್ ನೀಡುತ್ತಿರುವ ಸಂಸ್ಥೆಯಾಗಿದೆ.
ಏರ್'ಟೆಲ್ ಡೌನ್'ಲೋಡ್ ವೇಗ ಪ್ರತಿ ಸೆಕೆಂಡ್'ಗೆ 12 ಎಂಬಿಪಿಎಸ್ ಇದ್ದರೆ ಜಿಯೋ ಒಳಗೊಂಡು ಉಳಿದ ವೊಡಾಫೋನ್, ಐಡಿಯಾ ಮತ್ತಿತ್ತರ ಕಂಪನಿಗಳ ವೇಗ ಪ್ರತಿ ಸೆಕೆಂಡ್'ಗೆ 7ರಿಂದ8 ಎಂಬಿಪಿಎಸ್ ಇರುತ್ತದೆ. ಸ್ಯೂಸ್ ಸಮೀಕ್ಷೆಯ ಪ್ರಕಾರ ಜಿಯೋವು ಇಂಟರ್'ನೆಟ್ ಕಾರ್ಯವ್ಯಾಪ್ತಿಯಲ್ಲಿ ಶೇ.80 ತಷ್ಟು ನಗರಗಳನ್ನು ಒಳಗೊಂಡಿದ್ದರೆ, ಏರ್'ಟೆಲ್ ಸೇರಿದಂತೆ ಉಳಿದ ಕಂಪನಿಗಳು ಶೇ.30 ರಷ್ಟು ಕಾರ್ಯವ್ಯಾಪ್ತಿಯನ್ನು ಮಾತ್ರ ಹೊಂದಿದೆಯಂತೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.