
ಬೆಂಗಳೂರು(ಡಿ.14): ಹಣ ಇಲ್ಲದೇ ಮೊಬೈಲ್ ಪಡೆದುಕೊಳ್ಳುವ ದುರಾಸೆಯಿಂದ, ಕೊರಿಯರ್ ನೀಡಲು ಬಂದಿದ್ದ ಕೊರಿಯರ್ ಹುಡುಗನನ್ನೇ ಕೊಂದ ಭಯಾನಕ ಪ್ರಕರಣ ಬೆಂಗಳೂರಲ್ಲಿ ಬಯಲಾಗಿದೆ.
ಡಿ.9ರಂದು ಬೆಂಗಳೂರಿನ ವಿಜಯನಗರದಲ್ಲಿ ಈ ಕೊಲೆ ನಡೆದಿತ್ತು. ಅಲಹಬಾದ್ ಬ್ಯಾಂಕ್ ಬಿಲ್ಡಿಂಗ್'ನಲ್ಲಿರುವ ಆಕ್ಷಿ ಜಿಮ್'ನ ಉಸ್ತುವಾರಿ ಕೆಲಸ ಮಾಡಿಕೊಂಡಿದ್ದ ಅರೋಪಿ ವರುಣ್, ಫ್ಲಿಪ್ ಕಾರ್ಟ್ನಲ್ಲಿ ಹೊಸ ಫೋನ್ ಬುಕ್ ಮಾಡಿದ್ದ. ಡಿ.9ರಂದು ಕೊರಿಯರ್ ಬಾಯ್ ನಂಜುಂಡಸ್ವಾಮಿ ಮೊಬೈಲ್ ನೀಡಲು ಬಂದಿದ್ದಾಗ, ಫೋನ್ ಖರೀದಿಸಲು ತನ್ನ ಬಳಿ ಹಣ ಇಲ್ಲದ ಕಾರಣ ವರುಣ್ ಕೊಲೆ ಮಾಡಿದ್ದಾನೆ.
ಬಳಿಕ ಹೊಸ ಫೋನ್ ಮತ್ತು ಕೊರಿಯರ್ ಬಾಯ್ ಬಳಿ ಇದ್ದ ಹಣವನ್ನ ದೋಚಿದ್ದಾನೆ. ಹತ್ಯೆಯಾದವನಿಗೂ ಹಂತಕನಿಗೂ ಯಾವುದೇ ಪರಿಚಯವಿರಲಿಲ್ಲ. ಈ ಬಗ್ಗೆ ತನಿಖೆ ಕೈಗೊಂಡ ವಿಜಯನಗರ ಪೊಲೀಸರು ಪ್ರಕರಣ ಭೇದಿಸಿದ್ದು, ಆರೋಪಿ ವರುಣ್ ಅನ್ನು ಬಂಧಿಸಿ, ಕೊರಿಯರ್ ಬಾಯ್ ಇಂದ ದೋಚಿದ್ದ ೧೦ ಸಾವಿರ ನಗದು ವಶ ಪಡಿಸಿಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.