ಮಲೆನಾಡನ್ನು ಬೆಚ್ಚಿ ಬೀಳಿಸಿದ ಮಾಂಸ ದಂಧೆ!: 14 ವರ್ಷದ ಬಾಲಕಿ ಬಿಚ್ಚಿಟ್ಟಳು ಸ್ಫೋಟಕ ಸತ್ಯ

Published : Dec 14, 2016, 03:47 AM ISTUpdated : Apr 11, 2018, 01:08 PM IST
ಮಲೆನಾಡನ್ನು ಬೆಚ್ಚಿ ಬೀಳಿಸಿದ ಮಾಂಸ ದಂಧೆ!: 14 ವರ್ಷದ ಬಾಲಕಿ ಬಿಚ್ಚಿಟ್ಟಳು ಸ್ಫೋಟಕ ಸತ್ಯ

ಸಾರಾಂಶ

ಶಿವಮೊಗ್ಗ ರಾಜ್ಯಕ್ಕೆ ನಾಲ್ವರು ಮುಖ್ಯಮಂತ್ರಿಗಳನ್ನು ಕೊಡುಗೆಯಾಗಿ ನೀಡಿದ ಮಲೆನಾಡಿನ ಹೆಬ್ಬಾಗಿಲು. ಇಂಥ ಜಿಲ್ಲೆಯಲ್ಲಿ ಕಳ್ಳ ಮಾಂಸದ ದಂಧೆಕೋರರ ಜಾಲ ಹುಟ್ಟಿಕೊಂಡಿದೆಯಾ. ಹೌದು ಅನ್ನಿಸುತ್ತಿದೆ  ಈ ಬಾಲಕಿ ಹೇಳಿಕೆ. ಭದ್ರಾವತಿ ತಾಲೂಕಿನ ಗ್ರಾಮವೊಂದರ 14 ವರ್ಷದ 9 ನೇ ತರಗತಿ ಓದುತ್ತಿದ್ದ ಬಾಲಕಿ. ಓದುವ ಹುಡುಗಿ ಸೌದಿ ಅರೇಬಿಯಾಕ್ಕೆ ಮಾರಾಟವಾಗುತ್ತಿದ್ದಳು. ಅಷ್ಟರಲ್ಲಿ ಮಹಾರಾಷ್ಟ್ರದ ಪೂನಾದಿಂದ ದಂಧೆಕೋರರಿಂದ ತಪ್ಪಿಸಿಕೊಂಡು ಬಂದಿದ್ದಾಳೆ ಎಂದು ಆತಂಕದಿಂದಲೇ ಹೇಳಿಕೊಳ್ಳುತ್ತಾರೆ ಮನೆಯವರು.

ಶಿವಮೊಗ್ಗ(ಡಿ.14): ಮಲೆನಾಡು ಶಿವಮೊಗ್ಗದಲ್ಲಿ ರಾಜ್ಯವೇ ಬೆಚ್ಚಿ ಬೀಳುವಂತಹ ಘಟನೆಯೊಂದು ನಡೆದಿದೆ. ವೇಶ್ಯಾವಾಟಿಕೆ ದಂಧೆಕೋರರ ಬಲೆಗೆ ಸಿಲುಕಿದ್ದ ಬಾಲಕಿಯೊಬ್ಬಳು ಕೊನೆಕ್ಷಣದಲ್ಲಿ ತಪ್ಪಿಸಿಕೊಂಡು ಬಂದು ಸಾಹಸ ಮೆರೆದಿದ್ದಾಳೆ. ಈ ಕುರಿತು ಒಂದು ಏಕ್ಸ್ ಕ್ಲೂಸಿವ್ ವರದಿ ಇಲ್ಲಿದೆ.

ಶಿವಮೊಗ್ಗದಲ್ಲೇ ನಡೆಯುತ್ತಿದೆಯಾ ಮಾನವ ಕಳ್ಳ ಸಾಗಾಣಿಕೆ ಬೃಹತ್ ಜಾಲ?

ಶಿವಮೊಗ್ಗ ರಾಜ್ಯಕ್ಕೆ ನಾಲ್ವರು ಮುಖ್ಯಮಂತ್ರಿಗಳನ್ನು ಕೊಡುಗೆಯಾಗಿ ನೀಡಿದ ಮಲೆನಾಡಿನ ಹೆಬ್ಬಾಗಿಲು. ಇಂಥ ಜಿಲ್ಲೆಯಲ್ಲಿ ಕಳ್ಳ ಮಾಂಸದ ದಂಧೆಕೋರರ ಜಾಲ ಹುಟ್ಟಿಕೊಂಡಿದೆಯಾ. ಹೌದು ಅನ್ನಿಸುತ್ತಿದೆ  ಈ ಬಾಲಕಿ ಹೇಳಿಕೆ. ಭದ್ರಾವತಿ ತಾಲೂಕಿನ ಗ್ರಾಮವೊಂದರ 14 ವರ್ಷದ 9 ನೇ ತರಗತಿ ಓದುತ್ತಿದ್ದ ಬಾಲಕಿ. ಓದುವ ಹುಡುಗಿ ಸೌದಿ ಅರೇಬಿಯಾಕ್ಕೆ ಮಾರಾಟವಾಗುತ್ತಿದ್ದಳು. ಅಷ್ಟರಲ್ಲಿ ಮಹಾರಾಷ್ಟ್ರದ ಪೂನಾದಿಂದ ದಂಧೆಕೋರರಿಂದ ತಪ್ಪಿಸಿಕೊಂಡು ಬಂದಿದ್ದಾಳೆ ಎಂದು ಆತಂಕದಿಂದಲೇ ಹೇಳಿಕೊಳ್ಳುತ್ತಾರೆ ಮನೆಯವರು.

ಭದ್ರಾವತಿ ಹೊಸಮನೆಯ ಸರ್ಕಾರಿ ಶಾಲೆಯೊಂದರಲ್ಲಿ ಅಡಿಗೆ ಕೆಲಸ ಮಾಡುತ್ತಿದ್ದ  ಮಂಜುಳಾ ಮತ್ತು ಭಾಗ್ಯಮ್ಮ. ಈ ಬಾಲಕಿಯನ್ನು ಕೆಲಸ ಕೊಡಿಸೋದಾಗಿ ಪೂನಾಗೆ ಕರೆದು ಕೊಂಡು ಹೋಗಿದ್ದಾರೆ. ಅಲ್ಲಿ ಮತ್ತೊಬ್ಬ ಬಾಲಕಿ ಸೇರಿಸಿ ಇಬ್ಬರನ್ನೂ  ಶಾಹಿದಾಭಾನು ಎಂಬಾಕೆಯೊಂದಿಗೆ ಸೇರಿ ಸೌದಿ ಅರೇಬಿಯಾಕ್ಕೆ ಮಾರಾಟ ಮಾಡುವ ಸ್ಕೆಚ್ ಇವರದ್ದಾಗಿತ್ತಂತೆ. ಈ ವೇಳೆ ಅಲ್ಪಸ್ವಲ್ಪ ಉರ್ದು ಅರ್ಥ ಆಗುತ್ತಿದ್ದ ಬಾಲಕಿ ಪ್ರಶ್ನೆ ಮಾಡಿದ್ದಾಳೆ. ಇದು ವೇಶ್ಯಾವಾಟಿಕೆ ದಂಧೆ ಎಂದು ತಿಳಿಯುತ್ತಿದ್ದಂತೆ ಬಾಲಕಿ  ಉಪಾಯದಿಂದ ಅಲ್ಲಿಂದ ಕಾಲ್ಕಿತ್ತು ಪೂನಾ ರೈಲ್ನೆ ಸ್ಟೇಷನ್'ನಿಂದ ಶಿವಮೊಗ್ಗಕ್ಕೆ ಬಂದಿದ್ದಾಳೆ. ಆಗಲೇ ಹುಡುಗಿಯರ ಮಾರಾಟ ಜಾಲ ಪತ್ತೆಯಾಗಿದ್ದು.

ಬಾಲಕಿ ನೀಡಿದ ದೂರಿನ ಮೇರೆಗೆ ಭದ್ರಾವತಿ ಹೊಸಮನೆ ಠಾಣೆ ಪೋಲಿಸರು ಐಪಿಸಿ ಸೆಕ್ಷನ್ 506, 366, 370 (ಎ), 372, 373, 368, 420, ರೆಡ್ ವಿತ್ 34 ಗಳ ಅಡಿಯಲ್ಲಿ ಮೊಕದ್ದಮೆ ದಾಖಲಿಸಿ ಮಂಜುಳಾ, ಭಾಗ್ಯಮ್ಮ , ಶಾಹೀದಾಭಾನು ಹಾಗೂ ಅಸ್ಮತ್ ಭಾನು ಎಂಬ ನಾಲ್ವರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಇಷ್ಟಾದರೆ ಸಾಲದು ಈ ಜಾಲದ ಕಿಂಗ್ ಪಿನ್'ಗಳನ್ನು ಬಂಧಿಸುವ ಕೆಲಸ ಆಗಬೇಕಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಾಲ್ಮೀಕಿ ನಿಗಮ ಹಗರಣ: ಮಾಜಿ ಸಚಿವ ಬಿ. ನಾಗೇಂದ್ರನ ₹8 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿದ ಇಡಿ!
ಕಂಟೋನ್ಮೆಂಟ್‌ ರೈಲು ನಿಲ್ದಾಣದ 371 ಮರ ಕಡಿಯಲು ಹೈಕೋರ್ಟ್‌ ತಡೆ, ತನ್ನ ಅನುಮತಿ ಇಲ್ಲದೆ ಏನೂ ಮಾಡುವಂತಿಲ್ಲವೆಂದು ಆರ್ಡರ್