ಮನ್ ಕಿ ಬಾತ್ ಗೆ 3 ವರ್ಷದ ಸಂಭ್ರಮ; #INCREDIBLEINDIA ಗೆ ಮೋದಿ ಕರೆ

Published : Sep 24, 2017, 10:17 PM ISTUpdated : Apr 11, 2018, 12:41 PM IST
ಮನ್ ಕಿ ಬಾತ್ ಗೆ 3 ವರ್ಷದ ಸಂಭ್ರಮ; #INCREDIBLEINDIA ಗೆ ಮೋದಿ ಕರೆ

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ  ಜನಪ್ರಿಯ  ‘ಮನ್​​ ಕಿ ಬಾತ್​’ ರೇಡಿಯೋ ಕಾರ್ಯಕ್ರಮಕ್ಕೆ  3ವರ್ಷದ ಸಂಭ್ರಮ. ಈ ಸಂದರ್ಭದಲ್ಲಿ ಪ್ರಧಾನಿಗಳು ತಮ್ಮ ಮನದಾಳದ ಮಾತುಗಳನ್ನ 36 ನೇ ಮನ್ ಕಿ ಬಾತ್ ನಲ್ಲಿ  ಜನರ ಮುಂದೇ ಬಿಚ್ಚಿಟ್ಟರು.

ನವದೆಹಲಿ (ಸೆ.24): ಪ್ರಧಾನಿ ನರೇಂದ್ರ ಮೋದಿ  ಜನಪ್ರಿಯ  ‘ಮನ್​​ ಕಿ ಬಾತ್​’ ರೇಡಿಯೋ ಕಾರ್ಯಕ್ರಮಕ್ಕೆ  3 ವರ್ಷದ ಸಂಭ್ರಮ. ಈ ಸಂದರ್ಭದಲ್ಲಿ ಪ್ರಧಾನಿಗಳು ತಮ್ಮ ಮನದಾಳದ ಮಾತುಗಳನ್ನ 36 ನೇ ಮನ್ ಕಿ ಬಾತ್ ನಲ್ಲಿ  ಜನರ ಮುಂದೇ ಬಿಚ್ಚಿಟ್ಟರು.

ಜನರ ಮಾತನ್ನು ಮನ್ ಕಿ ಬಾತ್ ನಲ್ಲಿ ಹೇಳಿದ್ದೇನೆ ದೇಶದ ಜನರ ಮಾತೇ ಮನ್ ಕೀ ಬಾತ್ ಎಂದು ಹೇಳಿದರು.  ಊಟ ಮಾಡಬೇಕಾದರೆ ಆಹಾರವನ್ನ ವೇಸ್ಟ್​​ ಮಾಡಬೇಡಿ, ಅರ್ಥದಲ್ಲೇ ಬಿಡಬಾರದು ಎಂಬ ಸಂದೇಶ ನೀಡಿದ್ರು. ಸ್ವಚ್ಛತಾ ಕಾರ್ಯಕ್ಕಾಗಿ ಸಾಕಷ್ಟು ಜನ ಮುಂದೆ ಬಂದಿದ್ದಾರೆ, 75 ಲಕ್ಷ ಜನ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.  ಖಾದಿ ಕೇವಲ ಬಟ್ಟೆಯಲ್ಲ, ಅದೊಂದು ಆಂದೋಲನ. ಖಾದಿ ಅಭಿಯಾನದಂತೆ ಸಾಗಬೇಕಿದೆ. ಜನರಲ್ಲಿ ಖಾದಿ ಕುರಿತು ಆಸಕ್ತಿ ಹೆಚ್ಚಿದ್ದು, ಖಾದಿ ಬಟ್ಟೆಗಳ ಮಾರಾಟ ಹೆಚ್ಚಿರುವುದರಿಂದ ಬಡ ಜನತೆಗೆ ಉದ್ಯೋಗ ನೀಡಿದಂತಾಗಿದೆ ಎಂದರು. ಈ ಬಾರಿ ಇನ್​ಕ್ರೆಡಿಬಲ್​ ಇಂಡಿಯಾ ಅಭಿಯಾನಕ್ಕೆ ಕೈ ಜೋಡಿಸುವಂತೆ ದೇಶದ ಜನತೆಗೆ ಕರೆ ನೀಡಿದರು.  ದೇಶದ ವಿವಿಧ ರಾಜ್ಯಗಳಲ್ಲಿ ಪ್ರವಾಸ ಕೈಗೊಳ್ಳಿ,  ಭೇಟಿ ನೀಡಿದ ಸ್ಥಳದ ಫೋಟೋವನ್ನು #INCREDIBLEINDIAಗೆ ಪೋಸ್ಟ್​​ ಮಾಡಿ. ಸರ್ಕಾರ ನೀವೂ ಕಳುಹಿಸಿದ ವಿಶಿಷ್ಟ ಪ್ರದೇಶವನ್ನು ಪ್ರವಾಸಿತಾಣವಾಗಿಸುವತ್ತ  ಗಮನ ಹರಿಸಲಿದೆ ಎಂಬ ಕರೆಯನ್ನ ನೀಡಿದರು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಜಗತ್ತಿನಲ್ಲಿ ಅತಿಹೆಚ್ಚು ಮದ್ಯಪಾನ ಮಾಡುವ ದೇಶ ಯಾವುದು? ಭಾರತಕ್ಕೆ ಎಷ್ಟನೇ ಸ್ಥಾನ ಗೊತ್ತಾ?
ಸಿಎಂ ಹೇಳಿದ ಮೇಲೂ ಅಧಿಕಾರ ಹಂಚಿಕೆ ಬಗ್ಗೆ ಚರ್ಚೆ ಸಲ್ಲ: ಸಚಿವ ಸತೀಶ್‌ ಜಾರಕಿಹೊಳಿ