
ಹೈದರಾಬಾದ್: ಬೈಕ್‌ನಲ್ಲಿ ಪಯಣಿಸುತ್ತಿದ್ದ ವ್ಯಕ್ತಿಯೊಬ್ಬರಿಗೆ ಹಾರ್ಟ್ ಅಟ್ಯಾಕ್ ಆಗಿ, ಕುಸಿದು ಬಿದ್ದಾಗ, ಅಲ್ಲಿಯೇ ಇದ್ದ ಹೋಂ ಗಾರ್ಡ್ ಒಬ್ಬರು ಸಿಪಿಆರ್ ಮಾಡಿ ಜೀವ ಉಳಿಸಿದ್ದಾರೆ. ಹೋಂ ಗಾರ್ಡ್‌ಗಳ ಈ ಕಾರ್ಯಕ್ಕೆ ಅಪಾರ ಶ್ಲಾಘನೆ ವ್ಯಕ್ತವಾಗಿದೆ.
ಈ ಬಗ್ಗೆ ತೆಲಂಗಾಣದ ಸ್ಥಳೀಯಾಡಳಿತ ಹಾಗೂ ನಗರಾಭಿವೃದ್ಧಿ ಸಚಿವ ಕೆ.ಟಿ.ರಾಮ್‌ರಾವ್ ಸಹ ಟ್ವೀಟ್ ಮಾಡಿದ್ದು, ಬಹದೂರ್‌ಪುರ ಠಾಣೆಯ ಹೋಂ ಗಾರ್ಡ್ ಕೆ. ಚಂದನ್ ಮತ್ತು ಇನಾಯುಥುಲ್ಲಾ ಖಾನ್ ಅವರನ್ನು ಅಭಿನಂದಿಸಿದ್ದಾರೆ.
ಹೈದರಾಬಾದ್‌ನಲ್ಲಿ ಬಹುತೇಕ ಪೊಲೀಸ್ ಪೇದೆಗಳು ಹಾಗೂ ಹೋಮ್ ಗಾರ್ಡ್ಸ್ ಈ ಸಿಪಿಆರ್ ತರಬೇತಿ ಪಡೆದಿದ್ದಾರೆ. ಶಾಲಾ, ಕಾಲೇಜು ಹಾಗೂ ಇತರೆಡೆ ಇಂಥ ತರಬೇತಿ ನೀಡಿದರೆ, ಅನೇಕರ ಜೀವ ಉಳಿಸಲೂ ಸಹಾಯವಾಗಬಹುದು.
ಏನಿದು ಸಿಪಿಆರ್?
ಕಾರ್ಡಿಯೋ ಪಲ್ಮನರಿ ರಿಸಸಿಟೇಷನ್ (ಸಿಪಿಆರ್) ಎಂಬುವುದು ವ್ಯಕ್ತಿಯೊಬ್ಬರು ಹೃದಯಾಘಾತ ಅಥವಾ ಯಾವುದೇ ಉಸಿರಾಟದ ತೊಂದರೆ ಅನುಭವಿಸಿದಾಗ ನೀಡುವ ಪ್ರಥಮ ಚಿಕಿತ್ಸೆ. ಹೃದಯ ಬಹುತೇಕ ಸ್ಥಗಿತಗೊಂಡತಾದರೂ, ಈ ಚಿಕಿತ್ಸೆ ನೀಡುವುದರಿಂದ ರೋಗಿ ಸುಧಾರಿಸಿಕೊಳ್ಳುತ್ತಾನೆ. ಆ ನಂತರ ಆ ವ್ಯಕ್ತಿಯನ್ನು ತಕ್ಷಣವೇ ಆಸ್ಪತ್ರೆಗೆ ಸೇರಿಸಿದಲ್ಲಿ, ಸುಧಾರಿಸಿಕೊಳ್ಳುತ್ತಾರೆ. ತುರ್ತು ಸಂದರ್ಭದಲ್ಲಿ ಈ ಚಿಕಿತ್ಸೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.
ನಾಳಗಳು ಸಂಕುಚಿತಗೊಂಡು ಉಸಿರಾಟದ ತೊಂದರೆ ಅನುಭವಿಸುತ್ತಿರುವಾಗ ಈ ಚಿಕಿತ್ಸೆ ನೀಡಿದರೆ, ತಕ್ಷಣವೇ ರಿಲ್ಯಾಕ್ಸ್ ಆಗುತ್ತಾನೆ. ಆಸ್ಪತ್ರೆಗೆ ಸಾಗಿಸುವಷ್ಟು ಸಮಯ ಸಿಗುವುದರಿಂದ ಮನುಷ್ಯ ಬದುಕುಳಿಯುವ ಸಾಧ್ಯತೆ ಹೆಚ್ಚಿರುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.