
ಬೆಂಗಳೂರು : ಕಡಿಮೆ ಬೆಲೆಗೆ ಐಫೋನ್ ಮಾರುವುದಾಗಿ ನಂಬಿಸಿ ಖಾಸಗಿ ಕಂಪೆನಿ ಉದ್ಯೋಗಿಯೊಬ್ಬ ರಿಂದ ಹಣ ಪಡೆದು ವಂಚಿಸಿದ್ದಾರೆ ಎಂದು ಆರೋಪಿಸಿ ಹಿಂದಿ ಆವತರಣಿಕೆಯ ಬಿಗ್‌ಬಾಸ್ 11 ನೇ ಆವೃತ್ತಿಯ ಸ್ಪರ್ಧಿ ಹಾಗೂ ಬಾಲಿವುಡ್ ನಟಿ ಬಂದ್ಗಿ ಕರ್ಲಾ ವಿರುದ್ಧ ಮಾರತ್ತಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಖಾಸಗಿ ಕಂಪೆನಿ ಉದ್ಯೋಗಿ ಯುವರಾಜ್ ಸಿಂಗ್ ಯಾದವ್ ದೂರು ನೀಡಿದ್ದು, ಕರ್ಲಾ ಅವರು 1 ಲಕ್ಷದ ಮೌಲ್ಯದ ಐಪೋನ್ ಎಕ್ಸ್ ಮೊಬೈಲ್ ಅನ್ನು 61 ಸಾವಿರಕ್ಕೆ ಮಾರಾಟ ಮಾಡುತ್ತಿರುವುದಾಗಿ ನಂಬಿಸಿ ದೂರುದಾರರಿಗೆ ಪಂಗನಾಮ ಹಾಕಿದ್ದಾರೆ ಎಂಬ ಆಪಾದಿಸಲಾಗಿದೆ. ಈ ದೂರಿನ ಜತೆ ಕರ್ಲಾ ಜೊತೆ ಮೊಬೈ ಲ್ ಖರೀದಿ ಸಂಬಂಧ ಅವರಿಬ್ಬರ ಮಧ್ಯೆ ನಡೆದಿರುವ ಸಂದೇಶ ವಿನಿಮಿಯ, ಜಾಹೀರಾತು ಪ್ರಕಟಣೆಯ ಸ್ಕ್ರೀನ್ ಶಾಟ್ ಕೂಡಾ ಕೊಟ್ಟಿದ್ದಾರೆ.
ಕರ್ಲಾ ಖಾತೆಯಿಂದಲೇ ಆ ಜಾಹೀರಾತು ಪೋಸ್ಟ್ ಆಗಿರುವುದು ಖಚಿತ ವಾಗಿದೆ. ಈ ಬಗ್ಗೆ ವಿಚಾರಿಸಲು ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ. ಬ್ಲೂಡಾರ್ಟ್ ನೌಕರ ರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಸಲಿ ತೋರಿಸಿ ನಕಲಿ ಕಳುಹಿಸಿದ್ರು: ಇತ್ತೀಚಿಗೆ ಕರ್ಲಾ ಅವರು ತಮ್ಮ ಐಫೋನ್ ಎಕ್ಸ್ ಮಾರಾಟ ಮಾಡುವುದಾಗಿ ನೆಕ್ಸಾ ಫ್ಯಾಷನ್ ವೆಬ್‌ಸೈಟ್‌ನಲ್ಲಿ ಜಾಹೀರಾತು ಪ್ರಕಟಿಸಿದ್ದರು. ಇದನ್ನು ನೋಡಿದ ಯುವ ರಾಜ್, ತಾವು ಮೊಬೈಲ್ ಖರೀದಿಸುವುದಾಗಿ ಪ್ರತಿಕ್ರಿಯಿಸಿದ್ದರು. ಆಕೆ ಕೊಟ್ಟಿದ್ದ ಮೊಬೈಲ್ ಸಂಖ್ಯೆಗೆ ಮುಂಗಡವಾಗಿ ಪೇಟಿಎಂ ಮೂಲ ಕ 13 ಸಾವಿರ ರವಾನಿಸಿದ್ದೆ. ಆಗ ಅವರು, ಪಣತ್ತೂರು ಮುಖ್ಯರಸ್ತೆಯ ಬ್ಲೂಡಾರ್ಟ್ ಕೊರಿಯರ್ ಕಚೇರಿಗೆ ಮೊಬೈಲ್ ಕಳುಹಿಸು ತ್ತೇನೆ. ಅಲ್ಲಿ ಬಾಕಿ ಹಣ ಕೊಟ್ಟು ಮೊಬೈಲ್ ಪಡೆದುಕೊಳ್ಳಿ ಎಂದಿದ್ದರು ಎಂದು ಯುವರಾಜ್ ದೂರಿನಲ್ಲಿ ಹೇಳಿದ್ದಾರೆ.
ಜು. 18 ರಂದು ಬಾಕಿ 48 ಸಾವಿರ ಪಾವತಿಸಿ ಪಾರ್ಸಲ್ ಪಡೆದುಕೊಂಡೆ. ನೌಕರರ ಸಮ್ಮುಖದಲ್ಲೇ ಬಾಕ್ಸ್ ತೆರೆದು ನೋಡಿದಾಗ ನಕಲಿ ಮೊಬೈಲ್ ಇತ್ತು ಯುವರಾಜ್ ಯಾದವ್ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.