
ಮೈಸೂರು(ನ.25): ವಿವಾಹಿತೆಯನ್ನು ವಶೀಕರಣ ಮಾಡಿಕೊಳ್ಳಲು ಮುಂದಾಗಿದ್ದ ಯುಕನಿಗೆ ಜ್ಯೋತಿಷಿಯೋಬ್ಬ ಚಿನ್ನ ಬೆಳ್ಳಿ ಸೇರಿದಂತೆ 8 ಲಕ್ಷ ರೂಪಾಯಿ ವಂಚನೆ ಮಾಡಿರುವ ಘಟನೆ ಮೈಸೂರಿನಲ್ಲಿ ನಡೆಸಿದೆ.
ಮೈಸೂರಿನ ಕಕರವಾಡಿ ನಿವಾಸಿ 28 ವರ್ಷದ ಅಜ್ಮತ್ ಖಾನ್ ಜ್ಯೋತಿಷಿಯಿಂದ ವಂಚನೆಗೆ ಒಳಗಾದ ಯುವಕ. ಈತ ತನ್ನ ಏರಿಯಾದಲ್ಲಿ ವಾಸವಿದ್ದ ವಿವಾಹಿತೆಯೊಬ್ಬಳನ್ನು ಪ್ರೀತಿಸಿ ಆಕೆಯನ್ನು ವಶೀಕರಣ ಮಾಡಿಕೊಡುವಂತೆ ಮೈಸೂರಿನ ನಂಜೂಮಳಿಗೆ ಬಳಿ ಇರುವ ಬಾಬಾ ಕರೀಮ್ ಖಾನ್ ಬಳಿ ತೆರಳಿದ್ದ. ಯುವಕನ ಅಮಾಯಕತೆಯನ್ನು ಬಂಡವಾಳ ಮಾಡಿಕೊಂಡ ಆರೋಪಿ ಜ್ಯೋತಿಷಿ ’ಬಾಬಾ ಖಬೀರ್’ ಅಜ್ಮತ್ ಖಾನ್ಗೆ ತಾನು ಇಷ್ಟ ಪಡುವ ಮಹಿಳೆಯನ್ನು ವಶೀಕರಣ ಮಾಡಿಕೊಡುವುದಾಗಿ ತಿಳಿಸಿ ಅದಕ್ಕಾಗಿ 250ಗ್ರಾಂ ಚಿನ್ನ, 250ಗ್ರಾಂ ಬೆಳ್ಳಿ, 250ಗ್ರಾಂ ತಾಮ್ರ ಸೇರಿದಂತೆ 5 ಬಗೆಯ ಲೋಹಗಳನ್ನು ತರಲು ಹೇಳಿದ್ದಾನೆ. ನಂತರ ತನ್ನ ಕಚೇರಿಯಲ್ಲಿ ವಶೀಕರಣ ಪೂಜೆ ಮಾಡಿದಂತೆ ನಟಿಸಿ, ಎಲ್ಲವನ್ನು ಪ್ರತ್ಯೇಕವಾಗಿ ಕೆಪ್ಪು ಬಟ್ಟೆಯಲ್ಲಿ ಕಟ್ಟಿ ಕಳುಹಿಸಿದ್ದಾನೆ. ನೀನು ಮನೆಗೆ ಹೋಗಿ ಬಟ್ಟೆ ಗಂಟು ಬಿಚ್ಚಿ ನೋಡಿ. ನಂತರ ನೀನು ಬಯಸಿದ ಮಹಿಳೆ ನಿನಗೆ ವಶೀಕರಣವಾಗುತ್ತಾಳೆ ಎಂದು ವಂಚಿಸಿ ಕಳುಹಿಸಿದ್ದಾನೆ.
ಅದರಂತೆ ಮನೆಗೆ ತೆರಳಿ ಗಂಟು ಬಿಚ್ಚಿದಾಗ ತಾನು ವಂಚನೆಗೆ ಒಳಗಾಗಿರುವುದು ಗೊತ್ತಾಗಿದೆ. ಸತಿಪತಿ ಕಲಹ, ಪ್ರೇಮ ವಿವಾಹ, ಮಹಿಳಾ ವಶೀಕರಣ, ಇಂತಹ ಯಾವುದೇ ಸಮಸ್ಯೆ ಇದ್ದರೂ ಏಳೇ ದಿನದಲ್ಲಿ ಪರಿಹಾರ ಮಾಡಿಕೊಡುವುದಾಗಿ ಜಾಹೀರಾತು ನೀಡಿಲಾಗಿತ್ತು. ಇದನ್ನು ಗಮನಿಸಿದ ಅಜ್ಮತ್ ಖಾನ್, ಬಾಬಾ ಕಬೀರ್ಗೆ ಫೋನ್ ಮಾಡಿ ಮೋಸ ಹೋಗಿದ್ದಾನೆ.
ಸದ್ಯ ಆರೋಪಿ ಬಾಬಾ ಖಬೀರ್ ವಿರುದ್ಧ ಕೆಆರ್.ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿ ತಲೆ ಮರೆಸಿಕೊಂಡಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.