
ಧಾರವಾಡ(ಅ. 21): ಶಾಸಕರ ಆಪ್ತ ಹಾಗೂ ತಾಲೂಕು ಪಡಿತರ ವಿತರಕರ ಸಂಘದ ಅಧ್ಯಕ್ಷನೇ ಬಡವರ ಅನ್ನಭಾಗ್ಯ ಅಕ್ಕಿಯನ್ನ ಅಕ್ರಮವಾಗಿ ಸಾಗಾಟ ಮಾಡುತ್ತಿರುವ ಪ್ರಕರಣ ಬಯಲಾಗಿದೆ. ಕುಂದಗೋಳ ತಾಲೂಕಿನ ನೆಲಗುಡ್ಡ ಗ್ರಾಮದಲ್ಲಿ ಇಂದು ಶನಿವಾರ ಗ್ರಾಮಸ್ಥರು ಅನ್ನಭಾಗ್ಯ ಅಕ್ಕಿಯನ್ನ ಕಾಳಸಂತೆಗೆ ಸಾಗಿಸುವ ವ್ಯಕ್ತಿಯನ್ನ ತಡೆದು ಪ್ರಶ್ನಿಸಿದ್ದಾಗ ಈ ಕಳ್ಳದಂಧೆಯ ರೂವಾರಿ ಶಾಸಕನ ಆಪ್ತ ವಿರೇಶ ನಾಗವಿಮಠ್ ಅನ್ನೋದು ಬಯಲಾಗಿದೆ. ಆಗ ತತ್'ಕ್ಷಣ ಎಚ್ಚೆತ್ತ ಗ್ರಾಮಸ್ಥರು ಅಕ್ಕಿ ಸಾಗಿಸುತ್ತಿದ್ದ ನಾರಾಯಣ ಕುಲಕರ್ಣಿ ಎಂಬಾತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಶಾಸಕರ ಆಪ್ತ ವಿರೇಶ್ ನಾಗಾವಿಮಠ್ ಅವರ ನ್ಯಾಯಬೆಲೆ ಅಂಗಡಿಯಿಂದ ತಂದಿರುವುದಾಗಿ ನಾರಾಯಣ ಕುಲಕರ್ಣಿ ತಪ್ಪೊಪ್ಪಿಕೊಂಡಿದ್ದಾನೆ. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ನಾರಾಯಣ ಕುಲಕರ್ಣಿಗೆ ಥಳಿಸಿ, ಆಹಾರ ಇಲಾಖೆ ಅಧಿಕಾರಿಗಳನ್ನು ಗ್ರಾಮಕ್ಕೆ ಕರೆಸಿ ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ. ಒಟ್ಟು 50ಕೆಜಿ ತೂಕದ 13 ಚೀಲದಲ್ಲಿ ಅನ್ನಭಾಗ್ಯ ಅಕ್ಕಿ ಜಪ್ತಿ ಮಾಡಲಾಗಿದ್ದು, ಅಕ್ಕಿ ಸಾಗಿಸಲು ಬಳಸುತ್ತಿದ್ದ ಒಂದು ನೂರು ಖಾಲಿ ಚೀಲಗಳನ್ನ ವಶಪಡಿಸಿಕೊಳ್ಳಲಾಗಿದೆ.
ಕುಂದಗೋಳ ಕ್ಷೇತ್ರದ ಕಾಂಗ್ರೆಸ್ ಶಾಸಕ ಸಿ.ಎಸ್ ಶಿವಳ್ಳಿ ಆಪ್ತ ವಿರೇಶ್ ನಾಗಾವಿಮಠ್ ಈ ಅಕ್ರಮ ದಂಧೆಯ ರೂವಾರಿ ಎಂಬುದು ಬಯಲಾಗಿದೆ. ನಿತ್ಯ ಕುಂದಗೋಳ ತಾಲೂಕಿನಿಂದಲೇ ಲೋಡ್'ಗಟ್ಟಲೆ ಅನ್ನಭಾಗ್ಯ ಅಕ್ಕಿ ಕಾಳಸಂತೆಗೆ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪಕ್ಕೆ ಈಗ ಬಲ ಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.