
ಚಿತ್ರದುರ್ಗ(ಡಿ.22): ಕ್ಷುಲ್ಲಕ ಕಾರಣಕ್ಕೆ ವಾದ್ಯದವರನ್ನು ಚನ್ನಾಗಿ ಥಳಿಸಿದ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಮೂರು ದಿನಗಳಿಂದ ಚಿತ್ರದುರ್ಗದಲ್ಲಿ ಮಾರಮ್ಮನ ಜಾತ್ರೆ ನಡೆಯುತ್ತಿದ್ದು, ಕೊನೆಯ ದಿನ ತಮಟೆ ಬಾರಿಸುವವರು ನನಗೆ ಹುಷಾರಿಲ್ಲ ಹಾಗಾಗಿ ಇವತ್ತು ತಮಟೆ ಬಾರಿಸುವುದಿಲ್ಲ ಎಂದಿದ್ದಕ್ಕೆ ಹಿಡಿದು ಹಿಗ್ಗಾ ಮುಗ್ಗಾ ಥಳಿಸಿರುವ ಘಟನೆ ನಗರದ ಸ್ವಾಮೀ ವಿವೇಕಾನಂದ ಬಡಾವಣೆಯಲ್ಲಿ ನಡೆದಿದೆ.
ಥಳಿತಕ್ಕೊಳಗಾದವರನ್ನು ವಾದ್ಯಗಾರ ಕೊಟ್ರಪ್ಪ, ಗಂಗಮ್ಮ, ಹರೀಶ್ ಮತ್ತು ಪ್ರೇಮಾ ಎಂದು ಗುರುತಿಸಲಾಗಿದ್ದು, ಇವರೆಲ್ಲರೂ ಒಂದೇ ಕುಟುಂಬದವರಾಗಿದ್ದಾರೆ. ಹಲ್ಲೆ ನಡೆಸಿ ಪರಾರಿಯಾಗಿರುವವರು ಸೋಮಾ, ಗುರು ಮೂರ್ತಿ, ಶಿವರುದ್ರಪ್ಪ ಹಾಗೂ ಓಂಕಾರಪ್ಪ ಇವರೆಲ್ಲರೂ ಸೇರಿ ಹಲ್ಲೆ ನಡೆಸಿದ್ದಾರೆ. ಸಾಲದಕ್ಕೆ ಆಸ್ಪತ್ರೆಗೆ ಹೋಗಲು ಆಟೋ ಹತ್ತಲು ಹೋದರೆ ಆಟೋದವರಿಗೆ 'ಹತ್ತಿಸಿದ್ರೆ ನಿಮಗೂ ಹೊಡೆಯುತ್ತೇವೆ' ಎಂದು ಹೆದರಿಸಿದ್ದಾರೆ. ಈ ಕಾರಣ ಆಟೋದವರೂ ನಮ್ಮನ್ನು ಹತ್ತಿಸಲಿಲ್ಲ. ನೋವಿನಲ್ಲೂ ಆಟೋ ಇಲ್ಲದೆ ನಡೆದುಕೊಂಡೇ ಬಂದು ಚಿಕಿತ್ಸೆ ಪಡೆಯುತ್ತಿದ್ದೇವೆ ಎಂದು ಹಲ್ಲೆಗೊಳಗಾಗಿರುವವರ ಸಂಬಂಧಿ ಚೇತನ್ ಆರೋಪಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.