ATM ಗೆ ಹೊಸತೊಂದು ವ್ಯಾಖ್ಯಾನ ನೀಡಿದ ಮಮತಾ ಬ್ಯಾನರ್ಜಿ!

Published : Nov 17, 2016, 05:40 AM ISTUpdated : Apr 11, 2018, 01:11 PM IST
ATM ಗೆ ಹೊಸತೊಂದು ವ್ಯಾಖ್ಯಾನ ನೀಡಿದ ಮಮತಾ ಬ್ಯಾನರ್ಜಿ!

ಸಾರಾಂಶ

500, 1000 ರೂಪಾಯಿ ನೋಟ್ ಬ್ಯಾನ್ ಮಾಡಿದ ಬಳಿಕ ಜನರು ನೋಟು ವಿನಿಮಯ ಹಾಗೂ ವಿತ್ ಡ್ರಾ ಮಾಡಿಕೊಳ್ಳಲು ಬ್ಯಾಂಕ್ ಹಾಗೂ ATM ಹೊರಗೆ ಸಾಲಿನಲ್ಲಿ ನಿಲ್ಲುವ ದೃಶ್ಯಗಳು ಈಗ ಸರ್ವೇ ಸಾಮಾನ್ಯವಾಗಿವೆ. ಹೀಗೆ ಗಂಟೆಗಟ್ಟಲೇ ಕಾದರೂ ಹಣ ಸಿಗುತ್ತದೆ ಎಂಬ ಯಾವುದೇ ಗ್ಯಾರೆಂಟಿ ಇರುವುದಿಲ್ಲ. ಹೀಗಿರುವಾಗ ಪಶ್ಚಿಮ ಬನಂಗಾಳ ಮುಖ್ಯಮಂತ್ರಿ ATM ಪದಕ್ಕೆ ಹೊಸತೊಂದು ವ್ಯಾಖ್ಯಾನ ನೀಡಿದ್ದಾರೆ. ಬ್ಯಾಂಕ್ ಹಾಗೂ ATM ಹೊರಗಡೆ ಗಂಟೆಗಟ್ಟಲೇ ಹಣಕ್ಕಾಗಿ ಕಾದು ಸುಸ್ತಾದವರು ಮಮತಾ ಬ್ಯಾನರ್ಜಿ ಕೊಟ್ಟ ಈ ಹೊಸ ವ್ಯಾಖ್ಯಾನವನ್ನು ಒಪ್ಪಿಕೊಳ್ಳುವುದರಲ್ಲಿ ಎರಡು ಮಾತಿಲ್ಲ.

ನವದೆಹಲಿ(ನ.17): 500, 1000 ರೂಪಾಯಿ ನೋಟ್ ಬ್ಯಾನ್ ಮಾಡಿದ ಬಳಿಕ ಜನರು ನೋಟು ವಿನಿಮಯ ಹಾಗೂ ವಿತ್ ಡ್ರಾ ಮಾಡಿಕೊಳ್ಳಲು ಬ್ಯಾಂಕ್ ಹಾಗೂ ATM ಹೊರಗೆ ಸಾಲಿನಲ್ಲಿ ನಿಲ್ಲುವ ದೃಶ್ಯಗಳು ಈಗ ಸರ್ವೇ ಸಾಮಾನ್ಯವಾಗಿವೆ. ಹೀಗೆ ಗಂಟೆಗಟ್ಟಲೇ ಕಾದರೂ ಹಣ ಸಿಗುತ್ತದೆ ಎಂಬ ಯಾವುದೇ ಗ್ಯಾರೆಂಟಿ ಇರುವುದಿಲ್ಲ. ಹೀಗಿರುವಾಗ ಪಶ್ಚಿಮ ಬನಂಗಾಳ ಮುಖ್ಯಮಂತ್ರಿ ATM ಪದಕ್ಕೆ ಹೊಸತೊಂದು ವ್ಯಾಖ್ಯಾನ ನೀಡಿದ್ದಾರೆ. ಬ್ಯಾಂಕ್ ಹಾಗೂ ATM ಹೊರಗಡೆ ಗಂಟೆಗಟ್ಟಲೇ ಹಣಕ್ಕಾಗಿ ಕಾದು ಸುಸ್ತಾದವರು ಮಮತಾ ಬ್ಯಾನರ್ಜಿ ಕೊಟ್ಟ ಈ ಹೊಸ ವ್ಯಾಖ್ಯಾನವನ್ನು ಒಪ್ಪಿಕೊಳ್ಳುವುದರಲ್ಲಿ ಎರಡು ಮಾತಿಲ್ಲ.

ನಿನ್ನೆ ಮಮತಾ ಬ್ಯಾನರ್ಜಿ ಸಂಸತ್ ಭವನದಿಂದ ಸುಮಾರು 1 ಕಿ. ಮೀ. ದೂರವಿರುವ ರಾಷ್ಟ್ರಪತಿ ಭವನಕ್ಕೆ ಕಾಲ್ನಡಿಗೆಯಲ್ಲೇ ತೆರಳಿದ್ದರು. ಈ ವೇಳೆ ಕೇಂದ್ರ ಸರ್ಕಾರ ನೋಟು ನಿಷೇಧ ಹಿಂಪಡೆಯಲಿ ಇಲ್ಲವಾದರೆ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದರು. ಆದರೆ ಇದಾದ ಬಳಿಕ ತನ್ನ ಮಾತಿನ ಮಧ್ಯೆ ATM(Automated Teller Machine, Any Time Money) ಪದಕ್ಕೆ ಹೊಸತೊಂದು ವ್ಯಾಖ್ಯಾನವನ್ನೂ ನೀಡಿದ್ದಾರೆ.

ಜನರ ಪರದಾಟ ಕಂಡಿರುವ ಮಮತಾ ಬ್ಯಾನರ್ಜಿ 'ATM ಅಂದರೆ ಅಟೋಮೇಟೆಡ್ ಟೆಲ್ಲರ್ ಮಷೀನ್ ಅಲ್ಲ ಬದಲಾಗಿ 'ಆಯೇಗಾ ತಮ್ ಮಿಲೇಗಾ' ಎಂದಾಗಬೇಕು' ಎಂದು ತಿಳಿಸಿದ್ದಾರೆ.

ಸದ್ಯ ಇವರು ನೀಡಿರುವ ಈ ಹೊಸ ವ್ಯಾಖ್ಯಾನ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗುತ್ತಿದ್ದು, ಜನರೂ ಕೂಡಾ ಕೆಲವೊಂದು ಹೊಸ ವ್ಯಾಖ್ಯಾನವನ್ನು ನೀಡಿದ್ದಾರೆ.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಚಿತ್ರದುರ್ಗ ದುರಂತ: ಮದುವೆ ಫಿಕ್ಸ್ ಆಗಿದ್ದ ಜೀವದ ಗೆಳತಿಯರಿಬ್ಬರ ಕೊನೆಯ ಪ್ರಯಾಣ! ಓದಿದ್ದೂ ಜೊತೆಯಲ್ಲೇ ಜೀವ ಹೋಗಿದ್ದೂ ಒಟ್ಟಿಗೆ!
ಭಾರತದಲ್ಲಿ ಮಿಡ್ಲ್ ಕ್ಲಾಸ್ ಮದುವೆ ಖರ್ಚು ಭಾರಿ ಏರಿಕೆ? ಅದ್ಧೂರಿ ವಿವಾಹಕ್ಕೆ ಲೆಕ್ಕವೇ ಸಿಗುತ್ತಿಲ್ಲ