ಬಿಜೆಪಿ ಎದುರಿಸಲು ಕೈ ಜೋಡಿಸಿ: ಕಾಂಗ್ರೆಸ್‌, ಸಿಪಿಎಂಗೆ ದೀದಿ ಕರೆ

Published : Jun 27, 2019, 08:42 AM IST
ಬಿಜೆಪಿ ಎದುರಿಸಲು ಕೈ ಜೋಡಿಸಿ: ಕಾಂಗ್ರೆಸ್‌, ಸಿಪಿಎಂಗೆ ದೀದಿ ಕರೆ

ಸಾರಾಂಶ

ಎಡರಂಗ ಮತ್ತು ಕಾಂಗ್ರೆಸ್‌ ಸೇರಿದಂತೆ ನಾವೆಲ್ಲರೂ ಒಂದಾಗಬೇಕು| ಬಿಜೆಪಿ ಎದುರಿಸಲು ಕೈ ಜೋಡಿಸಿ: ಕಾಂಗ್ರೆಸ್‌, ಸಿಪಿಎಂಗೆ ದೀದಿ ಕರೆ| 

ಕೋಲ್ಕತಾ[ಜೂ.27]: ಪಶ್ಚಿಮ ಬಂಗಾಳದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಬಿಜೆಪಿಯ ಪ್ರಭಾವವನ್ನು ತಡೆಯಲು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಒಂದು ಕಾಲದಲ್ಲಿ ತಮ್ಮ ಬದ್ಧ ವೈರಿಯಾಗಿದ್ದ ಎಡರಂಗ ಮತ್ತು ಕಾಂಗ್ರೆಸ್‌ ಜೊತೆ ಕೈಜೋಡಿಸಲು ಮುಂದಾಗಿದ್ದಾರೆ.

ಬುಧವಾರ ವಿಧಾನಸಭೆಯಲ್ಲಿ ಮಾತನಾಡಿದ ಮಮತಾ, ‘ಬಿಜೆಪಿ ಸಂವಿಧಾನವನ್ನು ಬದಲಾಯಿಸಲಿದೆ ಎಂಬುದು ನನ್ನ ಆತಂಕವಾಗಿದೆ. ನನ್ನ ಪ್ರಕಾರ, ಬಿಜೆಪಿಯ ವಿರುದ್ಧ ಹೋರಾಡಲು ಎಡರಂಗ ಮತ್ತು ಕಾಂಗ್ರೆಸ್‌ ಸೇರಿದಂತೆ ನಾವೆಲ್ಲರೂ ಒಂದಾಗಬೇಕು ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.

ಈ ಹಿಂದೆಯೂ ಮಮತಾ ಬ್ಯಾನರ್ಜಿ ರಾಷ್ಟ್ರ ಮಟ್ಟದಲ್ಲಿ ಎಡರಂಗ ಮತ್ತು ಕಾಂಗ್ರೆಸ್‌ ಜೊತೆ ಮೈತ್ರಿಯ ಬಗ್ಗೆ ಒಲವು ತೋರಿದ್ದರು. ಆದರೆ, ಇದೇ ಮೊದಲ ಬಾರಿಗೆ ಬಹಿರಂಗವಾಗಿ ತಮ್ಮ ಕಾಂಗ್ರೆಸ್‌ ಮತ್ತು ಎಡರಂಗವನ್ನು ಮೈತ್ರಿಗೆ ಆಹ್ವಾನಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭಾರತೀಯರ ಬಳಿ ಇದೆ ವಿಶ್ವದ ಟಾಪ್ 10 ಬ್ಯಾಂಕ್‌ಗಳಲ್ಲಿ ಇರುವುದಕ್ಕಿಂತ ಹೆಚ್ಚು ಚಿನ್ನ: ಬಲಿಷ್ಠ ರಾಷ್ಟ್ರಗಳ ಜಿಡಿಪಿಯನ್ನೂ ಮೀರಿಸಿದ ಸಂಪತ್ತು
Post Office Scheme: ದಿನಕ್ಕೆ ₹300 ಉಳಿಸಿ, 10 ವರ್ಷದಲ್ಲಿ ₹15 ಲಕ್ಷ ನಿಮ್ಮದಾಗಿಸಿಕೊಳ್ಳಿ!