ಗೋಮಾಂಸ ವಿಡಿಯೋ: ಕಾಜೋಲ್ ಬೆಂಬಲಕ್ಕೆ ನಿಂತ ಮಮತಾ ಬ್ಯಾನರ್ಜಿ

Published : May 03, 2017, 11:42 AM ISTUpdated : Apr 11, 2018, 12:41 PM IST
ಗೋಮಾಂಸ ವಿಡಿಯೋ: ಕಾಜೋಲ್ ಬೆಂಬಲಕ್ಕೆ ನಿಂತ ಮಮತಾ ಬ್ಯಾನರ್ಜಿ

ಸಾರಾಂಶ

ಗೋಮಾಂಸ ಸೇವಿಸಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ಜನರ ಆಕ್ರೋಶಕ್ಕೆ ಕಾರಣವಾಗಿರುವ ನಟಿ ಕಾಜೋಲ್ ಬೆಂಬಲಕ್ಕೆ ಮಮತಾ ಬ್ಯಾನರ್ಜಿ ನಿಂತಿದ್ದಾರೆ. ಬೇರೆಯವರ ಆಹಾರ ಪದ್ಧತಿಗಳ ಬಗ್ಗೆ ಅಸಹಿಷ್ಣುತೆ ತೋರುತ್ತಿರುವುದು ಅಪಾಯಕಾರಿ ಟ್ರೆಂಡ್ ಶುರುವಾಗಿದೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ನವದೆಹಲಿ (ಮೇ.03): ಗೋಮಾಂಸ ಸೇವಿಸಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ಜನರ ಆಕ್ರೋಶಕ್ಕೆ ಕಾರಣವಾಗಿರುವ ನಟಿ ಕಾಜೋಲ್ ಬೆಂಬಲಕ್ಕೆ ಮಮತಾ ಬ್ಯಾನರ್ಜಿ ನಿಂತಿದ್ದಾರೆ. ಬೇರೆಯವರ ಆಹಾರ ಪದ್ಧತಿಗಳ ಬಗ್ಗೆ ಅಸಹಿಷ್ಣುತೆ ತೋರುತ್ತಿರುವುದು ಅಪಾಯಕಾರಿ ಟ್ರೆಂಡ್ ಶುರುವಾಗಿದೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ನಾನು ನಟಿಯ ಹೆಸರನ್ನು ಹೇಳುವುದಿಲ್ಲ. ಆಕೆ ಶಾರೂಕ್ ಖಾನ್ ಜೊತೆ ಸಾಕಷ್ಟು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಇತ್ತೀಚಿಗೆ ಅವರು ಸೋಷಿಯಲ್ ಮೀಡಿಯಾದಲ್ಲಿ ಹಾಕಿರುವ ವಿಡಿಯೋವನ್ನು ಟ್ರೋಲ್ ಮಾಡಿ ಅವರಿಗೆ ಮುಜುಗರವನ್ನುಂಟು ಮಾಡುತ್ತಿದ್ದಾರೆ. ಆಕೆ ಅದು ಗೋಮಾಂಸವಲ್ಲ ಎತ್ತಿ ಮಾಂಸವೆಂದು ಸಮರ್ಥನೆ ಕೊಟ್ಟರೂ ಕೂಡಾ ಜನ ಕಿಡಿಕಾರುವುದನ್ನು ಬಿಟ್ಟಿಲ್ಲ. ಬೇರೆಯವರ ಆಹಾರ ಕ್ರಮದ ಬಗ್ಗೆ ಅಸಹಿಷ್ಣುತೆ ತೋರುತ್ತಿರುವುದು ಅಪಾಯಕಾರಿ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಬೇರೆಯವರು ಏನು ತಿನ್ನಬೇಕು ಎಂಬುದನ್ನು ಹೇರಲು ಪ್ರಯತ್ನಿಸುತ್ತಿದ್ದಾರೆ ಎಂದಿದ್ದಾರೆ.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಉಗ್ರವಾದದ ವಿರುದ್ಧ ಜಂಟಿ ಹೋರಾಟ : ಮೋದಿ ಘೋಷಣೆ
ಮೆಹಂದಿ ಗಿಡ ಪೂಜಿಸಿದರೆ ಇಷ್ಟೆಲ್ಲಾ ಲಾಭವಿದೆಯೇ?: ಪೂಜೆಗೆ ಇದೇ ಸರಿಯಾದ ದಿನ!