ದಲಿತ ಎಂದು ನನಗೆ ವಿಪಕ್ಷ ಸ್ಥಾನ ಕೊಡಲಿಲ್ಲ

First Published May 4, 2018, 8:26 AM IST
Highlights

‘ಮೊಹಬ್ಬತ್ ಮೇರಾ ಸಾಥ್, ಶಾದಿ ದೂಸ್ರೋಂಕೆ ಸಾಥ್(ಪ್ರೀತಿ ನನ್ನ ಜೊತೆ, ವಿವಾಹ ಬೇರೊಬ್ಬರ ಜೊತೆ)’ ಎಂಬಂತಿದೆ ಮೋದಿ ನೀತಿ. ಪ್ರಧಾನಿ ಮೋದಿ ಹಾಗೂ ಬಿಜೆಪಿ ದಲಿತರನ್ನು ಪ್ರೀತಿಸುವಂಥ ನಾಟಕವಾಡುತ್ತ ದಲಿತರನ್ನು ಹತ್ತಿಕ್ಕುವ ಪ್ರಯತ್ನ ನಡೆಸಿದ್ದು ಇದೀಗ ಬಟಾಬಯಲಾಗಿದೆ.

ಹುಮನಾಬಾದ್: ‘ಮೊಹಬ್ಬತ್ ಮೇರಾ ಸಾಥ್, ಶಾದಿ ದೂಸ್ರೋಂಕೆ ಸಾಥ್(ಪ್ರೀತಿ ನನ್ನ ಜೊತೆ, ವಿವಾಹ ಬೇರೊಬ್ಬರ ಜೊತೆ)’ ಎಂಬಂತಿದೆ ಮೋದಿ ನೀತಿ. ಪ್ರಧಾನಿ ಮೋದಿ ಹಾಗೂ ಬಿಜೆಪಿ ದಲಿತರನ್ನು ಪ್ರೀತಿಸುವಂಥ ನಾಟಕವಾಡುತ್ತ ದಲಿತರನ್ನು ಹತ್ತಿಕ್ಕುವ ಪ್ರಯತ್ನ ನಡೆಸಿದ್ದು ಇದೀಗ ಬಟಾಬಯಲಾಗಿದೆ.

ನಾನು ದಲಿತ ಎಂಬ ಕಾರಣಕ್ಕೆ ಕೇಂದ್ರದಲ್ಲಿ ವಿರೋಧ ಪಕ್ಷದ ನಾಯಕ ಸ್ಥಾನ ಸಿಗದಂತೆ ಬಿಜೆಪಿ ವ್ಯವಸ್ಥಿತವಾಗಿ ನೋಡಿಕೊಂಡಿದೆ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಗಂಭೀರ ಆರೋಪ ಮಾಡಿದ್ದಾರೆ.

ಕಾಂಗ್ರೆಸ್ ಕಾರ‌್ಯಕರ್ತರ ಸಭೆಯಲ್ಲಿ ಮೋದಿಯವರ ‘ದಲಿತ ಸಿಎಂ’ ಹೇಳಿಕೆಗೆ ತಿರುಗೇಟು ನೀಡಿದ ಅವರು, ಮೋದಿ ಅವರು ದಲಿತ ಉದ್ಧಾರದ  ಮಾತುಗಳನ್ನಾಡುತ್ತಾರೆ, ಆದರೆ ಅದರಲ್ಲಿ ಯಾವುದೇ ಹುರುಳಿಲ್ಲ ಎಂಬುವುದಕ್ಕೆ ನನಗೆ ವಿರೋಧ ಪಕ್ಷದ ಸ್ಥಾನ ಸಿಗದಂತೆ ನೋಡಿಕೊಂಡಿದ್ದೇ ಸಾಕ್ಷಿ ಎಂದರು. 

click me!