ಮುಂಬೈಗೆ ಹಾರಿದ ಅತೃಪ್ತರು.. ಊಟೋಪಚಾರ ನೋಡ್ಕೋತಾರೆ ಬಿಜೆಪಿಯ ಈ ಶಾಸಕರು!

By Web Desk  |  First Published Jul 6, 2019, 6:44 PM IST

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ 14 ಅತೃಪ್ತ ಶಾಸಕರು ಮುಂಬೈ ಅಥವಾ ಗೋವಾಕ್ಕೆ ತೆರಳುವುದು ಪಕ್ಕಾ ಆಗಿದೆ. ಈ ಎಲ್ಲ ಶಾಸಕರ ಉಸ್ತುವಾರಿಯನ್ನು ಬಿಜೆಪಿಯ ಶಾಸಕರೊಬ್ಬರೆ ನೋಡಿಕೊಳ್ಳಲಿದ್ದಾರೆ.


ಬೆಂಗಳೂರು[ಜು. 06]  ಕರ್ನಾಟಕದಲ್ಲಿ ಇದ್ದಕ್ಕಿದ್ದಂತೆ ರಾಜಕೀಯ ಕ್ಷಿಪ್ರ ಕ್ರಾಂತಿ ಆಗಿಹೋಗಿದೆ. ಎಲ್ಲ ಊಹಾಪೋಹಗಳನ್ನು ಮೀರಿ ಬೆಂಗಳೂರು ಶಾಸಕರು ಆಗಮಿಸಿ ರಾಜೀನಾಮೆ ನೀಡಿದ್ದಾರೆ’.

ಹಾಗಾದರೆ ರಾಜೀನಾಮೆ ನೀಡಿರುವ ಶಾಸಕರು ಮುಂದೆ ಎಲ್ಲಿಗೆ ತೆರಳುತ್ತಿದ್ದಾರೆ। ಅವರನ್ನು ನೋಡಿಕೊಳ್ಳುವವರು ಯಾರು?  ಶಾಸಕರು ಮುಂಬೈ ಅಥವಾ ಗೋವಾಕ್ಕೆ ತೆರಳುವುದು ಪಕ್ಕಾ ಆಗಿದೆ. ಮುಂಬೈ ನಲ್ಲಿ ಮಳೆ ಇರುವುದುದರಿಂದ ಗೋವಾಕ್ಕೆ ತೆರಳುವ ಸಾಧ್ಯತೆಯೇ ಹೆಚ್ಚಾಗಿದೆ. ಆದರೆ ಇದೆಲ್ಲದಕ್ಕಿಂತ ಮುಖ್ಯವಾದ ವಿಚಾರ ಎಂದರೆ ರಾಜೀನಾಮೆ ನೀಡಿರುವ ಶಾಸಕರ ಉಸ್ತುವಾರಿಯನ್ನು ಬಿಜೆಪಿಯ ಶಾಸಕರೊಬ್ಬರೆ ನೋಡಿಕೊಳ್ಳುತ್ತಿದ್ದಾರೆ.

Tap to resize

Latest Videos

ರಾಜೀನಾಮೆ ಪರ್ವ ಎಲ್ಲಿಂದ ಎಲ್ಲಿವರೆಗೆ? 

ಮಲ್ಲೇಶ್ವರಂ ಶಾಸಕ ಡಾ. ಅಶ್ವಥ್ ನಾರಾಯಣ ಉಸ್ತುವಾರಿ ಜವಾಬ್ದಾರಿ ಹೊತ್ತಿದ್ದಾರೆ.ಅವರ ಜತಯೆಗೆ  ಬಿಜೆಪಿಯ ಎಲ್ಲಾ ಆರ್ಥಿಕ ವ್ಯವಹಾರ ನೋಡಿಕೊಳ್ಳುವ ಪಳನಿ ಸಹ ಇದ್ದಾರೆ ಎನ್ನಲಾಗಿದೆ.

ಈ ಹಿಂದೆ ಅತೃಪ್ತ ಶಾಸಕರು ಮುಂಬೈಗೆ ತೆರಳಿದ್ದಾಗಲೂ ಅಶ್ವಥ್ ನಾರಾಯಣ ಅವರೇ ಉಸ್ತುವಾರಿ ವಹಿಸಿಕೊಂಡಿದ್ದು ಜಗಜ್ಜಾಹೀರಾಗಿತ್ತು. ಅಂದು ಕಾಂಗ್ರೆಸ್ ಶಾಸಕರಾಗಿದ್ದ ಡಾ. ಉಮೇಶ್ ಜಾಧವ್ ಕಾಂಗ್ರೆಸ್ ಗೆ ಗುಡ್ ಬೈ  ಹೇಳಿ ಬಿಜೆಪಿ  ಸೇರಿದ್ದರು. ಅಲ್ಲಿಂದ ನಂತರ ಕಲಬುರಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ  ಅವರನ್ನು ಸೋಲಿಸಿ ಸಂಸದರಾಗಿ ಆಯ್ಕೆಯಾಗಿದ್ದರು.

click me!