
ನವದೆಹಲಿ (ಡಿ.27): ಅಲ್ ಖೈದಾ ಸಂಘಟನೆಯು ಇದೀಗ ಹೊಸ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಆಘಾತಕಾರಿ ವಿಚಾರಗಳನ್ನು ತಿಳಿಸಿದೆ.
ಇದೀಗ ಭಾರತೀಯ ಮೆಟ್ರೋ ಸಿಟಿಗಳ ಮೇಲೆ ಈ ಉಗ್ರ ಸಂಘಟನೆಯ ಕಣ್ಣು ಬಿದ್ದಿದೆ. ಅಲ್ಲದೇ ತಾವು ಬೆಂಗಳೂರು, ಕೋಲ್ಕತಾ ಹಾಗೂ ದಿಲ್ಲಿಯ ಮೇಲೆ ದಾಳಿ ಮಾಡಿದಾಗ ಅಲ್ಲಿ ಭದ್ರತೆಯನ್ನು ಹೆಚ್ಚಿಸಲಾಗುತ್ತದೆ.
ಆಗ ಕಾಶ್ಮೀರದಲ್ಲಿ ಭದ್ರತೆ ದುರ್ಬಲವಾಗುತ್ತದೆ. ಆಗ ಅದನ್ನು ವಶಕ್ಕೆ ಪಡೆದುಕೊಳ್ಳುವು ಹೆಚ್ಚು ಸುಲಭವಾಗಲಿದೆ ಎಂದು ಈ ವಿಡಿಯೋದಲ್ಲಿ ಹೇಳಲಾಗಿದೆ.
ಕಳೆದ ಒಂದು ದಿನದ ಹಿಂದೆ ಉಗ್ರ ಸಂಘಟನೆಯ ಮುಖಂಡನೋರ್ವ ವಿಡಿಯೋದಲ್ಲಿ ಈ ವಿಚಾರವನ್ನು ಹೇಳಿರುವುದು ಇದೀಗ ಬೆಳಕಿಗೆ ಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.