
ನವದೆಹಲಿ : ಆಕಾಶದಲ್ಲಿ ಜ.31ಕ್ಕೆ ವಿಶೇಷ ವಿದ್ಯಮಾನವೊಂದು ಸಂಭವಿಸಲಿದೆ. ಬರೋಬ್ಬರು 150 ವರ್ಷಗಳ ಬಳಿಕ ಇಂತದ್ದೊಂದು ಸಂಗತಿ ಆಕಾಶದಲ್ಲಿ ಜರುಗುತ್ತಿದೆ.
ಜನವರಿ 31ಕ್ಕೆ ಚಂದ್ರ ಗ್ರಹಣ ಸಂಭವಿಸಲಿದ್ದು, ಅಂದು ಚಂದ್ರ ಸಂಪೂರ್ಣ ಕಿತ್ತಳೆ ಬಣ್ಣದಲ್ಲಿ ಕಂಗೊಳಿಸಲಿದ್ದಾರೆ. ಈ ವರ್ಷದ ಮೊದಲ ಗ್ರಹಣ ಇದಾಗಿದ್ದು, ವಿಶೇಷ ರೀತಿಯಲ್ಲಿ ಗ್ರಹಣವು ಗೋಚರವಾಗುತ್ತಿದೆ.
ಈ ಗ್ರಹಣವು ವಿಶ್ವದ ಅನೇಕ ದೇಶಗಳಲ್ಲಿ ಕಾಣಿಸಲಿದೆ. ಭಾರತ, ರಷ್ಯಾ, ಆಸ್ಟ್ರೇಲಿಯಾ, ಚೀನಾ, ಥೈಲ್ಯಾಂಡ್’ನಲ್ಲಿ ಚಂದ್ರನನ್ನು ಕಣ್ತುಂಬಿಕೊಳ್ಳಬಹುದಾಗಿದೆ.
ಅಲ್ಲದೇ ಭೂಮಿಗೆ ಸಮೀಪದಲ್ಲಿಯೇ ಚಂದ್ರ ಕಾಣಿಸಲಿದ್ದಾನೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.