ಉಗ್ರರಿಂದ ಹತ್ಯೆಯಾದ ಯೋಧ ಔರಂಗಜೇಬ್‌ಗೆ ಅತ್ಯುನ್ನತ ಗೌರವ

By Web DeskFirst Published Aug 15, 2018, 11:38 AM IST
Highlights

ಈದ್‌ ಹಬ್ಬದ ಸಲುವಾಗಿ ಮನೆಗೆ ಹೋಗುವಾಗ ಉಗ್ರರಿಂದ ಅಪಹರಿಸಲ್ಪಟ್ಟು ಭೀಕರ ಹತ್ಯೆಗೀಡಾಗಿದ್ದ ರೈಫಲ್‌ಮ್ಯಾನ್‌ ಔರಂಗಜೇಬ್‌ ಅವರೂ ಶೌರ್ಯ ಪದಕದ ಗೌರವಕ್ಕೆ ಪಾತ್ರರಾಗಿದ್ದಾರೆ. 

ನವದೆಹಲಿ: ದಕ್ಷಿಣ ಕಾಶ್ಮೀರದ ಶೋಫಿಯಾನ್‌ನಲ್ಲಿ ಜನವರಿಯಲ್ಲಿ ಕಲ್ಲೆಸೆತಗಾರರ ಮೇಲೆ ಗುಂಡಿನ ದಾಳಿ ಮಾಡಿ ವಿವಾದಕ್ಕೆ ಗುರಿಯಾಗಿದ್ದ ಮೇಜರ್‌ ಆದಿತ್ಯ ಕುಮಾರ್‌ ಸೇರಿದಂತೆ 20 ಭದ್ರತಾ ಸಿಬ್ಬಂದಿ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ನೀಡಲಾಗುವ ಶೌರ್ಯಚಕ್ರ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. 

ಈದ್‌ ಹಬ್ಬದ ಸಲುವಾಗಿ ಮನೆಗೆ ಹೋಗುವಾಗ ಉಗ್ರರಿಂದ ಅಪಹರಿಸಲ್ಪಟ್ಟು ಭೀಕರ ಹತ್ಯೆಗೀಡಾಗಿದ್ದ ರೈಫಲ್‌ಮ್ಯಾನ್‌ ಔರಂಗಜೇಬ್‌ ಅವರೂ ಶೌರ್ಯ ಪದಕದ ಗೌರವಕ್ಕೆ ಪಾತ್ರರಾಗಿದ್ದಾರೆ. 

ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಶೌರ್ಯ ಪ್ರಶಸ್ತಿ ವಿಜೇತರ ಅಧಿಕೃತ ಪಟ್ಟಿಮಂಗಳವಾರ ಬಿಡುಗಡೆಯಾಗಿದೆ. ಅಲ್ಲದೆ, ಒಟ್ಟು 131 ಇತರ ಶೌರ್ಯ ಪ್ರಶಸ್ತಿಗಳೂ ಘೋಷಣೆಯಾಗಿವೆ. ಸಶಸ್ತ್ರ ಪಡೆಗಳು ಮತ್ತು ಅರೆಸೇನಾ ಪಡೆಗಳ ಸಿಬ್ಬಂದಿಗೆ ನೀಡಲಾಗುವ ಒಂದು ಕೀರ್ತಿಚಕ್ರ, 20 ಶೌರ್ಯ ಚಕ್ರ, 11 ನೌಕಾ ಸೇನಾ ಪದಕಗಳು, ಮೂರು ವಾಯು ಸೇನಾ ಪದಕಗಳು, 93 ಸೇನಾ ಪದಕಗಳೂ ಇದರಲ್ಲಿ ಸೇರಿವೆ.

ಪ್ರತಿಷ್ಠಿತ ರಾಷ್ಟ್ರಪತಿ ಪದಕ ಪಟ್ಟಿ ಪ್ರಕಟ

18 ರಾಜ್ಯ ಪೊಲೀಸರಿಗೆ ರಾಷ್ಟ್ರಪತಿ ಪದಕ ಗೌರವ

ಡಿ. ರಂಗಪ್ಪ .ಗೌರಿ ಹತ್ಯ ತನಿಖಾ ತಂಡ

ಕರಿಬಸವನಗೌಡ ಎಸಿಪಿ ಮೈಕೋ ಲೇಔಟ್

ಟಿ.‌ಕೊದಂಡರಾಮ ಡಿವೈಎಸ್ಪಿ ಎಸಿಬಿ

ಸಿ.‌ಗೋಪಾಲ್. ಎಸಿಪಿ ಮೈಸೂರ್

 

ಉಮೇಶ್ ಜಿ.‌ಸೇಟ್ ಡಿ ವೈಎಸ್ಪಿ ಮೈಸೂರು

ಸುಧೀರ್ ಶೆಟ್ಟಿ ಡಿ ವೈಎಸ್ಪಿ

click me!