ಸ್ಟೆರ್ಲೈಟ್ ಕಂಪನಿ ನೆಲೆ ವಿಸ್ತರಣೆಗೆ ಮದ್ರಾಸ್ ಹೈಕೋರ್ಟ್ ತಡೆ

First Published May 23, 2018, 3:55 PM IST
Highlights

ಮಹತ್ವದ ಬೆಳವಣಿಗೆಯೊಂದರಲ್ಲಿ ತಮಿಳುನಾಡಿನ ಟುಟಿಕೊರಿನ್ ವೇದಾಂತ ಸ್ಟೆರ್ಲೈಟ್ ಕಂಪನಿ ತನ್ನ ನೆಲೆ ವಿಸ್ತರಣೆಗೆ ಮದ್ರಾಸ್ ಹೈಕೋರ್ಟ್ ತಡೆ ನೀಡಿದೆ. ಸ್ಟೆರ್ಲೈಟ್ ಕಂಪನಿ ಅನುಮತಿ ರದ್ದತಿ ಕೋರಿ ಅಲ್ಲಿನ ರೈತರು ಭಾರೀ ಪ್ರತಿಭಟನೆ ನಡೆಸುತ್ತಿದ್ದರು.

ಚೆನೈ (ಮೇ. 23) ಮಹತ್ವದ ಬೆಳವಣಿಗೆಯೊಂದರಲ್ಲಿ ತಮಿಳುನಾಡಿನ ಟುಟಿಕೊರಿನ್ ವೇದಾಂತ ಸ್ಟೆರ್ಲೈಟ್ ಕಂಪನಿ ತನ್ನ ನೆಲೆ ವಿಸ್ತರಣೆಗೆ ಮದ್ರಾಸ್ ಹೈಕೋರ್ಟ್ ತಡೆ ನೀಡಿದೆ. ಸ್ಟೆರ್ಲೈಟ್ ಕಂಪನಿ ಅನುಮತಿ ರದ್ದತಿ ಕೋರಿ ಅಲ್ಲಿನ ರೈತರು ಭಾರೀ ಪ್ರತಿಭಟನೆ ನಡೆಸುತ್ತಿದ್ದರು.

ಈ ವೇಳೆ ನಡೆದ ಹಿಂಸಾಚಾರಕ್ಕೆ ಪ್ರತಿಯಾಗಿ ಪೊಲೀಸರು ಗೋಲಿಬಾರ್ ನಡೆಸಿದ್ದರು. ಇದೀಗ ಕಂಪನಿ ತನ್ನ ನೆಲೆ ವಿಸ್ತರಿಸಲು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ತಿರಸ್ಕರಿಸಿದೆ. ಅಲ್ಲದೇ ಯಾವುದೇ ನಿರ್ಧಾರಕ್ಕೆ ಬರುವ ಮುನ್ನ ಸಾರ್ವಜನಿಕರ ಅಭಿಪ್ರಾಯ ಪಡೆಯುವಂತೆ ಸೂಚನೆ ನೀಡಿದೆ.

ಇನ್ನು ನಿನ್ನೆ ನಡೆದ ಪೊಲೀಸ್ ಗೋಲಿಬಾರ್ ನಲ್ಲಿ ಮೃತಪಟ್ಟವರ ಸಂಖ್ಯೆ 11ಕ್ಕೆ ಏರಿಕೆಯಾಗಿದ್ದು, ಟುಟಿಕೊರಿನ್ ನಲ್ಲಿ ನಿರವ ಮೌನ ಆವರಿಸಿದೆ. ಪ್ರತಿಭಟನಾನಿರತರ ಮೇಲೆ ಗುಂಡು ಹಾರಿಸಿದ ಪೊಲೀಸರ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಅಲ್ಲದೇ ವಿಷಾನಿಲ ಹರಡುತ್ತಿರುವ ಕಂಪನಿ ವಿರುದ್ದ ಪ್ರತಿಭಟನೆ ಮುಂದುವರೆಸುವುದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ.

click me!