
ಚೆನ್ನೈ (ಜು.25): ತಮಿಳುನಾಡಿನ ಎಲ್ಲಾ ಶಾಲಾ-ಕಾಲೇಜುಗಳು, ಸರ್ಕಾರಿ ಕಚೇರಿಗಳು, ಖಾಸಗಿ ಉದ್ದಿಮೆಗಳಲ್ಲಿ ವಂದೇ ಮಾತರಂ ಹಾಡುವುದನ್ನು ಮದ್ರಾಸ್ ಹೈಕೋರ್ಟ್ ಕಡ್ಡಾಯಗೊಳಿಸಿದೆ. ಶಾಲೆಗಳಲ್ಲಿ ವಾರಕ್ಕೊಂದು ದಿನ ಸೋಮವಾರ ಅಥವಾ ಶುಕ್ರವಾರ ಹಾಡಬೇಕು. ಉಳಿದಂತೆ ಸರ್ಕಾರಿ ಕಛೇರಿಗಳು, ಸಂಸ್ಥೆಗಳು, ಖಾಸಗಿ ಕಂಪನಿಗಳಲ್ಲಿ ತಿಂಗಳಿಗೊಮ್ಮೆ ಹಾಡಬೇಕು ಎಂದು ನ್ಯಾ. ಎಂ.ವಿ ಮುರುಳಿಧರನ್ ನೇತೃತ್ವದ ಪೀಠ ಆದೇಶ ನೀಡಿದೆ.
ರಾಜ್ಯದ ಎಲ್ಲಾ ಖಾಸಗಿ ಹಾಗೂ ಸರ್ಕಾರಿ ಶಾಲಾ ವಿದ್ಯಾರ್ಥಿಗಳು ವಾರಕ್ಕೆರಡು ಬಾರಿ ಸೋಮವಾರ ಹಾಗೂ ಶುಕ್ರವಾರ ವಂದೇ ಮಾತರಂ ಹಾಡುವುದನ್ನು ಆಯಾ ಶಾಲೆಗಳು ಖಚಿತಪಡಿಸಬೇಕು. ಬಂಗಾಳಿ ಅಥವಾ ಸಂಸ್ಕೃತದಲ್ಲಿರುವ ಇದನ್ನು ಹಾಡುವುದು ಯಾರಿಗಾದರೂ ಕಷ್ಟವಾದಲ್ಲಿ ತಮಿಳಿಗೂ ಭಾಷಾಂತರ ಮಾಡಲಾಗಿದೆ. ಅದನ್ನು ಹಾಡಬಹುದು ಎಂದು ನ್ಯಾ. ಎಂ.ವಿ ಮುರುಳೀಧರನ್ ಹೇಳಿದ್ದಾರೆ.
ಬಂಗಾಳಿಯಲ್ಲಿರುವ ವಂದೇ ಮಾತರಂನನ್ನು ತಮಿಳು ಮತ್ತು ಇಂಗ್ಲೀಷ್’ಗೆ ಭಾಷಾಂತರ ಮಾಡಿ ಸರ್ಕಾರದ ವೆಬ್’ಸೈಟ್ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್’ಲೋಡ್ ಮಾಡಬೇಕೆಂದು ಸಾರ್ವಜನಿಕ ಮಾಹಿತಿ ನಿರ್ದೇಶಕರಿಗೆ ನಿರ್ದೇಶಿಸಲಾಗಿದೆ.
ಏತನ್ಮಧ್ಯೆ, ಶಾಲೆಗಳಲ್ಲಿ ವಂದೇ ಮಾತರಂನನ್ನು ಕಡ್ಡಾಯಗೊಳಿಸುವ ಬಗ್ಗೆ ಸುಪ್ರೀಂಕೋರ್ಟ್’ನಲ್ಲಿ ವಿಚಾರಣೆ ನಡೆಯುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.